86ನೇ ಸಾಹಿತ್ಯ ಸಮ್ಮೇಳನ ಆತಿಥ್ಯ ವಹಿಸಿದ ಹಾವೇರಿಗೆ ಬಂಪರ್ ಗಿಫ್ಟ್: ಸಮಾರೋಪ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ
ಕಸಾಪ ಹಾವೇರಿ ಜಿಲ್ಲಾ ಕಟ್ಟಡಕ್ಕೆ 3 ಕೋಟಿ ರೂ. ಘೋಷಣೆ ಮಾಡಿದ್ದು, ಆ ಮೂಲಕ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿದ ಹಾವೇರಿಗೆ ಸಿಎಂ ಬೊಮ್ಮಾಯಿ ಬಂಪರ್ ಗಿಫ್ಟ್ ನೀಡಿದರು.
ಹಾವೇರಿ: ಯಾಲಕ್ಕಿ ಕಂಪಿನ ನಾಡಿನಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಇಂದು(ಜ.8) ಅದ್ಧೂರಿ ತೆರೆಬಿದ್ದಿದೆ. ಪ್ರೊ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ನಡೆದಿದ್ದು, ನಿರೀಕ್ಷೆಗೂ ಮೀರಿ ಸಾಹಿತ್ಯಾಭಿಮಾನಿಳು ಆಗಮಿಸಿದ್ದರು. ಇನ್ನು ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದು, ಕೆಲ ಅನುದಾಗಳನ್ನು ಘೋಷಣೆ ಮಾಡಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ. ಅನುದಾನ ಘೋಷಣೆ ಮಾಡಿದರು. ಗಡಿನಾಡಿನ ಅಭಿವೃದ್ಧಿಗಾಗಿ ಪ್ರಾಧಿಕಾರಕ್ಕೆ ಈಗಾಗಲೇ 25 ಕೋಟಿ ನೀಡಿದ್ದೇನೆ. ಪ್ರಸಕ್ತ ವರ್ಷದಲ್ಲಿ ಇನ್ನೂ 100 ಕೋಟಿ ರೂ. ಅನುದಾನ ನೀಡುತ್ತೇನೆ ಎಂದು ಹೇಳಿದರು.
ಹಾವೇರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಬೊಮ್ಮಾಯಿ
ಕಸಾಪ ಹಾವೇರಿ ಜಿಲ್ಲಾ ಕಟ್ಟಡಕ್ಕೆ 3 ಕೋಟಿ ರೂ. ಘೋಷಣೆ ಮಾಡಿದ್ದು, ಆ ಮೂಲಕ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿದ ಹಾವೇರಿಗೆ ಸಿಎಂ ಬೊಮ್ಮಾಯಿ ಬಂಪರ್ ಗಿಫ್ಟ್ ನೀಡಿದರು. ಸಮ್ಮೇಳನದ ಸ್ಮರಣೆಗಾಗಿ ಹಾವೇರಿಗೆ ಪರಿಷತ್ ಕಟ್ಟಡ ಸಂಶೋಧನಾ ಕೇಂದ್ರದ ರೀತಿ ಆಗಬೇಕು ಎಂದು ಸೂಚಿಸಿದರು. 86ನೇ ಸಾಹಿತ್ಯ ಸಮ್ಮೇಳನದ ನಿರ್ಣಯ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಮುಸ್ಲಿಂ ಸಾಹಿತಿಗಳನ್ನು ಸಮ್ಮೇಳನದಿಂದ ದೂರ ಮಾಡಿರುವ ಆರೋಪ: ಹರಿಪ್ರಸಾದಗೆ ತಿರುಗೇಟು ನೀಡಿದ ಮಹೇಶ್ ಜೋಶಿ
ನ್ನಡ ಹೋರಾಟಗಾರರ ಎಲ್ಲಾ ಕೇಸ್‌ಗಳನ್ನು ವಾಪಸ್ ಪಡೆಯುತ್ತೇವೆ
ಇನ್ನು ಸಮ್ಮೇಳನದಲ್ಲಿ ನಿರ್ಣಯಗಳು ಮಂಡನೆಯಾಗಿದ್ದು, ಅವುಗಳನ್ನು ಶೀಘ್ರದಲ್ಲಿ ಈಡೇರಿಸುವ ಕಾರ್ಯ ಮಾಡುತ್ತೇವೆ. ಕನ್ನಡ ಹೋರಾಟಗಾರರ ಎಲ್ಲಾ ಕೇಸ್‌ಗಳನ್ನು ವಾಪಸ್ ಪಡೆಯುತ್ತೇವೆ. ಕನ್ನಡ ಹೋರಾಟಗಾರರ ಒಂದಷ್ಟು ಪ್ರಕರಣ ಕೋರ್ಟ್‌ಗಳಲ್ಲಿ ಇವೆ. ಪರಿಶೀಲಿಸಿ ಎಲ್ಲಾ ಕೇಸ್ ವಾಪಸ್ ಪಡೆಯಲು ಪ್ರಯತ್ನಿಸುತ್ತೇವೆ ಎಂದರು.
ಹಾವೇರಿ ಜಿಲ್ಲೆಯ ಪುಣ್ಯಭೂಮಿಗೆ ನನ್ನ ನಮಸ್ಕಾರಗಳು. ಈ ಮಣ್ಣಿನದು ಸುಸಂಸ್ಕೃತ ಗುಣ. ದೊಡ್ಡ ಹೃದಯ ಶ್ರೀಮಂತಿಕೆ ಈ ಮಣ್ಣಿನ ಗುಣದಲ್ಲಿದೆ. ಕನ್ನಡ ನಾಡು, ನುಡಿ, ಜಲ, ಏಕೀಕರಣಕ್ಕೆ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ವೀರರ ನೆಲ ಹಾವೇರಿ. ಕನ್ನಡ ಭುವನೇಶ್ವರಿ ತಾಯಿಯ ಒಡಲು ಬಹಳ ಶ್ರೀಮಂತವಾಗಿದೆ.
ಇದನ್ನೂ ಓದಿ: ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: 6 ನಿರ್ಣಯ ಮಂಡನೆ
ಯಾವುದಕ್ಕೂ ಕೊರತೆ ಇಲ್ಲ. ಕನ್ನಡದ ಜ್ಞಾನ, ಸಾಹಿತ್ಯ, ಸಂಸ್ಕೃತಿ, ಬದುಕು, ತಂತ್ರಜ್ಞಾನ ಎಲ್ಲವೂ ಶ್ರೀಂಮತವಾಗಿದೆ. ಹೀಗಾಗಿ ಈ ಪುಣ್ಯಭೂಮಿಯಿಂದ ಭುವನೇಶ್ವರಿ ಒಡಲಿಗೆ ನಮಸ್ಕರಿಸುವೆ. ಈ ಕನ್ನಡದ ಹಬ್ಬ ಅತ್ಯಂತ ಯಶಸ್ವಿಯಾಗಿದೆ. ಇದಕ್ಕಾಗಿ ದುಡಿದ ಎಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳನ್ನು ತಿಳಿಸಿದರು.
ಸೂರ್ಯಚಂದ್ರ ಇರುವವರೆಗೂ ಸಾಹಿತ್ಯ ಇರುತ್ತೆ: ಸ್ಪೀಕರ್ ಕಾಗೇರಿ
ಸಮಾರೋಪ ಸಮಾರಂಭದಲ್ಲಿ ಸ್ಪೀಕರ್ ಕಾಗೇರಿ ಭಾಷಣ ಮಾಡಿದ್ದು, ಹಾವೇರಿ ಜಿಲ್ಲೆ ಕನಕದಾಸರು, ಸರ್ವಜ್ಞ, ಶರೀಫ್‌ರ ನಾಡು. ದೊಡ್ಡರಂಗೇಗೌಡರ ನೇತೃತ್ವದಲ್ಲಿ ವಿವಾದ ರಹಿತ ಸಮ್ಮೇಳನ. ಸುವರ್ಣ ಅಕ್ಷರದಲ್ಲಿ ಬರೆದಿಡುವ ಹಾಗೇ ಸಮ್ಮೇಳನ ಮಾಡಿದ್ದಾರೆ. ಸೂರ್ಯಚಂದ್ರ ಇರುವವರೆಗೂ ಸಾಹಿತ್ಯ ಇರುತ್ತೆ. ಸಾಹಿತಿಗಳು ನಾಡಿನ ವಿಶೇಷತೆಯನ್ನ ಜಗತ್ತಿಗೆ ತೋರಿಸಿದ್ದಾರೆ. ಸಾಹಿತ್ಯ ಮಾನವೀಯ ಸಂಬಂಧ ಮೂಡಿಸುವ ಕೆಲಸ ಮಾಡ್ತಿದೆ. ಎಲ್ಲಾ ಕ್ಷೇತ್ರದಲ್ಲಿ ಮಾನವೀಯ ಸಂಬಂಧ ಕಡಿಮೆಯಾಗುತ್ತಿದೆ. ಸಾಹಿತ್ಯ ಇನ್ನಷ್ಟು ಮಾನವೀಯ ಮೌಲ್ಯಗಳನ್ನ ಹೆಚ್ಚು ಮಾಡಲಿ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.