ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ ಸಂವಾದ ವೇಳೆ ಡಿಕೆ ಶಿವಕುಮಾರ್ ಗರಂ! ಡಿಸಿಎಂ ಮಾತಿಗೆ ಅಸಮಾಧಾನ
ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳ ಜೊತೆ ನಡೆದ ಸಂವಾದದ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ವೇದಿಕೆ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಲ್ಲ, ಹುಷಾರ್ ಅಂತ ಎಚ್ಚರಿಕೆ ನೀಡಿದ್ದಾರೆ. ಸದ್ಯ ಡಿಕೆ ಶಿವಕುಮಾರ್ ಮಾತಿಗೆ ಉದ್ಯಮಿ ಸೇರಿದಂತೆ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ.

ಬೆಂಗಳೂರು, ಡಿಸೆಂಬರ್ 13: ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ 2025 ಮಂಡನೆ ಆಗಲೇಬೇಕು ಅಂತ ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳು ಹಲವು ವರ್ಷಗಳಿಂದ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಬೇಡಿಕೆಗಳನ್ನು ಆಲಿಸಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಂವಾದ ನಡೆಸಿದರು. ಎಲ್ಲಾ ಸಲಹೆಗಳನ್ನು ಅವಲೋಕಿಸಿ ವಿಧೇಯಕ ಮಂಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಲ್ಲ ಎಂದ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ವೇದಿಕೆ ಮೇಲೆಯೇ ಆಕ್ರೋಶ ಹೊರಹಾಕಿದರು. ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ಪದಾಧಿಕಾರಿ ಕಿರಣ್ ಹೆಬ್ಬಾರ್ ಎಂಬುವವರು ಬರೆದಿದ್ದ ಪತ್ರದ ಬಗ್ಗೆ ಮಾತನಾಡಿ ಡಿಕೆ ಶಿವಕುಮಾರ್, ಪ್ರಧಾನಿಗೆ ಹೆದರಿಲ್ಲ ನಾನು. ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಲ್ಲ, ಹುಷಾರ್ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.
ಆರ್ ಅಶೋಕ್ ಟ್ವೀಟ್
What kind of language is this from a Deputy Chief Minister in a democracy – threats instead of answers?
Instead of answering genuine questions from Apartment Associations, DCM @DKShivakumar chooses intimidation – boasting about his past, flexing power, and openly threatening… https://t.co/7QFtIFmqj2
— R. Ashoka (@RAshokaBJP) December 13, 2025
ಇನ್ನು ವೇದಿಕೆ ಮೇಲೆ ಡಿಕೆ ಶಿವಕುಮಾರ್ ಗರಂ ಆದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿರಣ್ ಹೆಬ್ಬಾರ್, ನಾನು ಧಮ್ಕಿ ಹಾಕುವ ಪ್ರಯತ್ನ ಮಾಡಿಲ್ಲ ಅಂತ ಹೇಳಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಆಡಿರುವ ಮಾತಿಗೆ ಉದ್ಯಮಿ ಮೋಹನ್ ದಾಸ್ ಪೈ ಸೇರಿದಂತೆ ವಿಪಕ್ಷ ನಾಯಕರು ವಾಗ್ದಾಳಿ ಮಾಡಿದ್ದಾರೆ.
ಉದ್ಯಮಿ ಮೋಹನ್ ದಾಸ್ ಪೈ ಅಸಮಾಧಾನ
ಡಿಕೆ ಶಿವಕುಮಾರ್ ಭಾಷಣದ ರೀತಿಗೆ ಉದ್ಯಮಿ ಮೋಹನ್ ದಾಸ್ ಪೈ ಅಸಮಾಧಾನ ಹೊರಹಾಕಿದ್ದಾರೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಸಚಿವರನ್ನ ಪ್ರಶ್ನಿಸುವ ಹಕ್ಕಿದೆ. ಈ ರೀತಿ ಮಾತನಾಡುವುದು, ಭಯ ಹುಟ್ಟಿಸುವುದು ತುಂಬಾ ತಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಅವರ ಪ್ರವೃತ್ತಿ ಗೊತ್ತಿದೆ ಅಂತಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಿಡಿಕಾರಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ವಾಗ್ದಾಳಿ
ಪ್ರಜಾಪ್ರಭುತ್ವದಲ್ಲಿ ಉಪಮುಖ್ಯಮಂತ್ರಿಯೊಬ್ಬರು ಯಾವ ರೀತಿಯ ಭಾಷೆ ಬಳಸುತ್ತಿದ್ದಾರೆ, ಇದು ಉತ್ತರನಾ ಇಲ್ಲಾ ಬೆದರಿಕೆನಾ? ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಅಪಾರ್ಟ್ಮೆಂಟ್ ಫೆಡರೇಷನ್ ಅವರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಡಿಕೆ ಶಿವಕುಮಾರ್ ಬೆದರಿಕೆ ಹಾಕುತ್ತಿದ್ದಾರೆ. ಬೆಂಗಳೂರಿನ ಜನರು ವಿದ್ಯಾವಂತರು, ಧೈರ್ಯವಂತರು ಅವರು ಬೆದರಿಕೆಗಳಿಗೆ ಹೆದರುವುದಿಲ್ಲ.
ಇದನ್ನೂ ಓದಿ: ಕುರ್ಚಿ ಕದನ: ಶಾಸಕ ಇಕ್ಬಾಲ್ ಹುಸೇನ್ ಮಾತನ್ನು ಯಾರು ನಂಬಬೇಡಿ; ಡಿಕೆ ಶಿವಕುಮಾರ್
ಎಚ್ಚರಿಕೆ ನೀಡುವುದಕ್ಕೆ ಅಪಾರ್ಟ್‌ಮೆಂಟ್ ನಿವಾಸಿಗಳು ವೋಟ್ ಬ್ಯಾಂಕ್ ಅಲ್ಲ. ಅಧಿಕಾರವು ಒಂದು ಜವಾಬ್ದಾರಿ ಹೊರತು ಆಯುಧವಲ್ಲ. ಪ್ರಜಾಪ್ರಭುತ್ವ ದುರಹಂಕಾರಕ್ಕೆ ಮಣಿಯುವುದಿಲ್ಲ ಇದನ್ನು ನೆನಪಿಟ್ಟುಕೊಳ್ಳಿ ಎಂದು ಡಿಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಇನ್ನು ಈ ಕುರಿತಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೂಡ ಟ್ವೀಟ್ ಮಾಡಿದ್ದು, ತಮ್ಮ ಲಿಖಿತ ಸಲಹೆ ಮತ್ತು ಶಿಫಾರಸನ್ನು ಡಿಸಿಎಂ ಡಿಕೆ ಶಿವಕುಮಾರ್ಗೆ ಸಲ್ಲಿಸಿದ್ದಾರೆ. ಅವರು ನೀಡಿರುವ ಕೆಲ ಸಲಹೆಗಳು ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಗರ ಆಡಳಿತ ಮತ್ತು ಜನರ ಸುಲಭ ಜೀವನಕ್ಕಾಗಿ ಒತ್ತಾಯಿಸಿದ್ದಾರೆ.
ತೇಜಸ್ವಿ ಸೂರ್ಯ ಟ್ವೀಟ್
This morning, DCM Shri @DKShivakumar convened a meeting of apartment owners and RWAs for consultations on the proposed Karnataka Apartment (Ownership and Management) Bill, 2025.
Submitted my written suggestions and recommendations to the DCM.
Raised several issues faced by… pic.twitter.com/a0UxEk5v1f
— Tejasvi Surya (@Tejasvi_Surya) December 13, 2025
ಇನ್ನು ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ಕಾಯ್ದೆ ಸಂಬಂಧ ಅಸೋಸಿಯೇಷನ್ ಪದಾಧಿಕಾರಿಗಳ ಅಹವಾಲು ಸ್ವೀಕರಿಸಲಾಗಿದೆ. ಎಲ್ಲವನ್ನೂ ಪರಿಶೀಲಿಸಿ, ಬಳಿಕ ಜನಪರವಾದ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ 2025 ಜಾರಿಗೆ ತರುವುದಾಗಿ ಡಿಕೆ ಭರವಸೆ ನೀಡಿದ್ದಾರೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




