Mixer Bomb Case: ಮಿಕ್ಸಿಯಲ್ಲಿ ಬಾಂಬ್​ ಇಟ್ಟ ಪಾಗಲ್​ ಪ್ರೇಮಿ ಇದೀಗ ಹಾಸನ ಪೊಲೀಸರ ಅತಿಥಿ

ಪ್ರೀತಿ ನಿರಾಕರಿಸಿದ ಕಾರಣಕ್ಕೆ ಮಹಿಳೆ ಹತ್ಯೆ ಮಾಡಲು ಮಿಕ್ಸಿಯಲ್ಲಿ ಸ್ಪೋಟಕ‌ ವಸ್ತು ಇಟ್ಟು ಬ್ಲಾಸ್ಟ್​ಗೆ ಯತ್ನ ಮಾಡಿದ ಪ್ರಮುಖ ಆರೋಪಿ ಅನೂಪ್‌ಕುಮಾರ್​ನನ್ನು ಬಂಧಿಸಿದ ಪೊಲೀಸರು.

Mixer Bomb Case: ಮಿಕ್ಸಿಯಲ್ಲಿ ಬಾಂಬ್​ ಇಟ್ಟ ಪಾಗಲ್​ ಪ್ರೇಮಿ ಇದೀಗ ಹಾಸನ ಪೊಲೀಸರ ಅತಿಥಿ
ಆರೋಪಿ ಅನೂಪ್​ ಕುಮಾರ್​
Updated By: Digi Tech Desk

Updated on: Jan 04, 2023 | 11:42 AM

ಹಾಸನ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಆಕೆಯನ್ನ ಹತ್ಯೆ ಮಾಡಲು ಮಿಕ್ಸಿಯಲ್ಲಿ ಸ್ಪೋಟಕ‌ ವಸ್ತು ಇಟ್ಟು ಬ್ಲಾಸ್ಟ್​ಗೆ ಯತ್ನ ಮಾಡಿದ್ದ ಆರೋಪಿ ಬೆಂಗಳೂರಿನ ತಲಘಟ್ಟಪುರದ ಅನೂಪ್‌ಕುಮಾರ್​ನನ್ನು ಬಂಧಿಸಿ ಏಳು ದಿನ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಮಿಕ್ಸಿಯಲ್ಲಿ ಡೆಟೊನೆಟರ್‌ ಇಟ್ಟು ಬ್ಲಾಸ್ಟ್ ಮಾಡುವುದು ಹೇಗೆ ಎಂದ ಇಂಟರ್‌ನೆಟ್ ಮೂಲಕ ಸರ್ಚ್ ಮಾಡಿ ಮಿಕ್ಸಿಯಲ್ಲಿ ಡಿಟೊನೇಟರ್ ಪಿಕ್ಸ್ ಮಾಡಿದ್ದ ಆರೋಪಿ ಅನೂಪ್.

ರಾಮನಗರದ‌ ಕ್ವಾರಿಯೊಂದರಿಂದ ಎರಡು ಡೆಟೊನೆಟರ್‌ ತಂದಿದ್ದ ಆರೋಪಿ, ಬಾಂಬ್ ತಯಾರಿಕೆ ಬಗ್ಗೆ ಇಂಟರ್​ನೆಟ್​ನಲ್ಲಿ ಸರ್ಚ್ ಮಾಡಿ ನಂತರ ಮಿಕ್ಸಿಯಲ್ಲಿ ಡಿಟೊನೇಟರ್ ಫಿಕ್ಸ್ ಮಾಡಿದ್ದಾನೆ. ಡಿ.16 ರಂದು ಮಹಿಳೆಗೆ ಬೆಂಗಳೂರಿನಿಂದ ಪಾರ್ಸೆಲ್ ಕಳುಹಿಸಿದ್ದ ಆರೋಪಿ ಅನೂಪ್. ಡಿ.17 ರಿಂದಲೇ ಕೊರಿಯರ್ ಟ್ರ್ಯಾಕಿಂಗ್ ಐಡಿ ಮೂಲಕ ಡೆಲಿವರಿ ಆಗಿದಿಯಾ, ಮಿಕ್ಸಿ ಬ್ಲಾಸ್ಟ್ ಆಗಿರುವ ನ್ಯೂಸ್ ಬಂದಿದಿಯಾ ಎಂಬ ಬಗ್ಗೆಯೂ ಪರಿಶೀಲನೆ ಮಾಡಿದ್ದಾನೆ. ಡಿಸೆಂಬರ್ 17 ರಂದು ಮಹಿಳೆ ಮನೆ ತಲುಪಿದ್ದ ಕೊರಿಯರ್ ಡಿ.26 ರಂದು ಕುವೆಂಪು ನಗರ ಎರಡನೇ ಹಂತ ಮುಖ್ಯ ರಸ್ತೆಯಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡು ಇದೀಗ ಆರೋಪಿಯನ್ನ ಬಂಧಿಸಿ ತನಿಖೆ ನಡೆಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:44 am, Wed, 4 January 23