ಸತೀಶ್ ಸೈಲ್​ಗೆ ಜೈಲು ಶಿಕ್ಷೆ: ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ? ಇಲ್ಲಿದೆ ವಿವರ

ಬೇಲೆಕೇರಿ ಬಂದರಿನಿಂದ 6 ಲಕ್ಷ ಮೆಟ್ರಿಕ್ ಟನ್ ಅದಿರು ನಾಪತ್ತೆಯಾದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಏಳು ಜನರಿಗೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆರು ಪ್ರಕರಣಗಳಲ್ಲಿ ವಿವಿಧ ಶಿಕ್ಷೆಗಳನ್ನು ವಿಧಿಸಿದೆ. ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ ಎಂಬ ವಿವರ ಇಲ್ಲಿದೆ.

ಸತೀಶ್ ಸೈಲ್​ಗೆ ಜೈಲು ಶಿಕ್ಷೆ: ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ? ಇಲ್ಲಿದೆ ವಿವರ
ಸತೀಶ್ ಸೈಲ್​ಗೆ ಜೈಲು ಶಿಕ್ಷೆ: ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ? ಇಲ್ಲಿದೆ ವಿವರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 26, 2024 | 6:00 PM

ಬೆಂಗಳೂರು, ಅಕ್ಟೋಬರ್ 26: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾಗಿ ಸುಮಾರು 14 ವರ್ಷಗಳ ನಂತರ ಇದೀಗ ತೀರ್ಪು ಹೊರಬಿದ್ದಿದೆ. ಆರು ಪ್ರಕರಣಗಳಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Satish Sail) ಸೇರಿದಂತೆ ಉಳಿದ ಆರೋಪಿಗಳಿಗೆ ಒಟ್ಟು 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಆದೇಶ ಹೊರಡಿಸಿದೆ. ಹಾಗಾದರೆ ಯಾವ ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ ಎಂದು ಸಂಪೂರ್ಣ ಇಲ್ಲಿದೆ.

6 ಲಕ್ಷ ಮೆಟ್ರಿಕ್ ಟನ್ ಅದಿರು ನಾಪತ್ತೆ ಕೇಸ್

2010 ರ ಮಾರ್ಚ್ 20ರಲ್ಲಿ ಸೀಜ್ ಆಗಿದ್ದ 8ಲಕ್ಷ ಮೆಟ್ರಿಕ್ ಟನ್ ಅದಿರಿನ ಪೈಕಿ, ಕೇವಲ 80 ದಿನಗಳಲ್ಲಿ 6 ಲಕ್ಷ ಮೆಟ್ರಿಕ್ ಟನ್ ನಾಪತ್ತೆಯಾಗಿತ್ತು. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ತನಿಖೆ ಆರಂಭಿಸಿತ್ತು.

ಇದನ್ನೂ ಓದಿ: ಕಾಂಗ್ರೆಸ್​ನ ಸತೀಶ್​​ ಸೈಲ್​ಗೆ 7 ವರ್ಷ ಜೈಲು: ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಮಹತ್ವದ ತೀರ್ಪು

ಶಾಸಕ ಸತೀಶ್ ಸೈಲ್, ಮಹೇಶ್ ಬಿಳಿಯೆ, ಕಾರಾಪುಡಿ ಮಹೇಶ್, ಸ್ವಸ್ತಿಕ್ ನಾಗರಾಜು ಸೇರಿದಂತೆ ಹಲವರ ವಿರುದ್ಧ ಆರೋಪಪಟ್ಟಿ ದಾಖಲಿಸಿತ್ತು. ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸತೀಶ್ ಸೈಲ್ ಸೇರಿದಂತೆ 7 ಆರೋಪಿಗಳ ವಿರುದ್ಧ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

1ನೇ ಕೇಸ್​ನಲ್ಲಿ 5 ವರ್ಷ ಶಿಕ್ಷೆ: 6 ಕೋಟಿ ರೂ. ದಂಡ

ಸತೀಶ್ ಸೈಲ್ ಸೇರಿ 6 ಮಂದಿ ಅಪರಾಧಿಗಳಾಗಿರುವ ಬೇಲೇಕೇರಿ ಅದಿರು ನಾಪತ್ತೆ ಕೇಸ್​ನಲ್ಲಿ, ಒಟ್ಟು 6 ಪ್ರಕರಣಗಳಡಿ ದೂರು ದಾಖಲಿಸಿಕೊಳ್ಳಲಾಗಿತ್ತು. ಈ ಪೈಕಿ ಮೊದಲ ಕೇಸ್​ನ ಒಳಸಂಚು, ಕಳ್ಳತನ ಪ್ರಕರಣದಲ್ಲಿ, ಸತೀಶ್ ಸೈಲ್ ಸೇರಿ ಅಪರಾಧಿಗಳಿಗೆ 5 ವರ್ಷ ಶಿಕ್ಷೆ ಹಾಗೂ, 6 ಕೋಟಿ ರೂ. ದಂಡ ವಿಧಿಸಿದೆ.

ಎರಡನೇ ಮತ್ತು ಮೂರನೇ ಕೇಸ್​

ಇನ್ನು ಎರಡನೇ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ಶಿಕ್ಷೆಯ ಪ್ರಮಾಣವನ್ನು ನೋಡುವುದಾದರೆ, 7 ವರ್ಷ ಕಠಿಣ ಶಿಕ್ಷೆ ಹಾಗೂ, 9 ಕೋಟಿ 60 ಲಕ್ಷ ರೂಪಾಯಿ ದಂಡವನ್ನ ವಿಧಿಸಲಾಗಿದೆ. ಮೂರನೇ ಕೇಸ್​ನಲ್ಲಿ, ವಂಚನೆ ಪ್ರಕರಣದಲ್ಲಿ ಸೈಲ್ ಸಂಗಡಿಗರಿಗೆ 5 ವರ್ಷ ಸೆರೆವಾಸ ಶಿಕ್ಷೆ ನೀಡಲಾಗಿದೆ. 9 ಕೋಟಿ 36 ಲಕ್ಷ ದಂಡ ವಿಧಿಸಲಾಗಿದೆ.

4, 5ನೇ ಮತ್ತು 6ನೇ ಕೇಸ್​

ನಾಲ್ಕನೇ ಕೇಸ್​ನಲ್ಲಿ ಸತೀಶ್ ಸೈಲ್​ ಮತ್ತು ಇತರರಿಗೆ ಒಳಸಂಚಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 9.54 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. 5ನೇ ಕೇಸ್‌ನಲ್ಲಿ ಸತೀಶ್ ಸೈಲ್​, ಇತರರಿಗೆ ಒಳಸಂಚಿಗೆ 5 ವರ್ಷ, ಕಳ್ಳತನಕ್ಕೆ 3 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದ್ದು, 9.25 ಕೋಟಿ ರೂ ದಂಡ ವಿಧಿಸಿದೆ. 6ನೇ ಕೇಸ್‌ನಲ್ಲಿ ಸತೀಶ್ ಸೈಲ್​ ಸೇರಿದಂತೆ ಒಳಸಂಚಿಗೆ 5 ವರ್ಷ, ಕಳ್ಳತನಕ್ಕೆ 3 ವರ್ಷ ಶಿಕ್ಷೆ ವಿಧಿಸಿದ್ದು, 90 ಲಕ್ಷ ರೂ ದಂಡ ಹಾಕಲಾಗಿದೆ.  ಈಗ ಕಳೆದಿರುವ ಶಿಕ್ಷೆ ಪ್ರಮಾಣ ಹೊರತುಪಡಿಸಿ ಉಳಿದ ಶಿಕ್ಷೆ ಅನುಭವಿಸಬೇಕಿದೆ.

ಸತೀಶ್ ಸೈಲ್ ಶಾಸಕ ಸ್ಥಾನ ಅನರ್ಹತೆ ಭೀತಿ

ಶಾಸಕ ಸತೀಶ್ ಸೈಲ್​ಗೆ ಅನರ್ಹತೆಯ ಭೀತಿ ಎದುರಾಗಿದೆ. 7 ವರ್ಷ ಶಿಕ್ಷೆಯಾಗಿರುವ ಹಿನ್ನೆಲೆ, ಶಾಸಕ ಸ್ಥಾನ ವಜಾವಾಗುವ ಸಾಧ್ಯತೆಯಿದೆ. ಹೈಕೋರ್ಟ್‌ನಲ್ಲಿ ಶಿಕ್ಷೆಗೆ ತಡೆ ಸಿಕ್ಕರೆ ಮಾತ್ರ ಅನರ್ಹತೆಯಿಂದ ಬಚಾವಾಗಬಹುದು ಎನ್ನಲಾಗಿದೆ.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:51 pm, Sat, 26 October 24

ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ
ಹೆಚ್​ಡಿ ದೇವೇಗೌಡ ಮನೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ
ಹೆಚ್​ಡಿ ದೇವೇಗೌಡ ಮನೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ