ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆ ಆಗುತ್ತಾ? ಕಾರಣಗಳೇನು? ಡಿಕೆಶಿ ಕೊಟ್ಟ ಸುಳಿವು

ಬೈ ಎಲೆಕ್ಷನ್ ಗೆದ್ದ ಖುಷಿಯಲ್ಲಿರುವ ಸರ್ಕಾರದ ವಿರುದ್ಧ ಸಾಲು ಸಾಲು ಹಗರಣ ಆರೋಪದ ತಲೆಬಿಸಿಯಲ್ಲಿರುವ ಸಿದ್ದರಾಮಯ್ಯಗೆ ಸಂಪುಟ ಪುನರ್‌ ರಚನೆಯ ತಲೆನೋವು ಶುರುವಾಗಿದೆ. ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಸಂಪುಟ ಪುನರ್‌ ರಚನೆಯ ಚರ್ಚೆ ಜೋರಾಗಿದೆ. ಇನ್ನು ಈ ಸಂಬಂಧ ಡಿಕೆ ಶಿವಕುಮಾರ್​​ ಸುಳಿವು ಸಹ ನೀಡಿದ್ದು, ಸಚಿವಾಕಾಂಕ್ಷಿಗಳು ಎದ್ದು ನಿಲ್ಲುವಂತೆ ಮಾಡಿದೆ. ಇನ್ನು ಹಲವು ಸಚಿವರಿಗೆ ನಡುಕ ಶುರುವಾಗಿದೆ.

ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆ ಆಗುತ್ತಾ? ಕಾರಣಗಳೇನು?  ಡಿಕೆಶಿ ಕೊಟ್ಟ ಸುಳಿವು
ಸಿದ್ದರಾಮಯ್ಯ, ಡಿಕೆ ಶಿವಕುಮಾರ್​
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 26, 2024 | 5:46 PM

ಬೆಂಗಳೂರು, (ನವೆಂಬರ್ 26): ಉಪಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಬಲ ತಂದುಕೊಟ್ಟಿದೆ. ಕರ್ನಾಟಕದ ಮೂರಕ್ಕೆ ಮೂರು ವಿಧಾನಸಭಾ ಉಪಚುನಾವಣೆಯಲ್ಲೂ ಕ್ಲೀನ್​ಸ್ವೀಪ್ ಆಗಿದೆ. ಬೈಎಲೆಕ್ಷನ್​ ಗೆಲುವಿನ ಉತ್ಸಾಹದಲ್ಲಿರೋ ಕಾಂಗ್ರೆಸ್​ಗೆ ಒಂದ್ಕಡೆ ಖುಷಿಯಲ್ಲಿದ್ರೆ, ಮತ್ತೊಂದ್ಕಡೆ ದೊಡ್ಡ ಸವಾಲುಗಳೇ ಇದೆ. ಸರ್ಕಾರ ವರ್ಚಸ್ಸನ್ನ ಹೆಚ್ಚಿಸುವುದು ಮುಖ್ಯ ಆಗಿದೆ. ಬಲಿಷ್ಠವಾಗಿರೋ ಸರ್ಕಾರದಲ್ಲಿ ಒಂದೇ ಒಂದು ಯಡವಟ್ಟಾದ್ರೂ ವಿಪಕ್ಷಗಳಿಗೆ ಅಸ್ತ್ರ ಆಗುವುದರಲ್ಲಿ ಅನುಮಾನವೇ ಇಲ್ಲ, ಹೀಗಾಗಿ ಮೊದಲ ಹೆಜ್ಜೆಯಾಗಿ ಸಚಿವರ ಸಾಧನೆಯನ್ನ ಪರಾಮರ್ಶೆ ಮಾಡುವುದಕ್ಕೆ ವರಿಷ್ಠರು ಮುಂದಾಗಿದ್ದಾರೆ. ಇದೀಗ ಸಂಪುಟದ ಮಂತ್ರಿ ಮಹೋದೆಯರ ಎದೆಯಲ್ಲಿ ನಡುಕ ಶುರುವಾಗಿದೆ.

ಈಗಾಗಲೇ ಕೆಲ ಸಚಿವರ ಕಾರ್ಯವೈಖರಿಯ ಬಗ್ಗೆ ಹೈಕಮಾಂಡ್​ಗೂ ದೂರು ಹೋಗಿದೆ. ಕೆಲ ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ, ಸರಿಯಾದ ರೀತಿಯಲ್ಲೂ ಕೆಲಸ ಮಾಡುತ್ತಿಲ್ಲ ಎಂದು ಎಐಸಿಸಿ ನಾಯಕರಿಗೇ ಕಂಪ್ಲೆಂಟ್​ ಮಾಡಿದ್ದಾರಂತೆ. ಹೀಗಾಗಿ ವರಿಷ್ಠರಿಗೂ ಬೇಸರ ತಂದಿದೆಯಂತೆ. ಸಚಿವರೇ ಕೆಲಸ ಮಾಡದೇ ಇರುವುದು, ವಿಧಾನಸೌಧಕ್ಕೆ ಬಾರದಿರುವುದು ಹೀಗೆ ಹತ್ತು, ಹಲವು ದೂರುಗಳು ಬಂದಿವೆಯಂತೆ.

ಇದನ್ನೂ ಓದಿ: ಶಿಗ್ಗಾಂವಿ ಬೈ ಎಲೆಕ್ಷನ್​ ರಿಸಲ್ಟ್ ಪ್ರಕಟವಾದ ಎರಡೇ ದಿನದಲ್ಲಿ ಖಾದ್ರಿಗೆ ಬಂಪರ್ ಗಿಫ್ಟ್​

ಇನ್ನು ಸಚಿವರೇ ಕೆಲಸ ಮಾಡದಿರುವುದರಿಂದ ಅಧಿಕಾರಿಗಳು ಕೂಡ ಕೆಲಸ ಮಾಡದೇ ಹಳ್ಳ ಹಿಡಿಯುತ್ತಿದ್ದಾರೆ. ಆಯಾ ಸಚಿವರುಗಳು ಇಲಾಖೆಯಲ್ಲಿ ಏನೇನ್​ ಕೆಲಸ ಮಾಡ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ, ಏನೇನು ಪ್ರಗತಿ ಸಾಧಿಸಿದ್ದಾರೆ ಎನ್ನುವುದು ಸಹ ಗೊತ್ತಾಗುತ್ತಿಲ್ಲ. ಇದರಿಂದಾಗಿ ಸರ್ಕಾರದ ವರ್ಚಸ್ಸು ವೃದ್ಧಿಯಾಗುತ್ತಿಲ್ಲ ಎನ್ನುವ ಅಪವಾದ ಇದೆ. ಈ ಎಲ್ಲಾ ಗೊಂದಲ, ಗೋಜಲು ಬಗೆಹರಿಸಿಕೊಳ್ಳೊದು ಪ್ರಮುಖ ಉದ್ದೇಶ ಆಗಿದೆ. ಹೀಗಾಗಿ ಆಡಳಿತಕ್ಕೆ ಮತ್ತಷ್ಟು ಚುರುಕು ಮುಟ್ಟಿಸುವ ದೃಷ್ಟಿಯಿಂದ ಸಂಪುಟ ಪುನಾರಚನೆಯ ಮಾತುಗಳು ಇದೀಗ ಕೇಳಿ ಬರುತ್ತಿದೆ.

ಸಂಪುಟ ಪುನಾರಚನೆಗೆ ಕಾರಣಗಳೇನು?

ಇನ್ನು ಸಚಿವ ಸಂಪುಟ ಸರ್ಜರಿಗೆ ಪ್ರಮುಖ ಕಾರಣವೇನು ಎನ್ನುವುದನ್ನು ನೋಡುವುದಾದರೆ, ಸರ್ಕಾರದ ಮತ್ತಷ್ಟು ವರ್ಚಸ್ಸು ಹೆಚ್ಚಳದ ಉದ್ದೇಶ, ಆಡಳಿತಕ್ಕೆ ಮತ್ತಷ್ಟು ಚುರುಕು ಮುಟ್ಟಿಸುವುದು, ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವ ಕಾರಣ, ಸ್ಥಳೀಯರ ಮಟ್ಟದಲ್ಲಿ ಕಾರ್ಯಕರ್ತರು, ಶಾಸಕರ ಸಂಪರ್ಕ, ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟು ಬಲ ತುಂಬುವುದು, ಗ್ಯಾರಂಟಿಗಳ ಸಮರ್ಪಕ ಅನುಷ್ಫಾನ ಮಾಡುವುದು.

ಸಚಿವ ಸಂಪುಟ ಪುನಾರಚನೆಗೆ ಡಿಕೆಶಿ ಪರೋಕ್ಷ ಸುಳಿವು

ಕರ್ನಾಟಕದಲ್ಲಿ ಉಪಚುನಾವನೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಸಂಪುಟ ಪುನಾರಚನೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದರ ಮಧ್ಯ ಇದೀಗ ಡಿಸಿಎಂ ಡಿಕೆ.ಶಿವಕುಮಾರ್ ಅವರೇ ಪರೋಕ್ಷವಾಗಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಸುಳಿವೊಂದು ಕೊಟ್ಟಿದ್ದಾರೆ. ಅಂಥಾ ಸೋನಿಯಾ ಗಾಂಧಿಯೇ ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ್ದಾರೆ. ನಾವು ಕೆಲ ಮಂತ್ರಿಗಳಿಗೂ 2 ವರ್ಷದೊಳಗೆ ಅಧಿಕಾರ ತ್ಯಾಗ ಮಾಡಬೇಕು ಎಂದು ಸಂದೇಶ ಕೊಟ್ಟಿದ್ದೇವೆ ಅಂತಾ ಸುಳಿವು ಕೊಟ್ಟಿದ್ದಾರೆ.

ಅಬಕಾರಿ ಸಚಿವ ತಿಮ್ಮಾಪುರ ಮೇಲಿನ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದ್ದು ಅವರನ್ನು ಸಂಪುಟದಿಂದ ವಜಾ ಮಾಡಬೇಕೆನ್ನುವ ಆಗ್ರಹಗಳು ಕೇಳಿಬರುತ್ತಿವೆ. ಕಾಂಗ್ರೆಸ್​​ನ ಒಂದು ಬಣ, ಆರ್ ಬಿ ತಿಮ್ಮಾಪುರ ಖಾತೆಯಿಂದಲೇ‌ ಕೈ ಬಿಡಬೇಕು ಎನ್ನುತ್ತಿದ್ದರೆ, ಮತ್ತೊಂದು ಬಣ ಖಾತೆ ಬದಲಾವಣೆಗೆ ಮಾತ್ರ ಚರ್ಚೆ ಹಂತದಲ್ಲಿ ಎನ್ನುತ್ತಿಸಡ. ಇನ್ನು ಒಬ್ಬ ಸಚಿವರ ಖಾತೆ ಬದಲಾಯಿಸಿದರೆ ಮೂರ್ನಾಲ್ಕು ಸಚಿವರ ಖಾತೆಯೂ ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಸಿದ್ದರಾಮಯ್ಯನವರ ಆಪ್ತರು, ಸಂಪುಟ ವಿಸ್ತರಣೆ ಬದಲು ಪುನರ್ ರಚೆನೆ ಸಾಕು ಎನ್ನುತ್ತಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಡಿಮ್ಯಾಂಡ್

ಇನ್ನು ಸಂಚಿವ ಸಂಪುಟದ ಬದಲಾವಣೆ ಬಗ್ಗೆ ಚರ್ಚೆ ಮುನ್ನಲೆಗೆ ಬರುತ್ತಿದ್ದಂತೆಯೇ ಸಚಿವ ಸ್ಥಾನದ ಆಕಾಂಕ್ಷಿಗಳು ಎದ್ದು ಕುಳಿತ್ತಿದ್ದಾರೆ. ಮಾಗಡಿ ಬಾಲಕೃಷ್ಣ, ಮಳವಳ್ಳಿ ನರೇಂದ್ರ ಸ್ವಾಮಿ, ಆಸಿಫ್ ಸೇಠ್ ಅವರು ಸಚಿವ ಸ್ಥಾನಕ್ಕೆ ಬಹಿರಂಗ ಬೇಡಿಕ ಇಟ್ಟಿದ್ದಾರೆ. ಇನ್ನು ಅರ್ಹತೆ ಯೋಗ್ಯತೆ ಆಧಾರದ ಮೇಲೆ ಸಚಿವ ಸ್ಥಾನ ಬೇಕೇ ಬೇಕು ಎನ್ನುವುದು ಹಿರಿಯರ ವಾದ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಲಕ್ಣ್ಮಣ ಸವದಿ, ಎಂ ಕೃಷ್ಣಪ್ಪ, ಬಿಕೆ ಹರಿಪ್ರಸಾದ್, ಬೇಳೂರು ಗೋಪಾಲಕೃಷ್ಣ, ಬಿಕೆ ಸಂಗಮೇಶ್, ಬಂಗಾರಪೇಟೆ ನಾರಾಯಣಸ್ವಾಮಿ, ಮಾಲೂರು ನಂಜೇಗೌಡ, ಉತ್ತರ ಕರ್ನಾಟಕ ಭಾಗದ ಹಲವಾರು ಮಂದಿ ಹಿರಿಯರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಮೊದಲ ಬಾರಿ ಆಯ್ಕೆಯಾದ ಶಾಸಕರಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ