ಐಟಿ ಅಂದ್ರೆ ಇನ್ಫಾರ್ಮೇಷನ್​ ಟೆಕ್ನಾಲಜಿ ಮಾತ್ರ ಅಲ್ಲ, ಇದು ಇಂಡಿಯಾ ಟುಮಾರೋ: ಅನುರಾಗ್ ಠಾಕೂರ್

ಬಿಜೆಪಿ ವೃತ್ತಿಪರ, ವಾಣಿಜ್ಯ ಪ್ರಕೋಷ್ಠದಿಂದ ನಗರದ ಖಾಸಗಿ ಹೋಟೆಲ್​​ನಲ್ಲಿ ಐಟಿ ಉದ್ಯೋಗಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಐಟಿ ಅಂದರೆ ಇನ್ಫಾರ್ಮೇಷನ್​ ಟೆಕ್ನಾಲಜಿ ಮಾತ್ರ ಅಲ್ಲ. ಇದು ಇಂಡಿಯಾ ಟುಮಾರೋ ಅಂತಾ ಹೇಳಬಹುದು. ಪ್ರಧಾನಿ ಮೋದಿ ಬಂದು ದೇಶದ ಚಿತ್ರಣ ಬದಲು ಮಾಡಿದ್ದಾರೆ. ಕಳೆದ‌ 10 ವರ್ಷದಲ್ಲಿ ದೇಶದ ಆರ್ಥಿಕತೆ ಹೆಚ್ಚಾಗಿದೆ ಎಂದಿದ್ದಾರೆ.

ಐಟಿ ಅಂದ್ರೆ ಇನ್ಫಾರ್ಮೇಷನ್​ ಟೆಕ್ನಾಲಜಿ ಮಾತ್ರ ಅಲ್ಲ, ಇದು ಇಂಡಿಯಾ ಟುಮಾರೋ: ಅನುರಾಗ್ ಠಾಕೂರ್
ಕೇಂದ್ರ ಸಚಿವ ಅನುರಾಗ್ ಠಾಕೂರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 04, 2024 | 8:41 PM

ಬೆಂಗಳೂರು, ಏಪ್ರಿಲ್​ 04: ಐಟಿ ಅಂದರೆ ಇನ್ಫಾರ್ಮೇಷನ್​ ಟೆಕ್ನಾಲಜಿ ಮಾತ್ರ ಅಲ್ಲ. ಇದು ಇಂಡಿಯಾ ಟುಮಾರೋ ಅಂತಾ ಹೇಳಬಹುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ. ಬಿಜೆಪಿ ವೃತ್ತಿಪರ, ವಾಣಿಜ್ಯ ಪ್ರಕೋಷ್ಠದಿಂದ ನಗರದ ಖಾಸಗಿ ಹೋಟೆಲ್​​ನಲ್ಲಿ ಐಟಿ ಉದ್ಯೋಗಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಬಂದು ದೇಶದ ಚಿತ್ರಣ ಬದಲು ಮಾಡಿದ್ದಾರೆ. ಕಳೆದ‌ 10 ವರ್ಷದಲ್ಲಿ ದೇಶದ ಆರ್ಥಿಕತೆ ಹೆಚ್ಚಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೇಶ ಬೆಳವಣಿಗೆ ಕಂಡಿದೆ. ಸ್ಟಾರ್ಟ್​​ಅಪ್ ಕ್ಷೇತ್ರಕ್ಕೆ ನಮ್ಮ ಸರ್ಕಾರ ಸಾಕಷ್ಟು ಬೆಂಬಲ‌ ನೀಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಬೆಳೆವಣಿಗೆಯಾಗಿದೆ. ದೇಶದ 20 ನಗರಗಳಲ್ಲಿ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿವೆ ಎಂದು ಹೇಳಿದ್ದಾರೆ.

ಮುಂದಿ ಮೂರು‌ ವರ್ಷದಲ್ಲಿ ಭಾರತ ಮೂರನೇ ಸ್ಥಾನಕ್ಕೆ ಏರಲಿದೆ. 2014 ರಲ್ಲಿ ಬ್ಯಾಂಕ್ ಅಕೌಂಟ್ ‌ಓಪನ್ ಮಾಡುವುದಕ್ಕೆ 500 ರೂ ಕೇಳುತ್ತಿದ್ದರು. ಆದರೆ ಮೋದಿ ಬಂದ ಮೇಲೆ ಜಿರೋ ಬ್ಯಾಲೆನ್ಸ್​​ನಲ್ಲಿ‌ಬ್ಯಾಂಕ್ ಖಾತೆ ತೆರೆಯಬಹುದು. ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಬೆಳವಣಿಗೆ ಕಂಡಿದೆ. ಇದು ಎಐ ಜಮಾನಾ. ಎಲ್ಲಾ ಕಡೆ ಎಐ ಬಳಕೆಯಾಗುತ್ತಿದೆ. ಸ್ಟಾರ್ಟ್ ಅಪ್ ಕ್ಷೇತ್ರಕ್ಕೆ ನಮ್ಮ ಸರ್ಕಾರ ಸಾಕಷ್ಟು ಬೆಂಬಲ‌ ನೀಡಿದೆ. 10 ವರ್ಷದಲ್ಲಿ 25 ಕೋಟಿ ಜನ ಬಡತನ ರೇಖೆಯಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ: WITT 2024: ಕ್ರಿಕೆಟಿಗನಾಗ ಬಯಸಿದ್ದೆ, ಆದರೆ ರಾಜಕಾರಣಿಯಾದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್

ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಬೆಳೆವಣಿಗೆಯಾಗಿದೆ. ಈ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್‌ ಹೆಚ್ಚಾಗಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಕಂಪನಿಗಳಿಗೆ ಸರ್ಕಾರ ಸಹಕಾರ ನೀಡಿ, ಅವರಲ್ಲಿ ಉತ್ಸಾಹ ಹೆಚ್ಚಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿದೆ. ವ್ಯವಹಾರ ಮಾಡುವವರಿಗೆ ಸಾಲ ನೀಡಲಾಗುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ಸ್ಟಾರ್ಟ್ ಅಪ್ ಹೆಚ್ಚಿಸಿದೆ. ದೇಶದಲ್ಲಿ‌ ಯೂನಿಕಾರ್ನ್ ಗಳ‌ ಸಂಖ್ಯೆ ಕೂಡ ಏರಿಕೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ದೇಶದಲ್ಲಿ ಒಂದೇ ಗ್ಯಾರಂಟಿ ಅದು ಮೋದಿ, ಜನ ಅವರನ್ನು ಮಾತ್ರ ನಂಬುತ್ತಾರೆ: ಅನುರಾಗ್ ಠಾಕೂರ್

ದೇಶದ ಸಣ್ಣ ಸಣ್ಣ ಗ್ರಾಮಗಳಲ್ಲೂ ಅಂತರಜಾಲ ಸೇವೆ ಇದೆ. ಪ್ರತಿಯೊಬ್ಬರ ಬಳಿ ಸ್ಮಾರ್ಟ್ ಫೋನ್​ಗಳಿದ್ದು, ಎಲ್ಲರೂ ಆನ್ ಲೈನ್, ಜೀ ಪೇ ಮಾಡುತ್ತಿದ್ದಾರೆ. ಸ್ಕ್ಯಾನ್ ಮಾಡಿ 10 ರೂ ಟೀ, ಕಾಫಿ ಕುಡಿಯುತ್ತಿದ್ದಾರೆ. ಕ್ಯಾಷ್‌ಲೆಸ್ ಜಮಾನ ಬಂದಿದೆ. ದೇಶದ‌ಲ್ಲಿ ಹೆದ್ದಾರಿ ರಸ್ತೆಗಳು ಹೆಚ್ಚಾಗಿದೆ. ದೇಶದಲ್ಲಿ 115 ಏರ್‌ಪೋರ್ಟ್ ‌ಇವೆ. ಮೆಡಿಕಲ್ ಕಾಲೇಜ್​ಗಳ‌ ಸಂಖ್ಯೆ ಹೆಚ್ಚಾಗಿವೆ,. ಐಐಟಿ‌ಗಳ ನಂಬರ್ ಏರಿಕೆಯಾಗಿವೆ. ಆಮದು‌ ಕಡಿಮೆಯಾಗಿದೆ. ರಫ್ತು ಹೆಚ್ಚಾಗಿದೆ, ಇದಕ್ಕೆ ‌ಕಾರಣ‌ ಮೇಕ್‌‌ ಇನ್ ಇಂಡಿಯಾ. ವೋಕಲ್ ಫಾರ್ ಲೋಕಲ್​​ಗೆ ಒತ್ತು ‌ನೀಡಲಾಗಿದೆ ಎಂದು ಹೇಳಿದ್ದಾರೆ.

ವರದಿ: ಈರಣ್ಣ 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:20 pm, Thu, 4 April 24

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ