ದರ್ಗಾಗೆ ತೆರಳ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್, ಮಹಿಳೆ ಸಾವು
ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬೈಕ್ ಉರುಳಿ ಬಿದ್ದು ಸವಾರನ ಪತ್ನಿ ಮೃತಪಟ್ಟಿರುವ ಘಟನೆ ಹಾನಗಲ್ ತಾಲೂಕಿನ ಕುಂಟನಹೊಸಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೈನುದ್ದೀನ್ ಪತ್ನಿ ಆಮ್ರೀನ ಹಾವಣಗಿ(21) ಸಾವಿಗೀಡಾಗಿದ್ದಾರೆ. ಅಕ್ಕಿಆಲೂರು ಗ್ರಾಮದಲ್ಲಿರುವ ದರ್ಗಾಗೆ ತೆರಳ್ತಿದ್ದ ವೇಳೆ ಕುಂಟನಹೊಸಳ್ಳಿ ಗ್ರಾಮದ ಬಳಿ ಇರುವ ಧರ್ಮಾನದಿ ಕಾಲುವೆಗೆ ಬೈಕ್ ಉರುಳಿ ಬಿದ್ದಿದೆ. ಆಗ ಬೈಕ್ನ ಹಿಂಬದಿ ಮಹಿಳೆ ಅವಘಡದಲ್ಲಿ ಮೃತಪಟ್ಟಿದ್ದಾರೆ. ಸವಾರ ಮೈನುದ್ದೀನ್ ಹಾವಣಗಿಗೆ ಗಾಯಗಳಾಗಿದ್ದು, ಹಾನಗಲ್ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ […]
ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬೈಕ್ ಉರುಳಿ ಬಿದ್ದು ಸವಾರನ ಪತ್ನಿ ಮೃತಪಟ್ಟಿರುವ ಘಟನೆ ಹಾನಗಲ್ ತಾಲೂಕಿನ ಕುಂಟನಹೊಸಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೈನುದ್ದೀನ್ ಪತ್ನಿ ಆಮ್ರೀನ ಹಾವಣಗಿ(21) ಸಾವಿಗೀಡಾಗಿದ್ದಾರೆ.
ಅಕ್ಕಿಆಲೂರು ಗ್ರಾಮದಲ್ಲಿರುವ ದರ್ಗಾಗೆ ತೆರಳ್ತಿದ್ದ ವೇಳೆ ಕುಂಟನಹೊಸಳ್ಳಿ ಗ್ರಾಮದ ಬಳಿ ಇರುವ ಧರ್ಮಾನದಿ ಕಾಲುವೆಗೆ ಬೈಕ್ ಉರುಳಿ ಬಿದ್ದಿದೆ. ಆಗ ಬೈಕ್ನ ಹಿಂಬದಿ ಮಹಿಳೆ ಅವಘಡದಲ್ಲಿ ಮೃತಪಟ್ಟಿದ್ದಾರೆ. ಸವಾರ ಮೈನುದ್ದೀನ್ ಹಾವಣಗಿಗೆ ಗಾಯಗಳಾಗಿದ್ದು, ಹಾನಗಲ್ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.