ಅಂಗಮಾರಿ ರೋಗಕ್ಕೆ ಬೇಸತ್ತ ದಾಳಿಂಬೆ ಬೆಳೆಗಾರರು: ಬೇರೆ ಬೆಳೆಯತ್ತ ವಾಲಿದ ರೈತರು; ಗದಗ ಜಿಲ್ಲೆಯಲ್ಲಿ ದಾಳಿಂಬೆ ಬೆಳೆ ಇಳಿಮುಖ
ಗದಗ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯುವ ಕ್ಷೇತ್ರದ ವಿಸ್ತ್ರೀಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ 2015-16ರಲ್ಲಿ 400-500 ಹೇಕ್ಟರ್ ದಾಳಿಂಬೆ ಇದ್ದ ಕ್ಷೇತ್ರ ಈಗ ಶೇಕಡಾ 50ರಷ್ಟು ಕರಗಿಹೋಗಿದೆ.
ಗದಗ: ಗದಗ (Gadag) ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯುವ (Pomegranate crop) ಕ್ಷೇತ್ರದ ವಿಸ್ತ್ರೀಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ದಾಳಿಂಬೆ ಬೆಳೆಗೆ ಅಂಟಿದ ರೋಗಕ್ಕೆ ಬೇಸತ್ತ ರೈತರು ಪರ್ಯಾಯ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಗದಗ ಜಿಲ್ಲೆಯಲ್ಲಿ 2015-16ರಲ್ಲಿ 400-500 ಹೇಕ್ಟರ್ ದಾಳಿಂಬೆ ಇದ್ದ ಕ್ಷೇತ್ರ ಈಗ ಶೇಕಡಾ 50ರಷ್ಟು ಕರಗಿಹೋಗಿದೆ.
ರೋಗಕ್ಕೆ ಕಾರಣ
ಹವಾಮಾನ ವೈಪರೀತ್ಯದಿಂದಾಗಿ ದಾಳಿಂಬೆ ಬೆಳೆ ಹಾನಿಯಾಗುತ್ತಿದೆ. ರೋಗಗಳು ಹೆಚ್ಚಾಗಿ ರೈತರನ್ನು ಕಾಡುತ್ತಿವೆ. ಹೀಗಾಗಿ ದಾಳಿಂಬೆ ಸಹವಾಸವೇ ಬೇಡಪ್ಪ ಅಂತ ರೈತರು ಪರ್ಯಾಯ ಬೆಳೆ ಹಾದಿ ಹಿಡಿದಿದ್ದಾರೆ. ನುಗ್ಗೆ, ಪಪ್ಪಾಯಿ, ಪೇರಲ, ನಿಂಬೆ, ಮಾವು, ಕಬ್ಬು, ಸೂರ್ಯಕಾಂತಿ, ಶೇಂಗಾ ಹೀಗೆ ವಿವಿಧ ಬೆಳೆಗಳತ್ತ ರೈತರ ಹೊರಳಿದ್ದಾರೆ. ದಾಳಿಂಬೆಯಲ್ಲಿ ಕಾಣಿಸಿಕೊಳ್ಳುವ ದುಂಡಾನು ಅಂಗಮಾರಿ (ಚುಕ್ಕಿ) ರೋಗವು ಅನೇಕ ವರ್ಷಗಳಿಂದ ಬೆಳಗಾರರನ್ನು ಕಂಗೆಡಿಸಿದೆ. ದಾಳಿಂಬೆ ಬೆಳೆಯ ಕಾಂಡ, ಎಲೆ, ಹೂವು ಕಾಯಿಕಟ್ಟುವ ವೇಳೆಯಲ್ಲಿ ಅಂಗಮಾರಿ ರೋಗವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಔಷಧಿ ಕೊರತೆ
ಇದಕ್ಕೆ ಅಗತ್ಯ ಔಷಧ ಸಿಂಪಡಣೆ ಬಗ್ಗೆ ರೈತರಿಗೆ ಸೂಕ್ತ ಮಾರ್ಗದರ್ಶನವೂ ಇಲ್ಲ. ಕೆಲ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ನಿರೀಕ್ಷಿತ ಮಟ್ಟದ ಇಳುವರಿಯೂ ಕೈಸೇರುತ್ತಿಲ್ಲ. ಹಳೇ ಗಿಡ ತೆಗೆದು ಹೊಸ ದಾಳಿಂಬೆ ನೆಟ್ಟರೂ ರೋಗಬಾಧೆ ತಪ್ಪುತ್ತಿಲ್ಲ. ಹೀಗಾಗಿ ಗದಗ ಜಿಲ್ಲೆಯ ರೋಣ, ಗಜೇಂದ್ರಗಡ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕಿನ ಮಾಟರಂಗಿ, ಕುಂಟೋಜಿ, ನೆಲ್ಲೂರು, ಮೂಶಿಗೇರಿ, ಹೊಸಳ್ಳಿ ರೋಣ, ಜಕ್ಕಲಿ, ರಾಜೂರು ಸೇರಿ ವಿವಿಧ ಭಾಗಗಳಲ್ಲಿ ಹೆಚ್ಚಾಗಿ ದಾಳಿಂಬೆ ಬೆಳೆ ಬೆಳೆಯಲಾಗುತ್ತಿದೆ. ಇದು ಒಣ ಹವೆಯಲ್ಲಿ ಉತ್ತಮ ಇಳುವರಿ ನೀಡುವ ಬೆಳೆ.
ಅತಿಯಾದ ಮಳೆ ರೋಗಕ್ಕೆ ಕಾರಣ
ಅತಿಯಾದ ಮಳೆಯೇ ದುಂಡಾಣು ರೋಗಕ್ಕೆ ಕಾರಣ ಅನ್ನೋದ ತೋಟಗಾರಿ ಇಲಾಖೆ ಅಧಿಕಾರಿಗಳ ಮಾತು. ಹೀಗಾಗಿ ಕಳೆದ 2-3 ವರ್ಷಗಳಿಂದ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿರುವುದು ದಾಳಿಂಬೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಒಂದು ದಾಳಿಂಬೆ ತೋಟ ಕನಿಷ್ಠಿ 20 ವರ್ಷ ಫಸಲು ನೀಡುತ್ತದೆ. ಆದರೆ ಪ್ರತಿ ವರ್ಷ 4-5 ಗಿಡಗಳನ್ನು ತೆರವು ಮಾಡಿ ಹೊಸದಾಗಿ ಸಸಿಗಳನ್ನು ನೆಡುತ್ತಿದ್ದಾರೆ.
ಅತಿಯಾದ ರಾಸಾಯನಿಕದಿಂದಾಗಿ ಭೂಮಿಯ ಫಲವತ್ತತೆಯೂ ನಾಶವಾಗಿದೆ. ವರ್ಷಪೂರ್ತಿ ಫಸಲು ನೀಡುವ ಬೆಳೆಯನ್ನು ರೈತರು ಕೈಬಿಡುತ್ತಿದ್ದಾರೆ. ದಾಳಿಂಬೆಯ ಇತರ ಹಣ್ಣಿನ ಬೆಳಗಳಂತಲ್ಲ. ಇದಕ್ಕೆ ಪ್ರತಿ ತಿಂಗಳು ರಸಗೊಬ್ಬರ ಬೇಕು ಹಂತಹಂತವಾಗಿ ಔಷಧ ಸಿಂಪಡಣೆ, ರೈತರು ಹೆಚ್ಚನ ಶ್ರಮವಹಿಸಿ ಕೆಲಸ ಮಾಡಬೇಕು. ಇಳುವರಿ ಬರುವರೆಗೂ ಜೋಪಾನವಾಗಿದೆ ನೋಡಿಕೊಳ್ಳಬೇಕು ಹೆಚ್ಚಿನ ಮಳೆಯಾದರೆ ನಿರೀಕ್ಷಿತ ಇಳುವರಿ ಬರುವುದಿಲ್ಲ. ಚುಕ್ಕಿ ರೋಗದಿಂದ ಬಣ್ಣ ಹಾಳಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಗುತ್ತಿಲ್ಲ. ಕೆಲವೊಮ್ಮೆ ಉತ್ತಮ ಬೆಳೆ ಬಂದರೂ ಸೂಕ್ತ ಬೆಲೆ ಸಿಗುತ್ತಿಲ್ಲ. ಕೆಲವೊಮ್ಮೆ ಉತ್ತಮ ಬೆಳೆ ಬಂದರೂ ಸೂಕ್ತ ಬೆಲೆ ಸಿಗುವುದಿಲ್ಲ. ಬೆಳೆಯು ಮತ್ತು ಎಕ್ಕೆಎಲೆಗೆ ಯಾವುದೇ ಕೀಟಗಳು ಬಾಧಿಸುವುದಿಲ್ಲ. ಆದರೆ, ದುಂಡಾನು ರೋಗ ಬೇವು ಮತ್ತು ಎಕ್ಕೆ ಎಲೆಯನ್ನೂ ಬಿಡತ್ತಿಲ್ಲ. ರೋಗ ನಿಯಂತ್ರಣಕ್ಕೆ ಎಲ್ಲ ಬಗೆಯ ಕೀಟನಾಶಕ ಸಿಂಪಡಣೆ ಮಾಡಿದರೂ ಹತೋಟಿಗೆ ಬರಲಿಲ್ಲ. ಹೀಗಾಗಿ ತಾಲೂಕಿನ ರೈತರು ದಾಳಿಂಬೆ ಬಿಟ್ಟು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ ಅಂತ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಕಾಂತ ಕೋಟಿಮನಿ ಹೇಳಿದ್ದಾರೆ.
ರೈತ ಚೆನ್ನಪ್ಪ:-
ನಾಲ್ಕು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದೆ. ಸಾಕಷ್ಟು ಔಷಧೋಪಚಾರ ಮಾಡಿದರೂ ದುಂಡಾಣು ರೋಗ ಹತೋಟಿಕಗೆ ಬರಲಿಲ್ಲ. ಹಳೇ ಗಿಡಗಳನ್ನು ತೆಗೆದು ಹೊಸ ಸಸಿ ಹಾಕಿದರೂ ರೋಗದ ಕಾಟ ಹತೋಟಿಗೆ ಬರಲಿಲ್ಲ ಪರ್ಯಾಯವಾಗಿದೆ ಕಬ್ಬ ಬೆಳೆದಿದ್ದೇನೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.