AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಸರಕಾರದಿಂದ ಅನುದಾನವಿಲ್ಲದೆ 15 ವರ್ಷಗಳಿಂದ ದುಡಿಯುತ್ತಿದ್ದ ಹಾವೇರಿ ಆಸ್ಪತ್ರೆಯ ಕೊರೊನಾ ನೌಕರರು ಸೇವೆಯಿಂದ ವಜಾ

ಆಸ್ಪತ್ರೆ ನೌಕರರು ಕೊರೊನಾ ಕಾಲದಲ್ಲಿ ದೇಶದ ಜನತೆಗೆ ದೇವರಾಗಿ ಕಂಡಿದ್ದರು. ಆದರೆ ಇಂದು ಅವರಿಗೆ ನೀಡಲು ಅನುದಾನ ಇಲ್ಲ ಎನ್ನುವ ಕಾರಣ ನೀಡಿ ವಜಾ ಮಾಡಲು ಹೊರಟಿರುವುದು ವಿಪರ್ಯಾಸವೆ ಸರಿ. ಇನ್ನಾದರು ಸರಕಾರ ಅವರ ಸೇವೆಗೆ ಬೇಲೆ ಕೊಟ್ಟು ಅವರ ಕಷ್ಟಕ್ಕೆ ಸ್ಪಂದಿಸುವ ಕೇಲಸ ಆಗಬೇಕಿದೆ.

ರಾಜ್ಯ ಸರಕಾರದಿಂದ ಅನುದಾನವಿಲ್ಲದೆ 15 ವರ್ಷಗಳಿಂದ ದುಡಿಯುತ್ತಿದ್ದ ಹಾವೇರಿ ಆಸ್ಪತ್ರೆಯ ಕೊರೊನಾ ನೌಕರರು ಸೇವೆಯಿಂದ ವಜಾ
15 ವರ್ಷಗಳಿಂದ ದುಡಿಯುತ್ತಿದ್ದ ಹಾವೇರಿ ಆಸ್ಪತ್ರೆಯ ಕೊರೊನಾ ನೌಕರರು ಸೇವೆಯಿಂದ ವಜಾ
TV9 Web
| Edited By: ಸಾಧು ಶ್ರೀನಾಥ್​|

Updated on: Nov 25, 2023 | 12:58 PM

Share

ಅವರೆಲ್ಲ 15 ವರ್ಷಗಳಿಂದ ಅಲ್ಲಿ ದುಡಿಯುತ್ತಿದ್ದರು, ಆ ದುಡಿಮೆ ನೆಚ್ಚಿಕೊಂಡು ತಮ್ಮ ಬದುಕು ಕಟ್ಟಿಕೊಂಡಿದ್ದರು, ಆದರೆ ಇದೀಗ ಸರಕಾರ ಅವರ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡಿದೆ. ಆಸ್ಪತ್ರೆ ಎದುರು ಧರಣಿ ಕುಳಿತ ಸಿಬ್ಬಂದಿ, ರಾಜ್ಯ ಸರಕಾರದ (karnataka government) ವಿರುದ್ದ ಘೋಷಣೆ ಕೂಗುತ್ತಿರುವ ನೌಕರರು. ಹೌದು ಇದೆಲ್ಲ ಕಂಡು ಬಂದಿದ್ದು ಹಾವೇರಿ ನಗರದ ಜಿಲ್ಲಾ ಆಸ್ಪತ್ರೆ ಎದುರು. ಇವರೆಲ್ಲ ಕಳೆದ ಹದಿನೈದು ವರ್ಷಗಳಿಂದ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 75 ಜನ ಡಿ ದರ್ಜೆ ನೌಕರರು (Corona hospital warriors in Haveri) ಕೆಲಸ ಮಾಡುತ್ತಿದ್ದರು. ಅದರಲ್ಲಿ ಹದಿನಾಲ್ಕು ಜನ ಡಿ ದರ್ಜೆ ನೌಕರರು ಸರಕಾರದಿಂದ ನೇಮಕ ಆದವರು, ಆದರೆ ಇದೀಗ ಅನುದಾನದ ಕೊರತೆ ಇಂದ ಮುವತೈದು ಜನರನ್ನ ಕೆಲಸದಿಂದ ಕಿತ್ತುಹಾಕಲಾಗಿದೆ (dismiss).

ಗುತ್ತಿಗೆದಾರನಿಗೆ ಒಂದು ಕೋಟಿ ನಲವತ್ತು ಲಕ್ಷ ಬಾಕಿ ಇದೆ. ಡಿ ದರ್ಜೆ ನೌಕರರನ್ನ ಕೆಲಸದಿಂದ ಕೈ ಬೀಡಲು ಜಿಲ್ಲಾ ಶಸ್ತ್ರಚಿಕಿತ್ಸಕರು ಸರಕಾರದ ಆದೇಶದ ಮೇರೆಗೆ ವಜಾ ಮಾಡಲು ಮುಂದಾಗಿದೆ. ಸರಕಾರಕ್ಕೆ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದಾಗ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅವಶ್ಯಕತೆ ಗಿಂತ ಹೆಚ್ಚು ಸಿಬ್ಬಂದಿ ಇರುವದರಿಂದ ಹೆಚ್ವಿನ ಅನುದಾನ ಬಿಡುಗಡೆ ಮಾಡಲು ಸರಕಾರ ನಿರಾಕರಿಸಿದೆ.

ಏಕಾಏಕಿ ನೌಕರರನ್ನ ವಜಾ ಮಾಡಿದ್ದರಿಂದ ಮುವತೈದು ಕುಟುಂಬಗಳು ಬೀದಿಗೆ ಬರುವ ಸಂಧರ್ಭ ಬಂದೊದಗಿದೆ. ಇದೆ ಕೇಲಸವನ್ನ ನಂಬಿ ಆ ಕುಟುಂಬಗಳು ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ ಅಧಿಕಾರಿಗಳು ಮಾಡಿದ ಯಡವಟ್ಟಿಗೆ ಬಡ ಕುಟುಂಬಗಳು ಈಗ ಜಿಲ್ಲಾಸ್ಪತ್ರೆ ಎದರು‌ ಧರಣಿ ಕುಳಿತಿದ್ದಾರೆ. ಆಸ್ಪತ್ರೆ ನೌಕರರು ಕೊರೊನಾ ಕಾಲದಲ್ಲಿ ದೇಶದ ಜನತೆಗೆ ದೇವರಾಗಿ ಕಂಡಿದ್ದರು. ಆದರೆ ಇಂದು ಅವರಿಗೆ ನೀಡಲು ಅನುದಾನ ಇಲ್ಲ ಎನ್ನುವ ಕಾರಣ ನೀಡಿ ವಜಾ ಮಾಡಲು ಹೊರಟಿರುವುದು ವಿಪರ್ಯಾಸವೆ ಸರಿ.

ಇದನ್ನೂ ಓದಿ:  1976 ಜಲನೀತಿ ನಿಮಯ ಉಲ್ಲಂಘನೆ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಭಾರಿ ಸದಸ್ಯ ಕಾರ್ಯದರ್ಶಿ ವಜಾ

ಜನರ ಕಷ್ಟ ಕಾಲದಲ್ಲಿ ಕೊರೊನಾ ವಾರಿಯರ್ ಅಂತೆಲ್ಲ ಕರೆದು ದೇಶದ ಜನ ಅವರಿಗೆ ಅಭಿನಂದಿಸಿದ ಕೈಗಳೆ ಇಂದು ಅವರನ್ನು ಬೀದಿಗೆ ತಳ್ಳಲು ಮುಂದಾಗಿವೆ. ಇನ್ನಾದರು ಸರಕಾರ ಅವರ ಸೇವೆಗೆ ಬೇಲೆ ಕೊಟ್ಟು ಅವರ ಕಷ್ಟಕ್ಕೆ ಸ್ಪಂದಿಸುವ ಕೇಲಸ ಆಗಬೇಕಿದೆ.

ವರದಿ: ರವಿ ಹೂಗಾರ, ಟಿವಿ 9, ಹಾವೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
TV9 Web
TV9 Web

TV9 Kannada

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ