AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವೈಕ್ಯತೆ ದಿನಾಚರಣೆ ಬಗ್ಗೆ 2 ಮಠಗಳ ಮಧ್ಯೆ ಸಂಘರ್ಷ: ಸಿದ್ಧರಾಮ ಶ್ರೀಗಳು ಹೇಳಿದ್ದಿಷ್ಟು

ಉತ್ತರ ಕರ್ನಾಟಕದ ಎರಡು ಪ್ರಸಿದ್ಧಿ ಮಠಗಳಾದ ಗದಗ ತೋಂಟದಾರ್ಯ ಮಠ ಮತ್ತು ಶಿರಹಟ್ಟಿ ಫಕೀರೇಶ್ವರ ಮಠಗಳ ಮಧ್ಯೆ ಭಾವೈಕ್ಯತೆ ವಿಚಾರವಾಗಿ ಸಂಘರ್ಷ ಏರ್ಪಟ್ಟಿದೆ. ಈ ವಿಚಾರವಾಗಿ ಗದಗ ನಗರದಲ್ಲಿ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಪ್ರತಿಕ್ರಿಯಿಸಿದ್ದು, ಕರಾಳ ದಿನಾಚರಣೆ ಮಾಡುವವರಿಗೆ ಸರ್ಕಾರ ಪ್ರತಿಬಂಧ ಹೇರಬೇಕು. ಭಾವೈಕ್ಯತೆ ದಿನಾಚರಣೆ ಮಾಡುವುದು ಸರ್ಕಾರ ತಪ್ಪು ಅಂದ್ರೆ ಕೈಬಿಡ್ತೇವೆ ಎಂದಿದ್ದಾರೆ.

ಭಾವೈಕ್ಯತೆ ದಿನಾಚರಣೆ ಬಗ್ಗೆ 2 ಮಠಗಳ ಮಧ್ಯೆ ಸಂಘರ್ಷ: ಸಿದ್ಧರಾಮ ಶ್ರೀಗಳು ಹೇಳಿದ್ದಿಷ್ಟು
ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Feb 19, 2024 | 10:39 PM

Share

ಗದಗ, ಫೆಬ್ರವರಿ 19: ಭಾವೈಕ್ಯತೆ ದಿನಾಚರಣೆ ವಿಚಾರಕ್ಕೆ ಗದಗ ತೋಂಟದಾರ್ಯ ಮಠ (Tontadarya Matha) ಮತ್ತು ಶಿರಹಟ್ಟಿ ಫಕೀರೇಶ್ವರ ಮಠದ (Shirahatti Fakkireshwar Mutt) ನಡುವೆ ಸಂಘರ್ಷ ಉಂಟಾಗಿದೆ. ಸದ್ಯ ಈ ವಿಚಾರವಾಗಿ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಪ್ರತಿಕ್ರಿಯಿಸಿದ್ದು, ಲಿಂಗಾಯತ ಪ್ರತ್ಯೇಕ ಧರ್ಮವೇ ಅದನ್ನು ಯಾರೂ ಒಡೆಯಬೇಕಿಲ್ಲ. ವೀರಶೈವ ಎನ್ನುವುದು ಲಿಂಗಾಯತ ಧರ್ಮದ ಒಂದು ಭಾಗ ಎಂದು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಭಾವೈಕ್ಯತೆ ದಿನ ಘೋಷಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸುಮ್ಮನಾಗಿದ್ದರು. ರಾಜಕಾರಣಿಗಳು ಯಾರ್ಯಾರಿಗೆ ಮಣಿಯುತ್ತಾರೆ ಗೊತ್ತಿಲ್ಲ. ಯಾರೋ ಒಬ್ಬರಿಗೆ ಮಣಿದು ಆಚರಣೆ ಕೈಬಿಟ್ಟರು. ಹಿಂದೂ ಧರ್ಮದ ಸಂಸ್ಥಾಪಕ ಯಾರು? ಪರ್ಷಿಯನ್ನರು ಹಿಂದೂ ಅಂತಾ ಕರೆದರು ಎಂದು ಹೇಳಿದ್ದಾರೆ.

ಭಾವೈಕ್ಯತೆ ದಿನಾಚರಣೆ ಮಾಡುವುದು ಸರ್ಕಾರ ತಪ್ಪು ಅಂದರೆ ಕೈಬಿಡುತ್ತೇವೆ: ಸಿದ್ಧರಾಮ ಶ್ರೀಗಳು

ಭಾವೈಕ್ಯತೆ ದಿನ ಆಚರಿಸಿದರೆ ಫಕೀರೇಶ್ವರ ಮಠದ ಭಕ್ತರಿಂದ ಕರಾಳ ದಿನಾಚರಣೆ ವಿಚಾರವಾಗಿ ಮಾತನಾಡಿದ ಅವರು, ಅವರ ಕರಾಳ ದಿನಾಚರಣೆಗೆ ನಾವು ಏನೂ ಮಾಡಕ್ಕಾಗಲ್ಲ. ನಮಗೆ ರಕ್ಷಣೆ ಬೇಕು ಅಂತಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕರಾಳ ದಿನಾಚರಣೆ ಮಾಡುವವರಿಗೆ ಸರ್ಕಾರ ಪ್ರತಿಬಂಧ ಹೇರಬೇಕು. ಭಾವೈಕ್ಯತೆ ದಿನಾಚರಣೆ ಮಾಡುವುದು ಸರ್ಕಾರ ತಪ್ಪು ಅಂದರೆ ಕೈಬಿಡುತ್ತೇವೆ ಎಂದಿದ್ದಾರೆ.

ಫೆಬ್ರುವರಿ 21 ರಂದು ಗದಗ ತೋಂಟದಾರ್ಯ ಮಠದ ವತಿಯಿಂದ ತೋಂಟದ ಲಿಂಗೈಕ್ಯ ಡಾ. ಸಿದ್ದಲಿಂಗ ಶ್ರೀಗಳ ಜಯಂತಿಯಂದು ಭಾವೈಕ್ಯತೆ ದಿನವಾಗಿ ಆಚರಣೆ ಮಾಡಲು ಭರ್ಜರಿ ತಯಾರಿ ಮಾಡಿಕೊಂಡಿದೆ. ಇದು ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀಗಳು ಹಾಗೂ ಭಕ್ತರನ್ನು ಕೆರಳುವಂತೆ ಮಾಡಿದೆ. ತೋಂಟದ ಸಿದ್ದಲಿಂಗ ಶ್ರೀಗಳ ಜಯಂತಿಯನ್ನ ಭಾವೈಕ್ಯತೆ ದಿನವನ್ನಾಗಿ ಆಚರಿಸುತ್ತಿರುವುದಕ್ಕೆ ಶಿರಹಟ್ಟಿ ಫಕೀರೇಶ್ವರ ಮಠ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಇದನ್ನೂ ಓದಿ: ತೋಂಟದಾರ್ಯ ಮಠ v/s ಶಿರಹಟ್ಟಿ ಫಕೀರೇಶ್ವರ ಮಠ; ಸಿದ್ದಲಿಂಗ ಸ್ವಾಮೀಜಿ ಜಯಂತಿಯಂದು ಕರಾಳ ದಿನ ಆಚರಿಸುವ ಎಚ್ಚರಿಕೆ ಕೊಟ್ಟ ಫಕೀರ ದಿಂಗಾಲೇಶ್ವರ ಶ್ರೀ

ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಸುದ್ದಿಗೋಷ್ಠಿ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಭಾವೈಕ್ಯತೆ ದಿನ ಆಚರಣೆ ಮಾಡದಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಆಚರಣೆ ಮಾಡಿದರೆ ಅದು ಶಿರಹಟ್ಟಿ ಮಠಕ್ಕೆ ಹಾಗೂ ಭಕ್ತರ ಪಾಲಿಗೆ ಕರಾಳ ದಿನವಾಗಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಗದಗ-ಬೆಟಗೇರಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರಿಂದ ಅದ್ಧೂರಿ ಶಿವಾಜಿ ಜಯಂತ್ಯುತ್ಸವ, ಬಿಗಿ ಪೊಲೀಸ್ ಭದ್ರತೆ

ಶಿರಹಟ್ಟಿ ಫಕೀರೇಶ್ವರ ಮಠ ಹಿಂದೂ-ಮುಸ್ಲಿಂ ಭಾವೈಕ್ಯತೆ ಮಠವಾಗಿದೆ. ಭಾವೈಕ್ಯತೆ ಮಠ ಎನ್ನುವುದಕ್ಕೆ ಸಾಕಷ್ಟು ಕುರುಹುಗಳಿವೆ. ಆದರೆ ತೋಂಟದಾರ್ಯ ಮಠ ವಿರಕ್ತಮಠ ಮಠದ ಸಂಪ್ರದಾಯ ಹೊಂದಿದೆ. ಫಕೀರೇಶ್ವರ ಮಠದ ಭಾವೈಕ್ಯತೆಯ ಸಂಪ್ರದಾಯವಾಗಿದೆ. ಫಕೀರೇಶ್ವರ ಮಠ ಹಿಂದೂ-ಮುಸ್ಲಿಂ ಎರಡು ಸಂಪ್ರದಾಯ ಹೊಂದಿರು ಮಠವಾಗಿದೆ. ಹೀಗಾಗಿ ಭಾವೈಕ್ಯತೆ ದಿನ ಆಚರಣೆ ನಮ್ಮ ವಿರೋಧ ಇದೆ ಎಂದಿದ್ದಾರೆ.

ಸಂಧಾನ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿದ್ದೇವೆ. ಮನವಿಗೆ ಸ್ಪಂದಿಸದಿದ್ದರೆ ತೋಂಟದಾರ್ಯ ಮಠದ ಬೀದಿಯಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Sanjeev Pandre
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು