ಬೆಂಗಳೂರು: ಎನ್.ಆರ್.ಸಂತೋಷ್ ನೇಮಕ ಪ್ರಶ್ನಿಸಿದ್ದ PILನ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದೆ.
ಎಸ್.ಉಮಾಪತಿ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಎನ್.ಆರ್.ಸಂತೋಷ್ ಶಾಸಕರಲ್ಲದಿದ್ದರೂ ನೇಮಕ ಮಾಡಲಾಗಿದೆಯೆಂದು ತಮ್ಮ ಪಿಐಎಲ್‌ನಲ್ಲಿ ಅರ್ಜಿದಾರ ಎಸ್.ಉಮಾಪತಿ ವಾದಿಸಿದ್ದರು. ಎನ್.ಆರ್.ಸಂತೋಷ್ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ರು. ಇಂತಹ ಹುದ್ದೆಗೆ ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಸರ್ಕಾರಿ ವಕೀಲರಿಗೆ ಹೈಕೋರ್ಟ್ ಪ್ರಶ್ನಿಸಿತು.
ಇದೀಗ, ಪಿಐಎಲ್‌ಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಜೊತೆಗೆ, ವಿಚಾರಣೆಯನ್ನು ಜನವರಿ 11ಕ್ಕೆ ಮುಂದೂಡಿದೆ.