ವರ್ಷದ ಹಿಂದೆ ಮದುವೆಯಾದಾಗ ದಂಪತಿ ನೂರ್ಕಾಲ ಬಾಳಲಿ ಎಂದು ಬಂದವರು ಹರಸಿದ್ದರು, ಕೊನೆಗೆ ಗಂಡನ ವರದಕ್ಷಿಣೆ ದಾಹಕ್ಕೆ ಬಲಿಯಾದಳು!

Dowry harassment in Kalaburagi: ಮಹನಂದಾಳ ಪತಿ ರಾಜು, ಬಾವಮೈದುನನಿಗೆ ಕಾಲ್ ಮಾಡಿ ಮಹನಂದಾ ವಿಷ ಕುಡಿದಿದ್ದಾಳೆ ಎಂದು ಹೇಳಿದ್ದನಂತೆ. ಆದರೆ ಮಹನಂದಾ ಸಹೋದರ ಬರುವಷ್ಟರಲ್ಲಿ, ಮಹನಂದಾಳ ಪತಿ ಮತ್ತು ಕುಟುಂಬದವರು ಕಲಬುರಗಿಯಲ್ಲಿ ಕ್ರೂಸರ್ ವಾಹನದಲ್ಲಿ ಶವ ಬಿಟ್ಟು ಓಡಿ ಹೋಗಿದ್ದರಂತೆ.

ವರ್ಷದ ಹಿಂದೆ ಮದುವೆಯಾದಾಗ ದಂಪತಿ ನೂರ್ಕಾಲ ಬಾಳಲಿ ಎಂದು ಬಂದವರು ಹರಸಿದ್ದರು, ಕೊನೆಗೆ ಗಂಡನ ವರದಕ್ಷಿಣೆ ದಾಹಕ್ಕೆ ಬಲಿಯಾದಳು!
ಮೊದಲ ವಿವಾಹ ವಾರ್ಷಿಕೋತ್ಸವ -ಗಂಡನ ವರದಕ್ಷಿಣೆ ದಾಹಕ್ಕೆ ಬಲಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 06, 2023 | 12:23 PM

ಇನ್ನೇನು ಕೆಲವೇ ದಿನಗಳಲ್ಲಿ ಆ ದಂಪತಿಯ ಮೊದಲ ವಿವಾಹ ವಾರ್ಷಿಕೋತ್ಸವ ಇತ್ತು. ಆದ್ರೆ ವಾರ್ಷಿಕೋತ್ಸವಕ್ಕೆ ಪತಿ ತವರು ಮನೆಯಿಂದ ಚಿನ್ನ ತರಬೇಕು ಅಂತ ಪತ್ನಿಗೆ ಸೂಚಿಸಿದ್ದ. ಇನ್ನೊಂದಡೆ ಪತಿಯ ಕುಟುಂಬದವರು ಕೂಡಾ ವರದಕ್ಷಿಣೆಗಾಗಿ (Dowry Harassment) ಕೂಡಾ ದುಂಬಾಲು ಬಿದ್ದಿದ್ದರು. ಆದರೂ ಕೂಡಾ ಮಹಿಳೆ ಸಂಸಾರ ಸಾಗಿಸಿಕೊಂಡು ಹೋಗುತ್ತಿದ್ದಳು. ಆದ್ರೆ ನಿನ್ನೆ ಮಹಿಳೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ (Death). ಮಹಿಳೆಯ (Woman) ಕುಟುಂಬದವರು ಪತಿ ಮತ್ತು ಕುಟುಂಬದವರು ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಮುದ್ದಾದ ಜೋಡಿ ಅದು, ಈ ಜೋಡಿಯನ್ನು ನೋಡಿದ್ದ ಸಾವಿರಾರು ಜನರು, ನೂರ್ಕಾಲ ದಂಪತಿ ಚೆನ್ನಾಗಿರಲಿ, ಸುಖವಿರಲಿ, ದುಃಖವಿರಲಿ, ದಂಪತಿ ಚೆನ್ನಾಗಿರಲಿ ಅಂತ ಹರಿಸಿದ್ದರು, ಆಶಿಸಿದ್ದರು. ವರ್ಷದ ಹಿಂದೆ ದಂಪತಿ ಖುಷಿ ಖುಷಿಯಿಂದಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಹೌದು ಕಲಬುರಗಿ (Kalaburagi) ತಾಲೂಕಿನ ಹೊನ್ನಕಿರಣಗಿ ಗ್ರಾಮದ ರಾಜು ಮತ್ತು ಜೇವರ್ಗಿ ತಾಲೂಕಿನ ಹಂದನೂರು ಗ್ರಾಮದ ಮಹನಂದಾ ದಂಪತಿ 2022 ರ ಎಪ್ರಿಲ್ 25 ರಂದು ಮದುವೆಯಾಗಿದ್ದರು. ಎರಡೂ ಕುಟುಂಬದವರು ಕೂಡಾ ಸಂತೋಷದಿಂದ ಮದುವೆಯಲ್ಲಿ ಭಾಗಿಯಾಗಿ ಸಂಭ್ರಮಸಿದ್ದರು. ಇನ್ನು ಮಹನಂದಾ ಹೆತ್ತವರು ಮದುವೆ ಸಮಯದಲ್ಲಿ, ರಾಜುಗೆ 50 ಗ್ರಾಂ ಚಿನ್ನಾಭರಣ, ಮತ್ತು 4 ಲಕ್ಷ ಮೌಲ್ಯದ ಅನೇಕ ವಸ್ತುಗಳನ್ನು ನೀಡಿ, ಸಂಭ್ರಮದಿಂದ ಮದುವೆ ಮಾಡಿಕೊಟ್ಟಿದ್ದರು.

ಆದ್ರೆ ಈ ಸಂಭ್ರಮ ಬಹಳ ದಿನಗಳು ಇರಲಿಲ್ಲ. ಇನ್ನು ರಾಜು ಅಟ್ಟದಮನಿ, ಗ್ರಾಮದಲ್ಲಿಯೇ ಫೈನಾನ್ಸ್ ಮಾಡಿಕೊಂಡಿದ್ದ. ಆದ್ರೆ ಮದುವೆಯಾದ ಮೇಲೆ ದಂಪತಿ ಬಾಳಲ್ಲಿ ಖುಷಿ ಮಾಯವಾಗಿತ್ತು. ದಂಪತಿ ಬಾಳಲ್ಲಿ ಬಿರುಗಾಳಿ ಬೀಸಲು ಆರಂಭವಾಗಿತ್ತು. ಇದಕ್ಕೆ ಕಾರಣ ಮಹನಂದಾಳ ಪತಿ ಮತ್ತು ಕುಟುಂಬದವರ ವರದಕ್ಷಿಣೆಯ ದಾಹ.

ಹೌದು ಮದುವೆಯಾದ ಮೇಲೆ ಮತ್ತೆ ಮತ್ತೆ ತವರು ಮನೆಯಿಂದ ಹಣ ತರುವಂತೆ ಪತಿ ಪೀಡಿಸುತ್ತಿದ್ದನಂತೆ. ತನ್ನ ಫೈನಾನ್ಸ್ ಗೆ ಹಣ ಬೇಕು, ತಗೆದುಕೊಂಡು ಬರಲೇಬೇಕು ಅಂತ ದುಂಬಾಲು ಬಿದ್ದಿದ್ದನಂತೆ. ಇದೇ ವರದಕ್ಷಿಣೆ ಕಿರುಕುಳಕ್ಕೆ ಇದೀಗ ಮಹನಂದಾ ಬಾರದ ಲೋಕಕ್ಕೆ ಹೋಗಿದ್ದಾಳೆ. ಮಹನಂದಾ ಅನುಮಾನಸ್ಪದ ರೀತಿಯಲ್ಲಿ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಹೌದು ಮೊನ್ನೆ ಮಂಗಳವಾರ 11 ಗಂಟೆ ಸಮಯದಲ್ಲಿ ಮಹನಂದಾಳ ಪತಿ ರಾಜು, ಮಹನಂದಾಳ ಸಹೋದರನಿಗೆ ಕಾಲ್ ಮಾಡಿ ಮಹನಂದಾ ವಿಷ ಕುಡಿದಿದ್ದಾಳೆ. ಬೇಗನೆ ಬರುವಂತೆ ಹೇಳಿದ್ದನಂತೆ. ಹೀಗಾಗಿ ಮಹನಂದಾ ಸಹೋದರ ಬರುವಷ್ಟರಲ್ಲಿ, ಮಹನಂದಾಳ ಪತಿ ಮತ್ತು ಕುಟುಂಬದವರು ಕಲಬುರಗಿಯಲ್ಲಿ ಕ್ರೂಸರ್ ನಲ್ಲಿ ಶವವನ್ನು ಬಿಟ್ಟು ಓಡಿ ಹೋಗಿದ್ದರಂತೆ. ಮನೆಯಲ್ಲಿ ಹತ್ತಾರು ಜನ ಇದ್ದಾಗಲೂ ಕೂಡಾ ವಿಷ ಹೇಗೆ ಕುಡಿಯಲು ಸಾಧ್ಯ? ಕುಡಿದರೂ ಕೂಡಾ ಯಾರು ಯಾಕೆ ಬೇಗನೆ ಆಸ್ಪತ್ರೆಗೆ ಸೇರಿಸಲಿಲ್ಲ? ವಿಷ ಕುಡಿದ್ರೆ ಸ್ವಲ್ಪವಾದರೂ ವಾಸನೆ ಬರ್ತಿತ್ತು. ಆದ್ರೆ ಯಾವುದೇ ವಾಸನೆ ಕೂಡಾ ಬಂದಿಲ್ಲ.

ಇದನ್ನೆಲ್ಲಾ ನೋಡಿದ್ರೆ, ಮಹನಂದಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಪತಿ ಮತ್ತು ಅವರ ಕುಟುಂಬದವರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಏಪ್ರಿಲ್ 25ಕ್ಕೆ ದಂಪತಿಯ ಮೊದಲ ವಿವಾಹ ವಾರ್ಷಿಕೋತ್ಸವ ಇತ್ತು. ವಾರ್ಷಿಕೋತ್ಸವಕ್ಕೆ ತವರು ಮನೆಯಿಂದ 10 ಗ್ರಾಂ ಚಿನ್ನ ತರಲೇಬೇಕು ಅಂತ ಪತಿ ಹೇಳಿದ್ದನಂತೆ.

ಇದೇ ವಿಚಾರಕ್ಕೆ ಪತಿ ಮತ್ತು ಪತ್ನಿ ನಡುವೆ ಜಗಳವಾಗಿತ್ತಂತೆ. ಹೀಗಾಗಿ ವಾರದ ಹಿಂದೆ ತವರು ಮನೆಗೆ ಮಹನಂದಾ ಹೋಗಿದ್ದಳಂತೆ. ಆಗ ಮತ್ತೆ ತವರು ಮನೆಗೆ ಬಂದಿದ್ದ ಪತಿ ಪತ್ನಿಯನ್ನು ಕರೆದುಕೊಂಡು ಬಂದಿದ್ದನಂತೆ. ಆದ್ರೆ ಮತ್ತೆ ಪತಿ ಮತ್ತು ಕುಟುಂಬದವರು ಮಹನಂದಾಳಿಗೆ ಕಿರುಕುಳ ನೀಡಲು ಆರಂಭಿಸಿದ್ದರಂತೆ. ಆದರೂ ಕೂಡಾ ತನ್ನ ಸಹೋದರಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು.

ಆದ್ರೆ ಇದೀಗ ಆಕೆಯನ್ನು ಕೊಲೆಯೇ ಮಾಡಿದ್ದಾರೆ ಅಂತ ಮಹನಂದಾ ಸಹೋದರ ಆರೋಪಿಸಿದ್ದಾರೆ. ಮಹನಂದಾ ನಾಲ್ಕು ತಿಂಗಳ ಹಿಂದೆ ಗರ್ಭಿಣಿಯಾಗಿದ್ದಳಂತೆ. ಆದರೂ ಕೂಡಾ ಪತಿ ಮನೆಯವರು ಆಕೆಗೆ ಸರಿಯಾಗಿ ಊಟ ನೀಡಿಲ್ಲವಂತೆ. ಜೊತೆಗೆ ಮೇಲಿಂದ ಮೇಲೆ ಹಲ್ಲೆ ಮಾಡಿದ್ದರಿಂದ, ಮೂರು ತಿಂಗಳ ಹಿಂದೆ ಗರ್ಭಪಾತವಾಗಿತ್ತಂತೆ.

ಸದ್ಯ ಮಹನಂದಾ ಸಾವಿನ ಬಗ್ಗೆ ಕುಟುಂಬದವರು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಮಹನಂದಾ ಪತಿ ಮತ್ತು ಕುಟುಂಬದವರ ವಿರುದ್ದ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಂತರ, ಮಹನಂದಾ ಪತಿ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪೊಲೀಸರು ಇದೀಗ ಮರಣೋತ್ತರ ವರದಿಗಾಗಿ ಕಾಯುತ್ತಿದ್ದು, ಮರಣೋತ್ತರ ವರದಿ ಮೂಲಕ, ಮಹನಂದಾಳದ್ದು ಆತ್ಮಹತ್ಯೆಯಾ ಅಥವಾ ಕೊಲೆಯಾ ಅನ್ನೋದು ಗೊತ್ತಾಗಲಿದೆ. ಆದ್ರೆ ಬಾಳಿ ಬದುಕಬೇಕಿದ್ದ ಮಹಿಳೆ ಚಿಕ್ಕ ವಯಸ್ಸಿನಲ್ಲಿ ಬಾರದ ಲೋಕ್ಕಕೆ ಹೋಗಿದ್ದು ದುರ್ದೈವದ ಸಂಗತಿಯಾಗಿದೆ.

ವರದಿ: ಸಂಜಯ್, ಟಿವಿ 9, ಕಲಬುರಗಿ

ಇನ್ನಷ್ಟು ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:23 pm, Thu, 6 April 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ