ಹೈಮಾಸ್ಕ್ ಬೀದಿ ದೀಪ ಟೆಂಡರ್ ವಿಚಾರ ಸದನದಲ್ಲಿ ಜಟಾಪಟಿ; ಸದನದ ಬಾವಿಗಿಳಿದು ಪೌರಾಯುಕ್ತ ವಿರುದ್ಧ ಕಾಂಗ್ರೆಸ್​ ಆಕ್ರೋಶ

ಟೆಂಡರ್ ಕರೆಯದೇ ಅವಳಿ ನಗರದಲ್ಲಿ 7 ಲೈಟ್ ಅಳವಡಿಸಲಾಗಿದೆ. ಹೈಮಾಸ್ಕ್ ಅಳವಡಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಸದನದ ಬಾವಿಗಿಳಿದು ಪೌರಾಯುಕ್ತರ ವಿರುದ್ಧ ‘ಕೈ’ ಆಕ್ರೋಶ ವ್ಯಕ್ತಪಡಿಸಿದೆ.

ಹೈಮಾಸ್ಕ್ ಬೀದಿ ದೀಪ ಟೆಂಡರ್ ವಿಚಾರ ಸದನದಲ್ಲಿ ಜಟಾಪಟಿ; ಸದನದ ಬಾವಿಗಿಳಿದು ಪೌರಾಯುಕ್ತ ವಿರುದ್ಧ ಕಾಂಗ್ರೆಸ್​ ಆಕ್ರೋಶ
ವಿಧಾನಸೌಧ (ಸಾಂದರ್ಭಿಕ ಚಿತ್ರ)
TV9kannada Web Team

| Edited By: Ayesha Banu

Mar 29, 2022 | 4:45 PM

ಗದಗ: ಗದಗ-ಬೆಟಗೇರಿ ನಗರಸಭೆ ಬಜೆಟ್ ಮಂಡನೆ ವೇಳೆ ಹೈಡ್ರಾಮಾ ನಡೆದಿದೆ. ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿಯಾಗಿದೆ. ಹೈಮಾಸ್ಕ್ ಲೈಟ್ ಟೆಂಡರ್ ವಿಚಾರವಾಗಿ ಸದನದಲ್ಲಿ ಗಲಾಟೆ ನಡೆದಿದೆ. ಟೆಂಡರ್ ಕರೆಯದೇ ಅವಳಿ ನಗರದಲ್ಲಿ 7 ಲೈಟ್ ಅಳವಡಿಸಲಾಗಿದೆ. ಹೈಮಾಸ್ಕ್ ಅಳವಡಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಸದನದ ಬಾವಿಗಿಳಿದು ಪೌರಾಯುಕ್ತರ ವಿರುದ್ಧ ‘ಕೈ’ ಆಕ್ರೋಶ ವ್ಯಕ್ತಪಡಿಸಿದೆ. ಟೆಂಡರ್ ಕರೆಯದೇ ಲೈಟ್ ಅಳವಡಿಸಿದ್ದೀರಿ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ವರ್ಷ ಯಾವುದೇ ಟೆಂಡರ್ ಕರೆದಿಲ್ಲ ಎಂದು ಬಿಜೆಪಿ ವಾದ ಮಾಡಿದೆ. ರೈಟಿಂಗ್ನಲ್ಲಿ ಕಾರಣ ಕೇಳಿದ್ದಕ್ಕೆ ಸದನದಲ್ಲಿ ಫುಲ್ ಹೈಡ್ರಾಮಾ ನಡೆದಿದ್ದು ಪೌರಾಯುಕ್ತರು ಮತ್ತು ನಗರಸಭೆ ಅಧ್ಯಕ್ಷೆ ಉಷಾ ದಾಸರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಲಾಗಿದೆ.

ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಂತೋಷ್ ಪಾಟೀಲ್ ಇನ್ನು ಕೆಲ ದಿನಗಳ ಹಿಂದೆ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಹಿಂದೂ ವಾಹಿನಿ ನ್ಯಾಷನಲ್ ಸಂಘಟನೆಯ ಕಾರ್ಯದರ್ಶಿ, ಬಿಜೆಪಿ ಕಾರ್ಯಕರ್ತ ಕೂಡ ಆಗಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ.ಪಾಟೀಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಪ್ರಧಾನಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.

ಸಚಿವ ಈಶ್ವರಪ್ಪ ಬೆಂಬಲಿಗರು ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. 108 ಕಾಮಗಾರಿಗಳನ್ನು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿ ಪೂರ್ಣಗೊಳಿಸಲಾಗಿದೆ. ಆದ್ರೆ ವರ್ಕ್ ಆರ್ಡರ್ ಕೊಟ್ಟಿಲ್ಲ. ಕಳೆದ ವರ್ಷದ ಫೆಬ್ರವರಿ 12 ರಂದು ಕೆಲಸ ಪೂರ್ಣಗೊಳಿಸಲು ಈಶ್ವರಪ್ಪ ಸೂಚಿಸಿದ್ದರು. ಆದರೆ ವರ್ಕ್ ಆರ್ಡರ್ ಕೊಟ್ಟಿಲ್ಲ, ಹಣವೂ ಬಿಡುಗಡೆ ಆಗಿಲ್ಲ. ಕಾಮಗಾರಿ ಪೂರ್ಣವಾಗಿ 1 ವರ್ಷ ಕಳೆದರೂ ಹಣ ನೀಡಿಲ್ಲ. ಸಾಲಕ್ಕೆ ಬಡ್ಡಿ ಪಾವತಿಸಿ ಹಣ ತಂದು ಕೆಲಸ ಪೂರ್ಣಗೊಳಿಸಿದ್ದೇವೆ. ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಸ್ಪಂದಿಸುತ್ತಿಲ್ಲ. ಇದನ್ನು ವೈಯಕ್ತಿಕವಾಗಿ ಪರಿಗಣಿಸಿ ಹಣ ಕೊಡಿಸುವಂತೆ ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಹಣ ನೀಡದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಉಳಿದಿರುವ ಮಾರ್ಗ ಎಂದು ಸಂತೋಷ ಪಾಟೀಲ್, ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿನಿಂದ ಆಹ್ವಾನ

JGM: ವಿಜಯ್ ದೇವರಕೊಂಡ- ಪುರಿ ಜಗನ್ನಾಥ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಅನೌನ್ಸ್​; ರಿಲೀಸ್​ ಯಾವಾಗ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada