ಕಾಂಗ್ರೆಸ್​ಗೆ ಕೌಂಟರ್‌ ಕೊಡಲು ಸಜ್ಜಾಗಿದ್ದ ಜೆಡಿಎಸ್‌ ಸಮಾವೇಶ ಮುಂದೂಡಿಕೆ: ಇಲ್ಲಿದೆ ಕಾರಣ

ಮಾಜಿ ಪ್ರಧಾನಿ ಹೆಚ್​​​ಡಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಿದ ಬೆನ್ನಲ್ಲೇ, ಅದೇ ರೀತಿಯಲ್ಲಿ ಆಡಳಿತ ಪಕ್ಷಕ್ಕೆ ಕೌಂಟರ್ ಕೊಡಲು ಜೆಡಿಎಸ್ ಮುಂದಾಗಿದೆ. ಕಾಂಗ್ರೆಸ್ ಸಮಾವೇಶದ ಬೆನ್ನಲ್ಲೇ ಎಚ್ಚೆತ್ತ ದಳಪತಿಗಳು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಹೆಸರಿನಲ್ಲಿ ನಡೆಸಲು ಮುಂದಾಗಿರುವ ಬೃಹತ್ ಸಮಾವೇಶವನ್ನು ಮುಂದೂಡಲಾಗಿದೆ.

ಕಾಂಗ್ರೆಸ್​ಗೆ ಕೌಂಟರ್‌ ಕೊಡಲು ಸಜ್ಜಾಗಿದ್ದ ಜೆಡಿಎಸ್‌ ಸಮಾವೇಶ ಮುಂದೂಡಿಕೆ: ಇಲ್ಲಿದೆ ಕಾರಣ
Follow us
ಪ್ರಶಾಂತ್​ ಬಿ.
| Updated By: ರಮೇಶ್ ಬಿ. ಜವಳಗೇರಾ

Updated on:Dec 08, 2024 | 5:20 PM

ಮಂಡ್ಯ, (ಡಿಸೆಂಬರ್ 08): ಕಾಂಗ್ರೆಸ್​ನ ಹಾಸನದ ಬೃಹತ್ ಸಮಾವೇಶಕ್ಕೆ ಪ್ರತಿಯಾಗಿ ಜೆಡಿಎಸ್​​ನಿಂದ ನಡೆಯಬೇಕಿದ್ದ ಸಮಾವೇಶ ಮುಂದೂಡಿಕೆಯಾಗಿದೆ. ಹಾಸನದಲ್ಲಿ ಕಾಂಗ್ರೆಸ್​​ ನಡೆಸಿದ್ದ ಜನಕಲ್ಯಾಣ ಸಮಾವೇಶಕ್ಕೆ ಕೌಂಟರ್​ ಕೊಡಲು ಜೆಡಿಎಸ್​​, ಕೇಂದ್ರ ಸಚಿವ ಕುಮಾರಸ್ವಾಮಿಗೆ ಅಭಿನಂದನೆ ಹೆಸರಿನಲ್ಲಿ ಬಹತ್ ಸಮಾವೇಶ ಮಾಡಲು ಮುಂದಾಗಿದ್ದು, ಇದೇ ಇದೇ ಡಿಸೆಂಬರ್ 15ರಂದು ಮಂಡ್ಯದಲ್ಲಿ ನಡೆಯಬೇಕಿದ್ದ ಬೃಹತ್ ಸಮಾವೇಶವನ್ನು ಮುಂದೂಡಿಕೆಯಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಜೆಡಿಎಸ್​ ಸಮಾವೇಶ ಮುಂಡೂಡಿಕೆ ಮಾಡಲಾಗಿದೆ ಎಂದು ಸ್ವತಃ ಮಾಜಿ ಸಚಿವ ಪುಟ್ಟರಾಜು ಮಾಹಿತಿ ನೀಡಿದ್ದಾರೆ.

ಇಂದು(ಡಿಸೆಂಬರ್ 08) ಮದ್ದೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟ್ಟಸ್ವಾಮಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ‌ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ 15ರಂದು ಕುಮಾರಸ್ವಾಮಿ ಅಭಿನಂದನಾ ಸಮಾರಂಭ ಮುಂದೂಡಿಕೆ ಮಾಡಲಾಗಿದೆ. ಕುಮಾರಸ್ವಾಮಿಯವರ ಸೂಚನೆ ಮೇರೆಗೆ ಮುಂದೂಡಿದ್ದೇವೆ. ಸಮಾರಂಭ ಮುಂದೂಡಿಕೆಗೆ ಬೇರೆ ಯಾವುದೇ ಕಾರಣ ಇಲ್ಲ. ಯಾವುದೇ ಗೊಂದಲ ಆಗಬಾರದೆಂದು ಮುಂದೂಡಿದ್ದೇವೆ. ಸಮ್ಮೇಳನ ಮುಗಿದ ಮೇಲೆ ದಿನಾಂಕ ನಿಗದಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಸಮಾವೇಶಕ್ಕೆ ಕೌಂಟರ್ ಕೊಡಲು ಜೆಡಿಎಸ್ ಸಜ್ಜು: ಮಂಡ್ಯದಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ

ಸಾಹಿತ್ಯ ಸಮ್ಮೇಳನದ ಸಭೆಗಳಲ್ಲಿ ಕುಮಾರಸ್ವಾಮಿ ಭಾಗವಹಿಸದಿರುವ ಬಗ್ಗೆ ಮಾತನಾಡಿದ ಪುಟ್ಟಸ್ವಾಮಿ, ನಾವೆಲ್ಲ ಸಭೆಗಳಲ್ಲಿ ಭಾಗವಹಿಸಿದ್ದೇವೆ . ಕೇಂದ್ರ ಮಂತ್ರಿಗಳು ಬರಲು ಸಾಧ್ಯವಾಗಿಲ್ಲ. ಸಂಸತ್ ಅಧಿವೇಶನ ಇರುವ ಹಿನ್ನೆಲೆಯಲ್ಲಿ ಭಾಗವಹಿಸಿಲ್ಲ. ಜಿಲ್ಲಾಡಳಿತ ಕರೆದಿದ್ದಾರೆ ನಾವು ಹೋಗಿದ್ದೇವೆ . ನಮಗೆ ವಹಿಸಿರುವ ಜವಾಬ್ದಾರಿ ಮಾಡುತ್ತಿದ್ದೇವೆ. ನಾವು ನಾಡುನುಡಿಯ ಕೆಲಸ ಮಾಡಿದ್ದೇವೆ . ಸಾಹಿತ್ಯ ಸಮ್ಮೇಳನ ಚೆನ್ನಾಗಿ ಮಾಡಲಿ. 1.30 ಕ್ಕೆ ಬರಲು ಹೇಳಿ 4 ಗಂಟೆಗೆ ಬರುತ್ತಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಚಲುವರಾಯಸ್ವಾಮಿಗೆ ಟಾಂಗ್ ಕೊಟ್ಟರು.

ಜೆಡಿಎಸ್​​ ಕಾರ್ಯಕ್ರಮದ ಬಗ್ಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯದ ಬಗ್ಗೆ ಪ್ರತಿಕ್ರಿಯಿಸಿದ ಪುಟ್ಟರಾಜು, ಇಂತಹ ಜಿಲ್ಲಾ ಮಂತ್ರಿಗಳನ್ನ ಬಹಳ ನೋಡಿದ್ದೇವೆ. ಚಲುವರಾಯಸ್ವಾಮಿ ಚುನಾವಣೆಯಲ್ಲಿ ಸೋತಿಲ್ವಾ? ಸಮ್ಮಿಶ್ರವಾಗಿ ಚುನಾವಣೆ ಮಾಡಿದ್ದಾಗ ಇವರು ಏನು ಮಾಡಿದ್ರು. ಜನರ ತೀರ್ಮಾನ ಒಪ್ಪಿದ್ದೇವೆ . ನಮಗೂ ಮಾತನಾಡಲು ಬರುತ್ತದೆ. ಹೊಸ ಡಾಂಬರು ಬೇಡ, ಗುಂಡಿ ಬಿದ್ದಿರುವುದನ್ನ ಮುಚ್ಚಲಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ನಲ್ಲಿ ಇದೀಗ ಏನು ಆಗುತ್ತಿದೆ ನೋಡಿ. ಇದನ್ನ ಚಲುವರಾಯಸ್ವಾಮಿ ಹೇಳಬೇಕು. ಇದು ಬಹಳ ದಿನ ನಡೆಯುವುದಿಲ್ಲ. ಲಘುವಾಗಿ ಮಾತನಾಡಬೇಡಿ. ಗೌರವ ಇಟ್ಟುಕೊಂಡು ಮಾತನಾಡಿ. ಇದು ಕೊನೆಯಾಗದೇ ಇದ್ದರೇ ನಾವು ಮಾತನಾಡುತ್ತೇವೆ . ನಾವು ನಾಯಕನ ಹತ್ತಿರ ಸೈ ಅನ್ನಿಸಿಕೊಳ್ಳಲು ಕೆಲಸ ಮಾಡುತ್ತೇವೆ. ಅದರಲ್ಲಿ ತಪ್ಪೇನೂ ಇದೆ. ನಮ್ಮದು ದೇವೇಗೌಡರ ಮನೆ ಮಾತ್ರ. ಅವರು ಸಿದ್ದರಾಮಯ್ಯ ಜೊತೆ ಇರಬೇಕಾ, ಶಿವಕುಮಾರ್ ಜೊತೆ ಇರಬೇಕಾ ಎಂಬ ಗೊಂದಲದಲ್ಲಿ ಇದ್ದಾರೆ. ನಮ್ಮ ಪಕ್ಷದ ಗೊಂದಲದ ಬಗ್ಗೆ ಇವರು ಯಾಕೆ ಮಾತನಾಡುತ್ತಾರೆ. ನಮ್ಮದು ಯಾಕೆ ಹುಡುಕುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಜಸ್ಟ್ ಪಾಸಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಇದೇ ವೇಳೆ ನಿಖಿಲ್ ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನೀಡುವ ಬಗ್ಗೆ ಮಾತನಾಡಿದ ಪುಟ್ಟರಾಜು, ದೇವೇಗೌಡರ ತೀರ್ಮಾನ ಮಾಡುತ್ತಾರೆ . ಕಾಂಗ್ರೆಸ್ ನಲ್ಲೂ ವಂಶರಾಜಕಾರಣ ಇದೆ. ಜವಾಹರ್ ಲಾಲ್ ನೆಹರು ಕುಟುಂಬದಲ್ಲಿ ಕೂಡ ಕುಟುಂಬ ರಾಜಕಾರಣ ಇದೆ. ದೇವೇಗೌಡರ ಕುಟುಂಬ ರಾಜಕಾರಣ ಮಾಡಿದ್ರೆ ತಪ್ಪೇನು? ಎಂದು ಸಮರ್ಥಿಸಿಕೊಂಡರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:17 pm, Sun, 8 December 24

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!