ಮುಟ್ಟಿಸಿಕೊಳ್ಳಲು ಸಿದ್ಧವಿಲ್ಲದ ಸಮಾಜದ ಮನಸ್ಥಿತಿ ಬದಲಾಯಿಸುವ ಕೆಲಸ ಮಾಡಬೇಕಿದೆ: ಡಾ.ರೋಹಿಣಾಕ್ಷ ಶಿರ್ಲಾಲು

86th Kannada Sahitya Sammelana: ಅಂಬೇಡ್ಕರ್ ಸೇರಿ ಅನೇಕರು ಅಸ್ಪೃಶ್ಯತೆ ಹೋಗಲಾಡಿಸಲು ಹೋರಾಡಿದ್ದರು, ಅವರ ಹೋರಾಟದ ಉದ್ದೇಶ ಈಡೇರಿದೆಯಾ? ಎಂಬ ಪ್ರಶ್ನೆ ಇನ್ನೂ ಇದೆ ಎಂದು ಡಾ. ರೋಹಿಣಾಕ್ಷ ಶೀರ್ಲಾರ್ ಹೇಳಿದ್ದಾರೆ.

ಮುಟ್ಟಿಸಿಕೊಳ್ಳಲು ಸಿದ್ಧವಿಲ್ಲದ ಸಮಾಜದ ಮನಸ್ಥಿತಿ ಬದಲಾಯಿಸುವ ಕೆಲಸ ಮಾಡಬೇಕಿದೆ: ಡಾ.ರೋಹಿಣಾಕ್ಷ ಶಿರ್ಲಾಲು
ಕರ್ನಾಟಕ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶೀರ್ಲಾಲು
Follow us
TV9 Web
| Updated By: Rakesh Nayak Manchi

Updated on:Jan 08, 2023 | 2:28 PM

ಹಾವೇರಿ: 86ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ (86th Kannada Sahitya Sammelana)ದ ಕೊನೆಯ ದಿನವಾದ ಇಂದು ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನ ವೇದಿಕೆಯಲ್ಲಿ‌ ದಮನಿತರ ಲೋಕದ ಸಬಲೀಕರಣ ಗೋಷ್ಠಿ ನಡೆಯಿತು. ಮಾಜಿ ಶಾಸಕ ಡಿ.ಎಸ್. ವೀರಯ್ಯ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಡಾ. ರೋಹಿಣಾಕ್ಷ ಶಿರ್ಲಾಲು (Dr. Rohiniksha Shirlalu) ಅವರು ಆಶಯ ನುಡಿ, ಡಾ. ಬಿ.ಗಂಗಾಧರ ಅವರು ‘ದಮನಿತರ ಸಾಂಸ್ಕೃತಿಕ ಜೀವನ ದೃಷ್ಟಿ’ ವಿಷಯ ಮಂಡನೆ ಮಾಡಿದರು. ‘ಕನ್ನಡದಲ್ಲಿ ದಮನಿತರ ಸಾಹಿತ್ಯ’ ಕುರಿತು ಡಾ. ಹನುಂತಪ್ಪ ಸಂಜೀವಣ್ಣನವರ ಉಪನ್ಯಾಸ ನೀಡಿದರು. ಡಾ. ನಟರಾಜ್‌ ಅವರು ‘ಬದಲಾದ ಹೋರಾಟಗಳ ಸ್ವರೂಪ ಮತ್ತು ಯೋಜನೆಗಳ ಬಳಕೆ’ ಕುರಿತು ಮಾತನಾಡಿದರು.

ದಮನಿತರ ಲೋಕದ ಸಬಲೀಕರಣ ಗೋಷ್ಠಿಯಲ್ಲಿ ಅಸ್ಪೃಶ್ಯತೆಯ ದೌರ್ಜನ್ಯ ಪ್ರಸ್ತಾಪ ಮಾಡಿದ ಕರ್ನಾಟಕ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು, ರಾಜ್ಯದ ಕೆಲವು ಘಟನೆಗಳನ್ನು ನೆನಪಿಸಿದರು. ಈ ಸಮಾಜ ಅಸ್ಪೃಶ್ಯತೆ ರೋಗದಿಂದ ಬಳಲುತ್ತಿದೆ. ಇದು ದಮನಕ್ಕೆ ಒಳಗಾದವರು ಮನಸ್ಸಿನ ಕಾಯಿಲೆ ಅಲ್ಲ. ದಮನಿಸುವವರ ಮನಸ್ಸಿನೊಳಗಿನ ಕಾಯಿಲೆ ಎಂದರು.

ಇದನ್ನೂ ಓದಿ: ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧಾರ; ಬಳ್ಳಾರಿ ಜಸ್ಟ್ ಮಿಸ್

ಅಂಬೇಡ್ಕರ್ ಸೇರಿ ಅನೇಕರು ಅಸ್ಪೃಶ್ಯತೆ ಹೋಗಲಾಡಿಸಲು ಹೋರಾಡಿದ್ದರು. ಅವರ ಹೋರಾಟದ ಉದ್ದೇಶ ಈಡೇರಿದೆಯಾ? ಎಂಬ ಪ್ರಶ್ನೆ ಇನ್ನೂ ಇದೆ. ಇವತ್ತಿಗೂ ಅದು ಹಾಗೆಯೇ ಇದೆ. ಓರ್ವ ಬಾಲಕ ಅಪ್ಪನ ಕೈ ತಪ್ಪಿಸಿ ದೇವಸ್ಥಾನದೊಳಗೆ ಹೋಗಿದ್ದಕ್ಕೆ ದಂಡ ಹಾಕುತ್ತಾರೆ. ಸವರ್ಣೀಯರ ಬೀದಿಯ ನಲ್ಲಿಯ ನೀರು ಮಹಿಳೆ ಕುಡಿದಿದ್ದಳು, ಆಗ ಗೋವಿನ ಮೂತ್ರದಿಂದ ನೀರಿನ ಟ್ಯಾಂಕ್ ಶುದ್ಧ ಮಾಡಿದ್ದರು. ಈ ಮನಸ್ಥಿತಿ ಇದೆಯಾದರೆ ನಾವು ಯಾವ ಭಾರತದಲ್ಲಿ ಬದುಕುತ್ತಿದ್ದೇವೆ ಎಂದು ಪ್ರಶ್ನಿಸಿದರು.

ನೋವಿಗೆ ಒಳಗಾಗುತ್ತಿರುವ ಸಮಾಜವನ್ನು ಮೇಲೆತ್ತುವವರು ಯಾರು ಎಂದು ಪ್ರಶ್ನಿಸಿದ ರೋಹಿಣಾಕ್ಷ, ಇವತ್ತು ಸಂಘರ್ಷ, ಹೋರಾಟದ ಜೊತೆಗೆ ಮನ ಪರಿವರ್ತನೆ ಕಾರ್ಯ ಮಾಡಬೇಕಿದೆ. ಸಂಘರ್ಷದಿಂದ ಆಗಿದ್ದರೇ ಅಸ್ಪೃಶ್ಯತೆ ಯಾವತ್ತೋ ಶಮನ ಆಗಬೇಕಿತ್ತು. ಮುಟ್ಟಿಸಿಕೊಳ್ಳಲು ಸಿದ್ಧವಿಲ್ಲದ ಸಮಾಜದ ಮನಸ್ಥಿತಿ ಬದಲಾಯಿಸುವ ಕೆಲಸ ಮಾಡಬೇಕಿದೆ. ಕರ್ನಾಟಕ ಸರ್ಕಾರ ಎಸ್​​ಸಿ ಎಸ್​ಟಿ ಮೀಸಲಾತಿ ಹೆಚ್ಚಿಸಿದೆ. ಇದು ದಮನಿತರನ್ನು ಎತ್ತರಕ್ಕೆ ಏರಿಸುವ ಪ್ರಯತ್ನವಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:28 pm, Sun, 8 January 23