AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ರೊಟ್ಟಿಗೆ ಈಗ ಗ್ಲೋಬಲ್ ಟಚ್: ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗೆ ರೊಟ್ಟಿ ರಫ್ತು!

ಕಲಬುರಗಿ ರೊಟ್ಟಿ ಈಗ ಜಾಗತಿಕ ಮಟ್ಟಕ್ಕೆ ಕಾಲಿಟ್ಟಿದೆ. ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳು ಸಿದ್ಧಪಡಿಸಿದ ಈ ವಿಶಿಷ್ಟ ಆಹಾರ ಅಮೆರಿಕ, ಕೆನಡಾ, ಆಸ್ಟ್ರೇಲಿಯಾದ ಕನ್ನಡಿಗರನ್ನು ತಲುಪಲಿದೆ. ಪ್ರತಿ ತಿಂಗಳು ಸಾವಿರಾರು ರೊಟ್ಟಿಗಳ ರಫ್ತು ಮೂಲಕ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಸರ್ಕಾರದ ನೆರವು ಮತ್ತು ತಂತ್ರಜ್ಞಾನದ ಬಳಕೆಯಿಂದ ಈ ಯೋಜನೆ ಯಶಸ್ವಿಯಾಗಿದೆ.

ಕಲಬುರಗಿ ರೊಟ್ಟಿಗೆ ಈಗ ಗ್ಲೋಬಲ್ ಟಚ್: ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗೆ ರೊಟ್ಟಿ ರಫ್ತು!
ಕಲಬುರಗಿ ರೊಟ್ಟಿ
ಅಕ್ಷಯ್​ ಪಲ್ಲಮಜಲು​​
|

Updated on: May 13, 2026 | 4:47 PM

Share

ಕಲಬುರಗಿ, ಮೇ.13: ಜಿಲ್ಲೆಯ ವಿಶಿಷ್ಟ ಆಹಾರ ಸಂಸ್ಕೃತಿಯ ಗುರುತಾಗಿರುವ ‘ಕಲಬುರಗಿ ರೊಟ್ಟಿ’ ಈಗ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳು ಸಿದ್ಧಪಡಿಸಿದ ರೊಟ್ಟಿಗಳ ಮೊದಲ ರಫ್ತು ಘಟಕಕ್ಕೆ ಚಾಲನೆ ನೀಡಲಾಗಿದ್ದು, ಇನ್ನು ಮುಂದೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದ ಕನ್ನಡಿಗರು ಕಲಬುರಗಿ ರೊಟ್ಟಿಯ ಸವಿಯನ್ನು ಸವಿಯಬಹುದಾಗಿದೆ.

ಅಮೆರಿಕ ಮತ್ತು ಆಸ್ಟ್ರೇಲಿಯಾಕ್ಕೆ ಪ್ರತಿ ತಿಂಗಳು ತಲಾ 10,000 ರೊಟ್ಟಿಗಳ ರಫ್ತು ಮಾಡಲಾಗುವುದು. ಇನ್ನು ಕೆನಡಾಕ್ಕೆ ಪ್ರತಿ ತಿಂಗಳು 5,000 ರೊಟ್ಟಿಗಳ ರಫ್ತು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಒಂದು ಪೋಸ್ಟ್​​​ನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಯೋಜನೆಯ ಹಿಂದೆ ಜಿಲ್ಲೆಯ 100ಕ್ಕೂ ಹೆಚ್ಚು ಸ್ಥಳೀಯ ಸ್ವಸಹಾಯ ಸಂಘಗಳ (SHG) ಸುಮಾರು 1,000 ಮಹಿಳೆಯರ ಶ್ರಮವಿದೆ. ಕಳೆದ ಎರಡು ವರ್ಷಗಳಿಂದ ಸರ್ಕಾರವು ಈ ಉದ್ದೇಶಕ್ಕಾಗಿ 150ಕ್ಕೂ ಹೆಚ್ಚು ರೊಟ್ಟಿ ಮಾಡುವ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಿದೆ. ಅಲ್ಲದೆ, ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್‌ಗೆ ವಿಶೇಷ ಒತ್ತು ನೀಡುವ ಮೂಲಕ ಕಲಬುರಗಿ ರೊಟ್ಟಿಯನ್ನು ಜಾಗತಿಕ ಮಟ್ಟಕ್ಕೆ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಖಾಕಿ ಪಡೆಯ ಮಾನವೀಯತೆ: 73 ವೃದ್ಧರು ಹಾಗೂ ಒಂಟಿ ಮಹಿಳೆಯರ ಬಾಳಿಗೆ ಆಸರೆಯಾದ ವಿಜಯಪುರ ಪೊಲೀಸರು!

ಇಲ್ಲಿದೆ ನೋಡಿ:

ಪ್ರಸ್ತುತ ಕಲಬುರಗಿ ರೊಟ್ಟಿಯು ಸ್ವಿಗ್ಗಿ, ಜೊಮ್ಯಾಟೊ ಮತ್ತು ಅಮೆಜಾನ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲೂ ಲಭ್ಯವಿದ್ದು, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಇದು ದೊಡ್ಡ ಶಕ್ತಿಯಾಗಿ ಮೂಡಿಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ