ನೀತಿ ಆಯೋಗದ ಡೆಲ್ಟಾ ರ‍್ಯಾಂಕಿಂಗ್​ನಲ್ಲಿ ಕಾಳಗಿ ತಾಲೂಕಿಗೆ ಎರಡನೇ ಸ್ಥಾನ

ಕೇಂದ್ರದ ನೀತಿ ಆಯೋಗವು ದೇಶದಾದ್ಯಂತ 500 ತಾಲೂಕಿನಲ್ಲಿ ಕಾರ್ಯಕ್ಷಮತೆ ವಿಭಾಗದಡಿ ಪ್ರಥಮ, ದ್ವಿತೀಯ ಹಾಗೂ 6 ವಲಯಗಳಲ್ಲಿ ಪ್ರಥಮ, ದ್ವಿತೀಯ ರ‍್ಯಾಂಕ್ ಘೋಷಣೆ ಮಾಡಲಾಗಿದೆ. ಇದರಲ್ಲಿ ದಕ್ಷಿಣ ಭಾರತ ವಲಯದಡಿ ಆಂಧ್ರ ಪ್ರದೇಶದ ಭಾಮಿನಿ ತಾಲೂಕು ಪ್ರಥಮ ಸ್ಥಾನ ಗಳಿಸಿದರೆ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ರ‍್ಯಾಂಕ್ ಪಡೆಯಲು ಸಫಲವಾಗಿದೆ.

ನೀತಿ ಆಯೋಗದ ಡೆಲ್ಟಾ ರ‍್ಯಾಂಕಿಂಗ್​ನಲ್ಲಿ ಕಾಳಗಿ ತಾಲೂಕಿಗೆ ಎರಡನೇ ಸ್ಥಾನ
ಕಲಬುರಗಿ ಜಿಲ್ಲಾಧಿಕಾರಿ, ನೀತಿ ಆಯೋಗದ ಡೆಲ್ಟಾ ರ‍್ಯಾಂಕಿಂಗ್​ನಲ್ಲಿ ಕಾಳಗಿ ತಾಲೂಕಿಗೆ ಎರಡನೇ ಸ್ಥಾನ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 27, 2024 | 10:23 PM

ಕಲಬುರಗಿ, ಆ.27: ಶಿಕ್ಷಣ, ಆರೋಗ್ಯ, ಕೌಶಲ್ಯ, ಮಹಿಳಾ ಮತ್ತು ಮಕ್ಕಳು, ಕೃಷಿ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಹಿನ್ನಲೆ ಇತ್ತೀಚೆಗೆ ನೀತಿ ಆಯೋಗ(Niti Aayog)ವು ಡೆಲ್ಟಾ ರ‍್ಯಾಂಕ್-2024 ಘೋಷಿಸಿದ್ದು, ದಕ್ಷಿಣ ಭಾರತ ವಲಯದಡಿ ರಾಜ್ಯದ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಒಟ್ಟಾರೆ 500 ತಾಲೂಕಿನಲ್ಲಿ ಕಾರ್ಯಕ್ಷಮತೆ ವಿಭಾಗದಡಿ ಪ್ರಥಮ, ದ್ವಿತೀಯ ಹಾಗೂ 6 ವಲಯಗಳಲ್ಲಿ ಪ್ರಥಮ, ದ್ವಿತೀಯ ರ‍್ಯಾಂಕ್ ಘೋಷಣೆ ಮಾಡಲಾಗಿದೆ. ಇದರಲ್ಲಿ ದಕ್ಷಿಣ ಭಾರತ ವಲಯದಡಿ ಆಂಧ್ರ ಪ್ರದೇಶದ ಭಾಮಿನಿ ತಾಲೂಕು ಪ್ರಥಮ ಸ್ಥಾನ ಗಳಿಸಿದರೆ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ರ‍್ಯಾಂಕ್ ಪಡೆಯಲು ಸಫಲವಾಗಿದೆ.

ಇದನ್ನೂ ಓದಿ:ನೀತಿ ಆಯೋಗವನ್ನು ರದ್ದು ಮಾಡಿ; ಪ್ರಧಾನಿ ಮೋದಿ ನೇತೃತ್ವದ ಸಭೆಗೆ ಮುನ್ನ ಮಮತಾ ಬ್ಯಾನರ್ಜಿ ಬೇಡಿಕೆ

ಕೇಂದ್ರದ ನೀತಿ ಆಯೋಗವು ದೇಶದಾದ್ಯಂತ 500 ಹಿಂದುಳಿದ ಬ್ಲಾಕುಗಳನ್ನು ಮಹತ್ವಾಕಾಂಕ್ಷೆ ತಾಲೂಕುಗಳೆಂದು ಗುರುತಿಸಿ. ಇಲ್ಲಿ ಶಿಕ್ಷಣ, ಆರೋಗ್ಯ, ಕೌಶಲ್ಯ, ಅಪೌಷ್ಠಿಕತೆ ನಿವಾರಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ಮೂಲಸೌಕರ್ಯ ಬಲವರ್ಧನೆ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆಗೆ ಪ್ರಸಕ್ತ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ತರಲು ಒತ್ತು ನೀಡುತ್ತಿದೆ. ವಿಶೇಷವಾಗಿ ಜನರಿಗೆ ಸರ್ಕಾರಿ ಯೋಜನೆಗಳ ಅರಿವು ಮತ್ತು ಜನರ ಭಾಗೀದಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಕಲಬುರಗಿ ಜಿಲ್ಲೆಯ ಅಫಜಲಪೂರ, ಶಹಾಬಾದ ಹಾಗೂ ಕಾಳಗಿ ಮೂರು ತಾಲೂಕುಗಳನ್ನು ಮಹತ್ವಕಾಂಕ್ಷೆ ತಾಲೂಕುಗಳೆಂದು ಗುರುತಿಸಲಾಗಿತ್ತು. ಇದೀಗ ಕಾಳಗಿ ತಾಲೂಕಿನ ಪ್ರಗತಿಗೆ ನೀತಿ ಆಯೋಗ ರ‍್ಯಾಂಕ್ ಘೋಷಿಸಿರುವುದರಿಂದ ಜಿಲ್ಲೆ ಮತ್ತು ರಾಜ್ಯದ ಕೀರ್ತಿ ಹೆಚ್ಚಿಸಿದೆ. ಶೀಘ್ರದಲ್ಲಿಯೇ ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಅಧಿಕಾರಿಗಳನು ಆಹ್ವಾನಿಸಿ ಅಧಿಕೃತವಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ.

ಹೆಚ್ಚಿನ ಅನುದಾನ ನಿರೀಕ್ಷೆ

ನೀತಿ ಆಯೋಗದಿಂದ ಎರಡನೇ ರ‍್ಯಾಂಕ್ ಪಡೆದಿರುವುದರಿಂದ ಕಾಳಗಿ ತಾಲೂಕಿಗೆ ಕೇಂದ್ರದಂದ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ಅನುದಾನ ಹರಿದು ಬಂದಲ್ಲಿ ತಾಲೂಕಿನ ಪ್ರಗತಿಗೆ ವರವಾಗಲಿದೆ.

ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಕಾಳಗಿ ತಾಲೂಕಿನಲ್ಲಿ ಕಾರ್ಯಕ್ರಮಗಳ ಉತ್ತಮ ನಿರ್ವಹಣೆಗೆ ನೀತಿ ಆಯೋಗದಿಂದ ಎರಡನೇ ರ‍್ಯಾಂಕ್ ಘೋಷಿಸಿರುವುದಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕಾಳಗಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮುಖ್ಯ ಯೋಜನಾಧಿಕಾರಿ ಮತ್ತು ಎ.ಬಿ.ಪಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಶರಣಯ್ಯ ಎಸ್. ಮಠಪತಿ, ತಾಲೂಕಿನ ಎ.ಬಿ.ಪಿ. ಫೆಲೋ ಶಿವರಾಜ ಹೋಳ್ಕರ್ ಸೇರಿದಂತೆ ಇಡೀ ತಾಲೂಕು ಆಡಳಿತ ಎಲ್ಲಾ ಅಧಿಕಾರಿ-ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿರುವ ಅವರು, ಮುಂದೆಯೂ ಇದೇ ರೀತಿಯಲ್ಲಿ ಅಫಜಲಪೂರ ಮತು ಶಹಾಬಾದ ತಾಲೂಕುಗಳು ಸಹ ರ‍್ಯಾಂಕ್ ಪಡೆಯಲು ಪ್ರಯತ್ನಿಸಬೇಕು ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:23 pm, Tue, 27 August 24

ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ