ಬೆಂಗಳೂರಿನಲ್ಲಿ IPL ಪಂದ್ಯ ನಡೆಸಲು ಕೆಲ ಷರತ್ತು ಹಾಕಿ ಅನುಮತಿ ನೀಡಿದ ಸರ್ಕಾರ: ಏನವು ಕಂಡಿಷನ್ಸ್?

ಐಪಿಎಲ್‌ನ ಹಾಲಿ ಚಾಂಪಿಯನ್ಸ್ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' (ಆರ್​​ಸಿಬಿ) ತಂಡವು ತನ್ನ 5 ತವರು ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಇದಕ್ಕೆ ಇದೀಗ ರಾಜ್ಯ ಸರ್ಕಾರವೂ ಸಹ ಕೆಲ ಷರತ್ತುಗಳೊಂದಿಗೆ ಅನುಮತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಹಾಗಾದ್ರೆ, ಆದೇಶದಲ್ಲೇನಿದೆ? ಕಂಡಿಷನ್ಸ್​​ ಏನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ IPL ಪಂದ್ಯ ನಡೆಸಲು ಕೆಲ ಷರತ್ತು ಹಾಕಿ ಅನುಮತಿ ನೀಡಿದ ಸರ್ಕಾರ: ಏನವು ಕಂಡಿಷನ್ಸ್?
RCB
Edited By:

Updated on: Mar 04, 2026 | 2:56 PM

ಬೆಂಗಳೂರು, (ಮಾರ್ಚ್ 04): ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ (IPL) ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ (rcb) ತನ್ನ ತವರು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Bengaluru chinnaswamy stadium) ಮರಳಿ ಕಣಕ್ಕಿಳಿಯುವುದಾಗಿ ಮಂಗಳವಾರ ಘೋಷಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಸಹ ಇಂದು (ಮಾರ್ಚ್ 04)  ಪ್ರಮುಖ ಆರು  ಷರತ್ತುಗಳೊಂದಿಗೆ ಬೆಂಗಳೂರಿನಲ್ಲಿ ಪಂದ್ಯ ನಡೆಸಲು ಅನುಮತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ಈ ಬಾರಿ ಐಪಿಎಲ್ ಪಂದ್ಯಗಳು ನಡೆಯುತ್ತಾ ಇಲ್ಲಾ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ.

ತಜ್ಞರ ಸಮಿತಿಯ ಶಿಫಾರಸ್ಸಿನನ್ವಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ಸೇರಿದಂತೆ ಪಂದ್ಯಗಳನ್ನು ನಡೆಸಲು KSCAಗೆ ತಾತ್ಕಾಲಿಕ ಅನುಮತಿ ನೀಡಿ ಆದೇಶ ಹೊರಡಿಸಿದೆ. ಆದ್ರೆ, ಸಮಿತಿ ಸೂಚಿಸಿದ ಶಿಫಾರಸುಗಳನ್ನ ಅನುಷ್ಠಾನಕ್ಕೆ ತರಬೇಕು ಎಂದು ಆದೇಶದಲ್ಲಿ ಸೂಚನೆ ನೀಡಿದೆ.

ಇದನ್ನೂ ಓದಿ: IPL 2026: ಬೆಂಗಳೂರಿನಲ್ಲಿ ಆಡಲು ಒಪ್ಪಿದ ಆರ್​ಸಿಬಿ; ಚಿನ್ನಸ್ವಾಮಿಯಲ್ಲೇ ಉದ್ಘಾಟನಾ ಪಂದ್ಯ

ಪಂದ್ಯ ನಡೆಸಲು ಆರು ಷರತ್ತು ವಿಧಿಸಿದ ಸರ್ಕಾರ

  1. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ನಿಯತಕಾಲಿಕ ಪ್ರಗತಿ ವರದಿ ಪಡೆಯುವುದು.
  2.  ವಾಸ್ತವಿಕವಾಗಿ ಕ್ರೀಡಾಂಗಣದಲ್ಲಿ ಅನುಷ್ಠಾನಗೊಳಿಸಿರುವುದನ್ನ ಪರಾಮರ್ಶಿಸುವುದು.
  3.  ನಿಗದಿಪಡಿಸಿದಂತೆ ಅಥವಾ ಪರಿಷ್ಕರಿಸಿದಂತೆ ಜನಸಂದಣಿ ಸಾಮರ್ಥ್ಯ ನಿಯಂತ್ರಿಸುವುದು.
  4. ಅಗತ್ಯವಿದ್ದರೆ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು KSCAಗೆ ನಿರ್ದೇಶನಗಳನ್ನ ನೀಡುವುದು.
  5.  ಆದೇಶಗಳ ಉಲ್ಲಂಘನೆ ಮಾಡಿದರೆ ಅನುಮತಿ ಹಿಂಪಡೆಯುವುದು.
  6.  2ನೇ ಹಂತ ಮತ್ತು 3ನೇ ಹಂತಗಳಲ್ಲಿ ಕೈಗೊಂಡಿರುವ ಮಧ್ಯಮ ಮತ್ತು ದೀರ್ಘಾವಧಿಯ ಕಾಮಗಾರಿಗಳನ್ನು ಮುಂದುವರೆಸುವ ಬಗ್ಗೆ ನಿಗಾವಹಿಸುವುದು.

ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತ ಘಟನೆ ಬಳಿಕ ಸರ್ಕಾರ ನೇಮಿಸಿದ್ದ ನ್ಯಾ.ಕುನ್ಹಾ ಸಮಿತಿ ಹಲವು ಶಿಫಾರಸುಗಳನ್ನು ಮಾಡಿತ್ತು. ಸಮಿತಿ ಶಿಫಾರಸಿನಲ್ಲಿ ಪ್ರವೇಶ ದ್ವಾರಗಳನ್ನು 6 ಮೀ.ಗೆ ವಿಸ್ತರಿಸಬೇಕು ಎಂದಿತ್ತು. ಆದರೆ ಕೆಎಸ್‌ಸಿಎ ದ್ವಾರಗಳ ಅಗಲವನ್ನು 9 ಮೀ.ಗೆ ವಿಸ್ತರಿಸಿದೆ. ಇದರಿಂದ ದ್ವಾರಗಳ ಬಳಿ ನೂಕುನುಗ್ಗಲು ತಪ್ಪಿಸಬಹುದಾಗಿದೆ. ಹೀಗೆ ಸಮಿತಿಯು ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದ್ದು, ಅವುಗಳನ್ನ ಪಾಲಿಸುವಂತೆ ಸರ್ಕಾರ ತಿಳಿಸಿದೆ.

Published On - 2:52 pm, Wed, 4 March 26

Follow Us