AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ತಣ್ಣಗಾಯ್ತು ಕುಮಾರಸ್ವಾಮಿ ಕೋಪ: ಪಾದಯಾತ್ರೆ ಬಗ್ಗೆ ಅಧಿಕೃತ ನಿಲುವು ಪ್ರಕಟಿಸಿದ ಜೆಡಿಎಸ್

ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳಲ್ಲಿ ಭಿನ್ನಮತ ಉಂಟಾಗಿತ್ತು. ಪಾದಯಾತ್ರೆಗೆ ಹೆಚ್​ಡಿ ಕುಮಾರಸ್ವಾಮಿ ಮೊದಲು ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ ಇದೀಗ ಅವರ ಮನವೊಲಿಸಲಾಗಿದ್ದು, ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗಲಿದೆ ಎಂದು ಸ್ವತಃ ಕುಮಾರಸ್ವಾಮಿ ದೆಹಲಿಯಲ್ಲಿ ಹೇಳಿದ್ದಾರೆ.

ಕೊನೆಗೂ ತಣ್ಣಗಾಯ್ತು ಕುಮಾರಸ್ವಾಮಿ ಕೋಪ: ಪಾದಯಾತ್ರೆ ಬಗ್ಗೆ ಅಧಿಕೃತ ನಿಲುವು ಪ್ರಕಟಿಸಿದ ಜೆಡಿಎಸ್
ಕೊನೆಗೂ ತಣ್ಣಗಾಯ್ತು ಕುಮಾರಸ್ವಾಮಿ ಕೋಪ: ಪಾದಯಾತ್ರೆ ಬಗ್ಗೆ ಅಧಿಕೃತ ನಿಲುವು ಪ್ರಕಟಿಸಿದ ಜೆಡಿಎಸ್
ಹರೀಶ್ ಜಿ.ಆರ್​.
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 01, 2024 | 9:55 PM

Share

ದೆಹಲಿ/ಬೆಂಗಳೂರು, ಆಗಸ್ಟ್​ 01: ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ (Padayatra) ನಡೆಯುತ್ತೆ. ಪಾದಯಾತ್ರೆಯಲ್ಲಿ ಜೆಡಿಎಸ್​ ಕೂಡ ಭಾಗಿಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H. D. Kumaraswamy) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೇ ಪಕ್ಷದ ಕಾರ್ಯಕ್ರಮ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಇದೀಗ ಬಿಜೆಪಿ ನಾಯಕರ ಜೊತೆ ಮುಕ್ತ ಮನಸ್ಸಿನಿಂದ ಚರ್ಚಿಸಿದ್ದೇವೆ. ಈಗ ಎಲ್ಲ ಗೊಂದಲಗಳು ಬಗೆಹರಿದಿವೆ ಎಂದಿದ್ದಾರೆ.

ಪ್ರೀತಂಗೌಡ ನಮಗೆ ಮುಖ್ಯ ಸಮಸ್ಯೆ ಆಗಿರಲಿಲ್ಲ. ಪಾದಯಾತ್ರೆ ನಡೆಯಲಿದೆ, ಜೆಡಿಎಸ್ ಭಾಗಿಯಾಗಲಿದೆ. ಕೆಲವು ಸಣ್ಣಪುಟ್ಟ ವಿಚಾರದಲ್ಲಿ ಮುಕ್ತವಾಗಿ ಚರ್ಚೆ ಮಾಡಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಹೋಗಬೇಕೆಂದೆ ಕಳೆದ ಒಂದು ವರ್ಷದ ಹಿಂದೆ ಒಂದಾಗಿದ್ದೆವು ಎಂದು ಹೇಳಿದ್ದಾರೆ.

ಇದನ್ನೂ ಓದಿ: BJP JDS Padayatra: ಎಚ್​ಡಿಕೆ ಮನವೊಲಿಕೆ ಸಕ್ಸಸ್: ಜೆಡಿಎಸ್-ಬಿಜೆಪಿಯಿಂದ ಮೈಸೂರು ಪಾದಯಾತ್ರೆ ಫಿಕ್ಸ್

ಕೇವಲ ಪ್ರೀತಂಗೌಡ ನಮ್ಮ ಸಮಸ್ಯೆಯಲ್ಲ. ಅದೊಂದು ರೀತಿಯ ಉದಾಹರಣೆಗೆಯಷ್ಟೇ. ಪಾದಯಾತ್ರೆಯನ್ನ ಬಿಜೆಪಿಯ ಕಾರ್ಯಕ್ರಮದ ರೀತಿಯಲ್ಲಿ ಬಿಂಬಿಸೊದಕ್ಕೆ ಹೋಗಿದ್ದರು. ಪ್ರೀತಂಗೌಡ ಎಂಬ ಒಂದೇ ಕಾರಣಕ್ಕೆ ತೊಂದರೆಯಾಗಿಲ್ಲ. ಹಲವು ರೀತಿಯ ತಪ್ಪುಗಳಾಗಿದ್ವು, ಅದನ್ನೆಲ್ಲ ಕುಳಿತು ಸರಿಪಡಿಸುವ ಕೆಲಸವಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪಾದಯಾತ್ರೆ ವಿಚಾರವಾಗಿ ದೆಹಲಿಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಮನವೊಲಿಸಲು ಪ್ರಲ್ಹಾದ್​ ಜೋಶಿ, ರಾಧಾಮೋಹನ್ ದಾಸ್ ಮತ್ತು ವಿಜಯೇಂದ್ರ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇನ್ನು ನಡ್ಡಾ ಜೊತೆ ಫೋನ್ ಸಂಭಾಷಣೆ ವೇಳೆ ಪಾದಯಾತ್ರೆ ಪ್ಲ್ಯಾನ್ ಮಾಡುವ ಮೊದಲು ನಮ್ಮ ಜತೆ ಚರ್ಚಿಸಿಲ್ಲ ಹಳೇ ಮೈಸೂರಿನಲ್ಲಿ ನಮ್ಮ ಜೊತೆ ಚರ್ಚಿಸದೆ ಹೇಗೆ ಯಾತ್ರೆ ಸಾಧ್ಯ? ಅಂತ ಹೆಚ್​ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಮನವೊಲಿಕೆಗೆ ಸ್ಪಂದಿಸಿರುವ ಕುಮಾರಸ್ವಾಮಿ, ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಪಾದಯಾತ್ರೆ: ಜೆಡಿಎಸ್​​ ನಾಯಕರಿಗೊಂದು ವಿಶೇಷ ಮನವಿ ಮಾಡಿದ ಅಶೋಕ್

ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ ಸಣ್ಣಪುಟ್ಟ ಗೊಂದಲ ಇದ್ದರೂ ಶನಿವಾರದಿಂದ ಮೈಸೂರು ಪಾದಯಾತ್ರೆ ಆರಂಭವಾಗುತ್ತೆ. ಕುಮಾರಸ್ವಾಮಿಯೇ ಪಾದಯಾತ್ರೆಗೆ ಚಾಲನೆ ನೀಡುತ್ತಾರೆ ಎಂದು ಹೇಳಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್,  ಪ್ರಲ್ಹಾದ್​ ಜೋಶಿ ಪಾದಯಾತ್ರೆ ನಡೆಯುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:55 pm, Thu, 1 August 24