ಆ ಕಡೆ ಹೋಗಿದ್ದಕ್ಕೆ ಮಗಳನ್ನು ಕಳೆದುಕೊಂಡೆ: ಕಾಂಗ್ರೆಸ್ ಸೇರಿದ್ದಕ್ಕೆ ಪರೋಕ್ಷವಾಗಿ ನೇಹಾ ತಂದೆ ಅಸಮಾಧಾನ
ಹುಬ್ಬಳ್ಳಿ ನಗರದ ಬಿಡನಾಳದಲ್ಲಿರುವ ನಿರಂಜನ್ ಹಿರೇಮಠ ನಿವಾಸಕ್ಕೆ ಶಾಸಕ ಯತ್ನಾಳ್ ಭೇಟಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ನಾನು ಮಹೇಶ್ ಟೆಂಗಿನಕಾಯಿ ಶಿಷ್ಯ, ಆ ಕಡೆ ಹೋಗಿದ್ದಕ್ಕೆ ಮಗಳನ್ನು ಕಳೆದುಕೊಂಡೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸೇರಿದ್ದಕ್ಕೆ ನೇಹಾ ತಂದೆ ನಿರಂಜನ್ ಹಿರೇಮಠ ಶಾಸಕ ಯತ್ನಾಳ್ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ನನಗೆ ಹೀಗೆ ಆದರೆ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿ, ಏಪ್ರಿಲ್ 19: ನಾನು ಮಹೇಶ್ ಟೆಂಗಿನಕಾಯಿ ಶಿಷ್ಯ, ಆ ಕಡೆ ಹೋಗಿದ್ದಕ್ಕೆ ಮಗಳನ್ನು ಕಳೆದುಕೊಂಡೆ ಎಂದು ಪರೋಕ್ಷವಾಗಿ ಕಾಂಗ್ರೆಸ್ (Congress) ಸೇರಿದ್ದಕ್ಕೆ ನಿರಂಜನ್ ಹಿರೇಮಠ (Niranjan Hiremath) ಶಾಸಕ ಯತ್ನಾಳ್ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ಕುಮ್ಮಕ್ಕು ಕೊಟ್ಟ ಕಾರಣಕ್ಕೆ ಮಗಳನ್ನು ಕಳೆದುಕೊಂಡೆ. ಇದರಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಯತ್ನಾಳ್ ಹೇಳಿದ್ದಾರೆ. ನಾನು ಸಾರ್ವಜನಿಕ ಬದುಕಿನಲ್ಲಿ ಇರೋನು. ನನಗೆ ಹೀಗೆ ಆದರೆ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ. ನಿಮ್ಮ ಪಕ್ಷದವರು ಯಾರೂ ಇದನ್ನು ಖಂಡನೆ ಮಾಡಲ್ಲ ಎಂದ ಯತ್ನಾಳ್ ಹೇಳಿದ್ದು, ನೀವೇ ಮನಸು ಮಾಡಿ ಎಂದು ಕೈಮುಗಿದು ನಿರಂಜನ್ ಕೇಳಿಕೊಂಡಿದ್ದಾರೆ.
ನೇಹಾಳನ್ನು ಕೊಲೆ ಮಾಡುತ್ತಿರುವ ಸಿಸಿಟಿವಿ ದೃಶ್ಯ ಯತ್ನಾಳ್‌ಗೆ ಜನರು ತೋರಿಸಿದರು. ಸ್ವಪಕ್ಷದವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಯತ್ನಾಳ್, ಶಿವಮೊಗ್ಗದಲ್ಲಿ ನಮ್ಮ ಸರ್ಕಾರ ಇದ್ದಾಗ ಏನು ಆಯ್ತು. ಅವರೆಲ್ಲ ದನಕಡಿಯೋರು ಎಂದು ವಾಗ್ದಾಳಿ ಮಾಡಿದ್ದರು. ಈ ವೇಳೆ ನೀವು ಸಿಎಂ ಆಗಿದರೆ ಏನೂ ಸಮಸ್ಯೆ ಬರ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಭಾರತದಲ್ಲಿ ಲವ್ ಜಿಹಾದ್ನ ದೊಡ್ಡ ಜಾಲವಿದೆ: ಶಾಸಕ ಯತ್ನಾಳ್
ಹುಬ್ಬಳ್ಳಿ ನಗರದ ಬಿಡನಾಳದಲ್ಲಿರುವ ನಿರಂಜನ್ ಹಿರೇಮಠ ನಿವಾಸಕ್ಕೆ ಶಾಸಕ ಯತ್ನಾಳ್ ಭೇಟಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಲವ್ ಜಿಹಾದ್ನ ದೊಡ್ಡ ಜಾಲ ಇದೆ. ಹಿಂದೂ ಯುವತಿ ಟಾರ್ಗೆಟ್ ಮಾಡಿ ಲವ್ ಮಾಡುವುದು ಹಾಗೂ ಮತಾಂತರ ಮಾಡಲಿಕ್ಕೆ 10-20 ಲಕ್ಷ ರೂ. ಹಣ ಕೊಡುವ ಕೆಲಸ ಆಗುತ್ತಿದೆ. ಇಂತಹ ದೊಡ್ಡದೊಂದು ಜಾಲ ಇರುವುದನ್ನು ನಾನು ಅಲ್ಲಗಳೆಯಲ್ಲ. ಆದರೆ ನೇಹಾ ಹಿರೇಮಠ ಯಾವುದೇ ಆಮಿಷಕ್ಕೂ ಒಳಗಾಗಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ನೇಹಾ ಹತ್ಯೆ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸುತ್ತೇನೆ: ಹಂತಕ ಫಯಾಜ್ ತಂದೆ ಕಣ್ಣೀರು
ಅಕಸ್ಮಾತ್ ನೇಹಾ ಮತಾಂತರಕ್ಕೆ ಒಳಗಾಗಿದ್ರೆ ಬುರ್ಖಾ ಹಾಕೋತಿದ್ಲು. ದೇಶದಲ್ಲಿ ಮುಸ್ಲಿಂ ಯುವತಿಯರ ಯಾವುದಾದರೂ ಕೊಲೆಯಾಗಿದ್ಯಾ. ಮುಸ್ಲಿಂ ಯುವತಿ ಕೈಕೊಟ್ರೆ ಹಿಂದೂಗಳು ರೈಲ್ವೆ ಹಳಿಗೆ ಬಿದ್ದು ಸಾಯಿತಾರೆ. ಯಾರು ಕೂಡ ಕೊಲೆ ಮಾಡುವಂತಹ ಹಲ್ಕಾ ಕೆಲಸ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಮೂರು ತಿಂಗಳಲ್ಲಿ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು
ರಾಜ್ಯದ ಸಿಎಂ ಹಾಗೂ ಗೃಹಮಂತ್ರಿ ಬೇಜಾವಾಬ್ದಾರಿತನದ ಹೇಳಿಕೆ ನೀಡುತ್ತಾರೆ. ಗೃಹ ಸಚಿವರಿಗೆ ಮಾನ ಮರ್ಯಾದೆ ಇದೆಯಾ? ಘಟನೆ ಬಗ್ಗೆ ಯಾವುದೇ ಮಾಹಿತಿ ತೆಗೆದುಕೊಳ್ಳದೇ ಈ ರೀತಿ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ಇದೆ. ವೋಟ್ ಬ್ಯಾಂಕ್ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಇದೇ ರೀತಿ ಘಟನೆಗಳು ನಡೆದರೆ ರಕ್ಷಣೆ ಮಾಡುವವ ಯಾರು. ನಿಮಗೆ ತಾಕತ್ ಇದ್ದರೆ ಇಂತವರನ್ನ ಎನ್ಕೌಂಟರ್ ಮಾಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Hubballi: ನೇಹಾ ಹತ್ಯೆ ಕೇಸ್: ಫಯಾಜ್ ರುಂಡ ಚೆಂಡಾಡಿದವರಿಗೆ 10 ಲಕ್ಷ ರೂ ಬಹುಮಾನ ಘೋಷಣೆ
ನೇಹಾ ಕುಟುಂಬಸ್ಥರ ಜೊತೆ ನಾವೂ ಕೂಡ ಕಾನೂನು ಹೋರಾಟ ಮಾಡುತ್ತೇವೆ. ಆರೋಪಿಗೆ ಮೂರು ತಿಂಗಳಲ್ಲಿ ಶಿಕ್ಷೆ ನೀಡಬೇಕು ಅನ್ನೋದು ಸುಪ್ರೀಂಕೋರ್ಟ್ ನಿಯಮ ಇದೆ. ಮೂರು ತಿಂಗಳಲ್ಲಿ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.