ಜಾತ್ರೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ; ಮನೆಯ ಯಜಮಾನ ತಂದೆಯನ್ನೇ ಕೊಂದು ಪರಾರಿಯಾಗಿದ್ದ ಮಗ ಅರೆಸ್ಟ್
ಮಕ್ಕಳು ಚನ್ನಾಗಿರ್ಲಿ ಅಂತ ತಂದೆ ತಾಯಿ ತಮ್ಮ ಇಡೀ ಜೀವನವನ್ನು ಮುಡುಪಾಗಿಯಿಟ್ಟಿರುತ್ತಾರೆ. ಮುಪ್ಪಾದ ವಯಸ್ಸಿನಲ್ಲಿ ಹೆತ್ತ ಮಕ್ಕಳು ಆಸರೆಯಾಗುತ್ತಾರೆ ಎಂದು ಹತ್ತಾರು ಕನಸು ಕಂಡಿರುತ್ತಾರೆ. ಆದ್ರೆ ಇಲ್ಲೊಬ್ಬ ಮಗ ತನ್ನ ಹೆತ್ತ ತಂದೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.
ಗದಗ: ಆ ಗ್ರಾಮದಲ್ಲಿ ಎಲ್ಲರೂ ಜಾತ್ರೆಯ ಸಡಗರದಲ್ಲಿ ಇದ್ರು. ನಾಳೆ ಅದ್ಧೂರಿ ಜಾತ್ರೆ ಇದೆ ಅಂತ ಮನೆ ಮಠಗಳಿಗೆ ಸುಣ್ಣ ಬಣ್ಣ ಹಚ್ಚಿ ಹೊಸ ಹೊಸ ಬಟ್ಟೆಗಳನ್ನ ಹುಟ್ಟು ಸಂಭ್ರದಲ್ಲಿದ ಕನಸು ಕಾಣ್ತಿದ್ರು. ಆದ್ರೆ ಇಷ್ಟೆಲ್ಲಾ ಜಾತ್ರೆಯ ಸಂಭ್ರದಲ್ಲಿದ್ದ ಮನೆಯವರಿಗೆ ಬರಸಿಡಿಲು ಬಡಿದಂತಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಮನೆ ಯಜಮಾನನನ್ನೇ ಮನೆಯ ಮಗ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೈದಿದ್ದ. ಕ್ಷುಲ್ಲಕ ಕಾರಣಕ್ಕೆ ಹೆತ್ತುಹೊತ್ತು ಕಷ್ಟ ಪಟ್ಟು ಸಾಕಿ ಸಲುಹಿದ ಮಗನೇ ಮುಪ್ಪಾದ ವಯಸ್ಸಿನ ತಂದೆಯನ್ನು ಭೀಕರವಾಗಿ ಕೊಲೆ ಮಾಡಿ ನಾಪತ್ತೆಯಾಗಿದ್ದು ಸದ್ಯ ಆರೋಪಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಮಕ್ಕಳು ಚನ್ನಾಗಿರ್ಲಿ ಅಂತ ತಂದೆ ತಾಯಿ ತಮ್ಮ ಇಡೀ ಜೀವನವನ್ನು ಮುಡುಪಾಗಿಯಿಟ್ಟಿರುತ್ತಾರೆ. ಮುಪ್ಪಾದ ವಯಸ್ಸಿನಲ್ಲಿ ಹೆತ್ತ ಮಕ್ಕಳು ಆಸರೆಯಾಗುತ್ತಾರೆ ಎಂದು ಹತ್ತಾರು ಕನಸು ಕಂಡಿರುತ್ತಾರೆ. ಆದ್ರೆ ಇಲ್ಲೊಬ್ಬ ಮಗ ತನ್ನ ಹೆತ್ತ ತಂದೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಇಂಥದೊಂದು ಘಟನೆ ನಡೆದಿದೆ. 60 ವರ್ಷದ ಭರಮಪ್ಪ ದೊಡ್ಡಮನಿ ಎನ್ನುವ ಹಿರಿಯ ಜೀವವನ್ನು ಆತನ ಹಿರಿಯ ಮಗ ಸುರೇಶ ದೊಡ್ಡಮನಿ ಹತ್ಯೆ ಮಾಡಿದ್ದಾನೆ. ಸುರೇಶ ದೊಡ್ಡಮನಿಯ ಪತ್ನಿ ಅನಾರೋಗ್ಯದ ಹಿನ್ನಲೆಯಲ್ಲಿ ತವರು ಮನೆಗೆ ಹೋಗಿದ್ದಾಳೆ. ನಿನ್ನೆ ಸಂಜೆ ಮದ್ಯಸೇವಿಸಿ ಫುಲ್ ಟೈಟ್ ಆಗಿ ಬಂದು ತಾಯಿ ಹಾಗೂ ತಂದೆ ಜೊತೆಗೆ ಕಿರಿಕ್ ಮಾಡಿದ್ದಾನೆ. ನನ್ನ ಹೆಂಡತಿಯನ್ನು ಎಲ್ಲಿಗೆ ಕಳಿಸಿದ್ದೀರಿ ಅಂತ ಗಲಾಟೆ ಶುರುಮಾಡಿದ್ದಾನೆ. ಈ ವೇಳೆ ಭರಮಪ್ಪನ ಜೊತೆಗೆ ಗಲಾಟೆ ಮಾಡಿಕೊಂಡು, ಕೋಳಿ ಕಟ್ಟ್ ಮಾಡುವ ಚಾಕುವಿನಿಂದ ತಂದೆಯ ಮರ್ಮಾಂಗಕ್ಕೆ ಚಾಕುವಿನಿಂದ ಇರಿದು ನಾಪತ್ತೆಯಾಗಿದ್ದ. ತಂದೆ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಾಯಿದ್ರು ಆತನ ಆಸರೆಗೆ ಯಾರು ಬಂದಿಲ್ಲ. ಆ್ಯಂಬುಲೆನ್ಸ್ ಕಾಲ್ ಮಾಡಿದ್ರು. ಆದ್ರೆ ಆ್ಯಂಬುಲೆನ್ಸ್ ಬರುವ ವೇಳೆಯಲ್ಲಿ ಮನೆಯ ಅಂಗಳದಲ್ಲಿ ರಕ್ತ ಸ್ತ್ರಾವದಿಂದ ಕೊನೆ ಉಸಿರು ಎಳೆದಿದ್ದಾರೆ. ತಂದೆ ಕೊಲೆ ಕಾರಣವಾದ ಮಗನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪತ್ನಿ ಮಲ್ಲಮ್ಮ ಗೋಳಾಡ್ತಿದ್ದಾಳೆ.
ಗದಗ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇನ್ನು ಕೊಲೆಯಾದ ಭರಮಪ್ಪ ಹಾಗೂ ಮಲ್ಲವ್ವ ವೃದ್ಧ ದಂಪತಿಗಳಿಗೆ ನಾಲ್ಕು ಜನ ಮಕ್ಕಳು, ಮೂವರು ಗಂಡು ಮಕ್ಕಳು ಓರ್ವ ಹೆಣ್ಣು ಮಗಳು. ಹೆಣ್ಣು ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಉಳಿದ ಮೂವರು ಗಂಡು ಮಕ್ಕಳ ಪೈಕಿ ಇಬ್ಬರು ತಮ್ಮ ಹೆಂಡತಿಯರ ಮನೆಯಲ್ಲಿ ವಾಸವಾಗಿದ್ದಾರೆ. ಕಿರಾತಕ ಮಗ ಸುರೇಶ ಮತ್ತು ಆತನ ಹೆಂಡತಿ ವೃದ್ಧ ತಂದೆ ತಾಯಿ ಜೊತೆಗೆ ಹಾತಲಗೇರಿ ಗ್ರಾಮದಲ್ಲಿ ಇರ್ತಾಯಿದ್ರು. ನಿತ್ಯ ಮದ್ಯ ಸೇವನೆ ಮಾಡಿಕೊಂಡು ಬಂದು ಹೆಂಡತಿ ಮೇಲೆ ಹಲ್ಲೆ ಮಾಡೋದು ಹಾಗೂ ವೃದ್ಧ ತಂದೆ ತಾಯಿಗೆ ಕಿರುಕುಳ ನೀಡ್ತಾಯಿದ್ದ. ಅದರಲ್ಲೂ ಹಾತಲಗೇರಿ ಗ್ರಾಮದ ಶ್ರೀ ಸತ್ಯಮ್ಮ ದೇವಿಯ ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಮನೆಗೆ ಬಣ್ಣ ಹಚ್ಚುವ ಕೆಲಸವನ್ನು ವೃದ್ಧ ತಂದೆ ಮಾಡಿದ್ದರು. ಇದೇ ವೇಳೆ ಸುರೇಶನ ಪತ್ನಿ ಅನಾರೋಗ್ಯದ ಹಿನ್ನಲೆಯಲ್ಲಿ ತವರೂ ಮನೆಗೆ ಹೋಗಿದ್ದಾಳೆ. ಸಂಜೆ ಮದ್ಯ ಸೇವನೆ ಮಾಡಿ ಬಂದ ಸುರೇಶ ನನ್ನ ಹೆಂಡತಿಯ ತವರು ಮನೆಗೆ ಹೋಗಿರೋ ಸುದ್ದಿಯನ್ನು ಯಾಕೇ ಹೇಳಿಲ್ಲಾ ಎಂದು ಜಗಳ ಮಾಡಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಸ್ಥಳದಿಂದ ನಾಪತ್ತೆಯಾಗಿದ್ದ, ಇಡೀ ರಾತ್ರಿಯಲ್ಲಿ ಗದಗ ಗ್ರಾಮೀಣ ಪೊಲೀಸರು ಶೋಧ ಮಾಡಿ ಕೊನೆಗೆ ಕ್ರೂರಿ ಸುರೇಶನನ್ನು ಅರೆಸ್ಟ್ ಮಾಡಿದ್ದಾರೆ. ತಂದೆಯನ್ನು ಕೊಲೆ ಮಾಡಿದ ಮಗನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕೊಲೆಯಾದ ವೃದ್ಧನ ಪುತ್ರಿ ಶಂಕ್ರವ್ವ ಹೇಳಿದ್ದಾರೆ.
ಇನ್ನು ಕೊಲೆ ಮಾಡಿದ ಮಗನಿಗೆ ಇಬ್ಬರು ಮಕ್ಕಳು. ಆ ಮಕ್ಕಳನ್ನೂ ಸಹ ಇದೇ ವೃದ್ಧ ತಂದೆ ತಾಯಿಗಳೇ ನೋಡಿಕೊಳ್ತಿದ್ದರು. ಆದರೆ ಸುರೇಶನ ಕುಡಿತದ ಚಟ ಮಿತಿಮೀರಿತ್ತು. ದುಡಿದಿದ್ದೆಲ್ಲ ಆತನ ಚಟಕ್ಕೆ ತೀರ್ತಿತ್ತು. ಆದ್ರೆ ವೃದ್ಧ ದಂಪತಿಗಳು ಮಾತ್ರ ಮುಪ್ಪಿನ ವಯಸ್ಸಿನಲ್ಲಿಯೂ ಮನೆಯ ಜವಾಬ್ದಾರಿ ನಡೆಸುತ್ತಿದ್ದರು. ಆದ್ರೂ ಸಹ ದುಷ್ಟ ಮಗನಿಗೆ ತಂದೆ ತಾಯಿಯ ಕಷ್ಟದ ಅರಿವು ಕರುಣೆ ಇರಲಿಲ್ಲ. ಇನ್ನು ಗ್ರಾಮದ ಶ್ರೀ ಸತ್ಯಮ್ಮ ದೇವಿಯ ಜಾತ್ರೆಯ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಕ್ಷುಲ್ಲಕ ಕಾರಣಕ್ಕಾಗಿ ಹೆತ್ತ ತಂದೆಯನ್ನು ಕೊಲೆ ಮಾಡಿದ ಕಿರಾತಕ ಮಗನಿಗೆ ತಕ್ಕ ಶಿಕ್ಷಕೆಯಾಗಬೇಕು ಅಂತ ಸಂಬಂಧಿಕರು ಒತ್ತಾಯ ಮಾಡ್ತಿದ್ದಾರೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
Published On - 7:30 pm, Sun, 15 May 22