ಹಾವೇರಿ: ಮಹಿಳೆಯರ ಹೆಸರಲ್ಲಿ ಸಾಲ ಪಡೆದು ಕೋಟಿ ಕೋಟಿ ವಂಚನೆ, ಫೈನಾನ್ಸ್ ಸಂಸ್ಥೆ ಸಿಬ್ಬಂದಿ ಅರೆಸ್ಟ್

ವಿದ್ಯಾನಗರದಲ್ಲಿರುವ ಬಿ.ಎಸ್‌.ಎಸ್‌. ಮೈಕ್ರೋ ಫೈನಾನ್ಸ್‌ ಸಂಸ್ಥೆಯ ಪ್ರಭಾರ ಕೇಂದ್ರ ವ್ಯವಸ್ಥಾಪಕ ಮತ್ತು ಕ್ಷೇತ್ರ ಕಚೇರಿ ವ್ಯವಸ್ಥಾಪಕರಿಬ್ಬರೂ ಸೇರಿಕೊಂಡು ಮಹಿಳೆಯರ ಹೆಸರಲ್ಲಿ ಕೋಟಿ ಕೋಟಿ ಹಣ ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳಾ ಗ್ರಾಹಕರಿಗೆ ಸಂಬಂಧಿಸಿದ 3.38 ಕೋಟಿ ಹಣ ಲೂಟಿ ಮಾಡಲಾಗಿದೆ.

ಹಾವೇರಿ: ಮಹಿಳೆಯರ ಹೆಸರಲ್ಲಿ ಸಾಲ ಪಡೆದು ಕೋಟಿ ಕೋಟಿ ವಂಚನೆ, ಫೈನಾನ್ಸ್ ಸಂಸ್ಥೆ ಸಿಬ್ಬಂದಿ ಅರೆಸ್ಟ್
ಬಿ.ಎಸ್‌.ಎಸ್‌. ಮೈಕ್ರೋ ಫೈನಾನ್ಸ್‌ ಸಂಸ್ಥೆ
Follow us
TV9 Web
| Updated By: ಆಯೇಷಾ ಬಾನು

Updated on: Dec 28, 2023 | 11:32 AM

ಹಾವೇರಿ, ಡಿ. 28: ಮಹಿಳೆಯರ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ (Cheating) ಮಾಡಿದ ಆರೋಪ ಸಂಬಂಧ ಹಿರೇಕೆರೂರು ಟೌನ್​ ಠಾಣೆ ಪೊಲೀಸರು(Hirekerur Police Station) ಓರ್ವ ಆರೋಪಿಯನ್ನು ಬಂಧಿಸಿದ್ದಾರೆ (Arrest). ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ವಿದ್ಯಾನಗರದಲ್ಲಿರುವ ಫೈನಾನ್ಸ್ ಸಂಸ್ಥೆ ಓರ್ವ ಸಿಬ್ಬಂದಿಯನ್ನು ವಂಚನೆ ಆರೋಪದಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಬರೋಬ್ಬರಿ 3.38 ಕೋಟಿ ರೂಪಾಯಿ ಪಂಗನಾಮ ಹಾಕಿರುವುದಾಗಿ ಮಾಹಿತಿ ಸಿಕ್ಕಿದೆ.

ವಿದ್ಯಾನಗರದಲ್ಲಿರುವ ಬಿ.ಎಸ್‌.ಎಸ್‌. ಮೈಕ್ರೋ ಫೈನಾನ್ಸ್‌ ಸಂಸ್ಥೆಯ ಪ್ರಭಾರ ಕೇಂದ್ರ ವ್ಯವಸ್ಥಾಪಕ ಮತ್ತು ಕ್ಷೇತ್ರ ಕಚೇರಿ ವ್ಯವಸ್ಥಾಪಕರಿಬ್ಬರೂ ಸೇರಿಕೊಂಡು ಮಹಿಳೆಯರ ಹೆಸರಲ್ಲಿ ಕೋಟಿ ಕೋಟಿ ಹಣ ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳಾ ಗ್ರಾಹಕರಿಗೆ ಸಂಬಂಧಿಸಿದ 3.38 ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಹಿರೇಕೆರೂರು ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಭಾರ ಕೇಂದ್ರ ವ್ಯವಸ್ಥಾಪಕ ಶಿವಾನಂದಪ್ಪ ದ್ಯಾವನಕಟ್ಟೆ ಮತ್ತು ಕ್ಷೇತ್ರ ಕಚೇರಿ ವ್ಯವಸ್ಥಾಪಕ ಬಸವರಾಜಯ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು. ದೂರು ಆಧರಿಸಿ ಓರ್ವ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರೊಫೆಸರ್‌ಗಳಿಗೆ ₹ 11 ಕೋಟಿ ವಂಚನೆ: ಜೆಎನ್‌ಯು ಮಾಜಿ ಉದ್ಯೋಗಿ ಬಂಧನ

ಮಹಿಳೆಯರಿಗೆ 1.25 ಲಕ್ಷದವರೆಗೆ ಸಾಲ ನೀಡಲಾಗುತ್ತಿತ್ತು. ಮಹಿಳಾ ಸದಸ್ಯರ ದಾಖಲೆ ಬಳಸಿಕೊಂಡು ವಂಚನೆ ಮಾಡಲಾಗಿದೆ. 376 ಮಹಿಳಾ ಸದಸ್ಯರಿಗೆ 643 ಸಾಲದ ಯೋಜನೆ ನೀಡಿದಂತೆ ನಕಲಿ ಸಾಲ ಸೃಷ್ಟಿಸಿ 4.16 ಕೋಟಿ ಸಾಲ ನೀಡಿರುವಂತೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸಲಾಗಿದೆ. ಆರೋಪಿಗಳೂ ತಾವೇ ಸಾಲ ಪಡೆದುಕೊಂಡು ಕಂತಿನ ಹಣವನ್ನು ತಾವೇ ಸಂಸ್ಥೆಗೆ ಜಮೆ ಮಾಡುತ್ತಿದ್ದರು. ನಕಲಿ ಸಾಲದ 87.33 ಲಕ್ಷ ಮಾತ್ರ ಜಮಾ ಮಾಡಿದ್ದರು. ಉಳಿದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಆರೋಪಿಗಳು ಕಚೇರಿಯಲ್ಲಿ ನಕಲಿ ಕ್ಯಾಶ್ ಬುಕ್‌ ತಯಾರಿಸಿಕೊಂಡಿದ್ದರು. ಸದ್ಯ ಮಹಿಳೆಯರಿಗೆ ಗೊತ್ತಿಲ್ಲದೆ ಅವರ ಹೆಸರಲ್ಲಿ ವಂಚನೆ ಮಾಡಿದ ಬಗ್ಗೆ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಓರ್ವನ ಬಂಧನವಾಗಿದ್ದು ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ