AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕರಾ ಮಾಡಿ ಜೈಲು ಪಾಲಾದ ‘ಪೈಪ್​ ನೋಟ್‘ ಶಾಂತಗೌಡ; ನನ್ನದು ಪಿತ್ರಾರ್ಜಿತ ಆಸ್ತಿ ಅಂತಿರುವ ಗ್ರೂಪ್​ ಸಿ ಮಾಯಣ್ಣ!

ಎಸಿಬಿ ದಾಳಿ ಪ್ರಕರಣದಲ್ಲಿ ಸಾಮಾನ್ಯವಾಗಿ ಬಂಧನ ಕಡಿಮೆ. ಆದ್ರೆ ಕಳೆದ ರಾತ್ರಿ ಎಸಿಬಿ ತಂಡ ಶಾಂತಗೌಡ ಬಿರಾದರ್ನನ್ನು ಬಂಧಿಸಿದೆ. ಅಲ್ಲದೆ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದೆ. ಸದ್ಯ ಶಾಂತಗೌಡ ಬಿರಾದರ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಂಬಿ ಹಿಂದೆ ಕುಳಿತಿದ್ದಾನೆ.

ನಕರಾ ಮಾಡಿ ಜೈಲು ಪಾಲಾದ ‘ಪೈಪ್​ ನೋಟ್‘ ಶಾಂತಗೌಡ; ನನ್ನದು ಪಿತ್ರಾರ್ಜಿತ ಆಸ್ತಿ ಅಂತಿರುವ ಗ್ರೂಪ್​ ಸಿ ಮಾಯಣ್ಣ!
ಕಲಬುರಗಿ ಕೇಂದ್ರ ಕಾರಾಗೃಹ
TV9 Web
| Edited By: |

Updated on:Nov 25, 2021 | 9:08 AM

Share

ಕಲಬುರಗಿ: ಆತ PWDಯಲ್ಲಿ ಜೆಇ ಅಷ್ಟೇ. ಆದ್ರೆ, ಆತನ ರಂಗೀನ್ ಲೋಕ ನೋಡಿದ್ರೆ ಎಂಥಹವರನ್ನೂ ಬೆಚ್ಚಿಬೀಳಿಸುತ್ತೆ. ಆತ ಮನೆಯಲ್ಲಿ ಯಾವ ಮೂಲೆಯಲ್ಲಿ ಎಷ್ಟು ಹಣ ಇಟ್ಟಿದ್ದಾನೆ ಅನ್ನೋದು ಆತನಿಗೇ ಗೊತ್ತಿರಲಿಲ್ಲ. ಇಡೀ ಮನೆ ಪೂರ್ತಿ ಬಂಗಾರ ಮತ್ತು ಕಾಂಚಾಣವೇ ತುಂಬಿಕೊಂಡಿತ್ತು. ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಆತ ಬಚ್ಚಿಟ್ಟಿದ್ದ ಸಂಪತ್ತನ್ನು ಬಯಲು ಮಾಡಿದ್ದಾರೆ. ಸದ್ಯ ಈಗ ಜೆಇ ಶಾಂತಗೌಡ ಬಿರಾದರ್ ನಕರಾ ಮಾಡಿ ಜೈಲು ಪಾಲಾಗಿದ್ದಾನೆ.

ಎಸಿಬಿ ದಾಳಿ ಪ್ರಕರಣದಲ್ಲಿ ಸಾಮಾನ್ಯವಾಗಿ ಬಂಧನ ಕಡಿಮೆ. ಆದ್ರೆ ಕಳೆದ ರಾತ್ರಿ ಎಸಿಬಿ ತಂಡ ಶಾಂತಗೌಡ ಬಿರಾದರ್ನನ್ನು ಬಂಧಿಸಿದೆ. ಅಲ್ಲದೆ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದೆ. ಸದ್ಯ ಶಾಂತಗೌಡ ಬಿರಾದರ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಂಬಿ ಹಿಂದೆ ಕುಳಿತಿದ್ದಾನೆ. ನಿನ್ನೆ ಎಸಿಬಿ ಅಧಿಕಾರಿಗಳು ಮನೆಗೆ ಬಂದಾಗ ಬಾಗಿಲು ತಗೆಯದೇ ಶಾಂತಗೌಡ ಸತಾಯಿಸಿದ್ದ. ಮತ್ತೊಂದಡೆ ದಾಳಿ ವೇಳೆ ಸಿಬ್ಬಂದಿಗೆ ಸಹಕರಿಸಿರಲಿಲ್ಲ. ಸಿಬ್ಬಂದಿಗೆ ಯಾಮಾರಿಸಿ ಹಣ ಬಚ್ಚಿಡೋ ತಂತ್ರ ಮಾಡಿದ್ದ. ಇದೇ ಕಾರಣಕ್ಕೆ ಎಸಿಬಿ ಹಿರಿಯ ಅಧಿಕಾರಿಗಳು ಶಾಂತಗೌಡ ಬಿರಾದರ್ ಬಂಧನಕ್ಕೆ ಸೂಚನೆ ನೀಡಿದ್ರು. ಅದರಂತೆಯೇ ಕಳೆದ ರಾತ್ರಿ ಬಂಧಿಸಿ ಜೈಲಿಗಟ್ಟಿದ್ದಾರೆ.

ಫಾರ್ಮ್‌ಹೌಸ್‌ಗೆ ಸಿಸಿ ರಸ್ತೆ ಮಾಡಿಸಿಕೊಂಡಿರುವ ಶಾಂತಗೌಡ ಶಾಂತಗೌಡ ಬಿರಾದರ್, ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಹಂಗರಗಾ ಬಿ ಗ್ರಾಮದಿಂದ ತನ್ನ ಫಾರ್ಮ್‌ಹೌಸ್‌ಗೆ ಸಿಸಿ ರಸ್ತೆ ಮಾಡಿಸಿಕೊಂಡಿದ್ದಾರೆ. ಸ್ವಂತ ಹಣದಿಂದ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿಕೊಂಡ್ರಾ? ಅಥವಾ ಸರ್ಕಾರಿ ಯೋಜನೆಯಲ್ಲಿ ರಸ್ತೆ ಮಾಡಿಸಿಕೊಂಡ್ರಾ ಎಂಬ ಪ್ರಶ್ನೆ ಎದ್ದಿದೆ.

ಪಿತ್ರಾರ್ಜಿತ ಆಸ್ತಿಯನ್ನು ನನ್ನದು ಎನ್ನುತ್ತಿದ್ದಾರೆ ಇನ್ನು ಮತ್ತೊಂದೆಡೆ ನಾನು ಎಸಿಬಿ ದಾಳಿಗೆ ಹೆದರುವ ವ್ಯಕ್ತಿಯಲ್ಲ ಎಂದು ಟಿವಿ9ಗೆ ಬಿಬಿಎಂಪಿ ಎಫ್‌ಡಿಎ ಎಂ.ಮಾಯಣ್ಣ ಹೇಳಿಕೆ ನೀಡಿದ್ದಾರೆ. ಎಸಿಬಿ ಅಧಿಕಾರಿಗಳು ಹೇಳಿದ ಮನೆಗಳು, ನಿವೇಶನಗಳು ನಮ್ಮ ತಂದೆ, ತಾಯಿ ಮಾಡಿಟ್ಟಿರುವುದು. ಪಿತ್ರಾರ್ಜಿತ ಆಸ್ತಿಯನ್ನು ನನ್ನದು ಎನ್ನುತ್ತಿದ್ದಾರೆ. ನನ್ನ ತಂದೆ, ತಾಯಿ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ರು. ಬಿಬಿಎಂಪಿ ಅಧಿಕಾರಿಗಳನ್ನ ಹೆದರಿಸಿ, ಬೆದರಿಸಿ ಹಣ ಮಾಡುತ್ತಿರುವ ವ್ಯಕ್ತಿಗಳು ಹೀಗೆ ಮಾಡಿಸಿದ್ದಾರೆ. ಸೋಮವಾರ ವಿಚಾರಣೆಗೆ ಬರಲು ಸೂಚನೆ ನೀಡಿದ್ದಾರೆ. ಮಾಯಣ್ಣ ಮೇಲೆ ದಾಳಿ ಮಾಡಿಸಿದಂತೆ ನಿಮ್ಮ ಮೇಲೂ ಎಸಿಬಿ ದಾಳಿ ಮಾಡಿಸ್ತೇವೆ ಎಂದು ಬೇರೆ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಎಂ.ಮಾಯಣ್ಣ ತಿಳಿಸಿದ್ದಾರೆ.

ಇನ್ನು ರಾಜ್ಯದ 15 ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಕೇಸ್ಗೆ ಸಂಬಂಧಿಸಿ ಭ್ರಷ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿ ಸದ್ಯದಲ್ಲೇ ಗ್ರಿಲ್ ಮಾಡಲಾಗುತ್ತೆ. ಆದಾಯ ಮೀರಿ ಕೋಟ್ಯಂತರ ರೂ. ಆಸ್ತಿ ಗಳಿಕೆ ಆರೋಪದಡಿ 15 ಅಧಿಕಾರಿಗಳಿಗೆ ಸೇರಿದ 68 ಕಡೆ ಎಸಿಬಿ ದಾಳಿ ನಡೆಸಿತ್ತು. ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು, ಚರ, ಸ್ಥಿರ ಆಸ್ತಿಗಳ ಬಗ್ಗೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆದಷ್ಟು ಬೇಗ ಅಧಿಕಾರಿಗಳ ಮನೆಯಲ್ಲಿ ಲಭ್ಯವಾದ ದಾಖಲೆಗಳ ಪರಿಶೀಲನೆ ನಡೆಸಿ ಪರಿಶೀಲನೆ ಬಳಿಕ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತೆ.

ಇದನ್ನೂ ಓದಿ: ಎಸಿಬಿ ದಾಳಿ ವೇಳೆ ಸೀರೆಯಲ್ಲಿ ಬಚ್ಚಿಟ್ಟ ಹಣ ಪತ್ತೆ; ನೋಟು ಎಣಿಸಲು ಮಷೀನ್ ತಂದ ಅಧಿಕಾರಿಗಳು

Published On - 8:48 am, Thu, 25 November 21

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ