AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahashivratri 2023: ಕಲಬುರಗಿ; ಶೇಂಗಾದಲ್ಲಿ ಅರಳಿದ ಬೃಹತ್​ ಶಿವಲಿಂಗ, ದ್ವಾದಶ ಜ್ಯೋತಿರ್ಲಿಂಗ ದರ್ಶನ

Mahashivratri: ಶರಣಬಸಪ್ಪ ಅಪ್ಪರ ನಾಡು ಕಲಬುರಗಿ, ಮಹಾಶಿವರಾತ್ರಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿವಿಯ ಅಮೃತ ಸರೋವರ ಆವರಣದಲ್ಲಿ ಈ ಬಾರಿಯೂ ಆಕರ್ಷಕ ಬೃಹತ್ ಶಿವಲಿಂಗವು ದರ್ಶನಕ್ಕೆ ಸಿದ್ಧವಾಗಿದೆ.

Mahashivratri 2023: ಕಲಬುರಗಿ; ಶೇಂಗಾದಲ್ಲಿ ಅರಳಿದ ಬೃಹತ್​ ಶಿವಲಿಂಗ, ದ್ವಾದಶ ಜ್ಯೋತಿರ್ಲಿಂಗ ದರ್ಶನ
ಶೇಂಗಾದಲ್ಲಿ ಅರಳಿದ ಮೂಡಿದ ಶಿವಲಿಂಗ
TV9 Web
| Edited By: ವಿವೇಕ ಬಿರಾದಾರ|

Updated on:Feb 18, 2023 | 9:50 AM

Share

ಕಲಬುರಗಿ: ಶರಣಬಸಪ್ಪ ಅಪ್ಪರ ನಾಡು ಕಲಬುರಗಿ, ಮಹಾಶಿವರಾತ್ರಿ (Mahashivaratri) ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿವಿಯ ಅಮೃತ ಸರೋವರ ಆವರಣದಲ್ಲಿ ಈ ಬಾರಿಯೂ ಆಕರ್ಷಕ ಬೃಹತ್ ಶಿವಲಿಂಗವು ದರ್ಶನಕ್ಕೆ ಸಿದ್ಧವಾಗಿದೆ. ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮ ಸಾರ್ವಜನಿಕರನ್ನು ಆಧ್ಯಾತ್ಮದ ಕಡೆಗೆ ಸೆಳೆಯಲು ಪ್ರತಿವರ್ಷ ಮಹಾಶಿವರಾತ್ರಿಯಂದು ವಿಭಿನ್ನ ಹಾಗೂ ವಿಷೇಶವಾಗಿ ಆಚರಿಸುತ್ತ ಬಂದಿದೆ. ಅದರಂತೆ ಈ ಬಾರಿಯು ಶೇಂಗಾದಿಂದ ಬೃಹತ್ ಶಿವಲಿಂಗವನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ.

ಈ ಹಿಂದೆ ತೆಂಗಿನಕಾಯಿ, ತೂಗರಿ, ಮುತ್ತು, ಅಡಿಕೆ ಹೀಗೆ ನಾನಾ ರೀತಿಯ ಶಿವಲಿಂಗ ನಿರ್ಮಾಣ ಮಾಡುವ ಮುಖಾಂತರ ಆಶ್ರಮ ಮನೆಮಾತಾಗಿದೆ. ಈ ಬಾರಿಯೂ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಶೇಂಗಾವನ್ನು ಬಳಸಿ ಸ್ವತಃ ಆಶ್ರಮವಾಸಿಗಳೇ ಆಕರ್ಷಕ ಶಿವಲಿಂಗ ನಿರ್ಮಿಸಿ ಈ ವರ್ಷದ ಶಿವರಾತ್ರಿಯನ್ನು ಅವಿಸ್ಮರಣೀಯವಾಗಿಸಿದೆ. 8 ಕ್ವಿಂಟಲ್ ಶೇಂಗಾದ ಕಾಳು ಬಳಸಿ ಅರಸಿಣ, ಕುಂಕುಮದ ಬಣ್ಣ ಬಳಿದು ತಯಾರಿಸಲಾದ 25 ಅಡಿ ಎತ್ತರದ ಕಂಗೊಳಿಸುತ್ತಿರುವ ಶಿವಲಿಂಗ ನೋಡುಗರ ಭಕ್ತಿಭಾವ ಉಕ್ಕಿಸುವಂತಿದೆ.

ಸಿರಿಧ್ಯಾನ ಸೇರಿ 12 ಜೋತಿರ್ಲಿಂಗ

ಶೇಂಗಾದ ಶಿವಲಿಂಗದ ಜೊತೆಗೆ ಆಶ್ರಮದ ಪ್ರಾಂಗಣದಲ್ಲಿ ನ್ಯಾಣ್ಯ, ಕಲ್ಲು ಸಕ್ಕರೆ, ಗೊಂಡಂಬಿ, ಸಿರಿಧಾನ್ಯಗಳು, ಹೀಗೆ ವಿಭಿನ್ನವಾಗಿರುವ ಚಿಕ್ಕಗಾತ್ರದ ಶಿವಲಿಂಗಗಳನ್ನು ನಿರ್ಮಾಣ ಮಾಡಲಾಗಿದೆ.

10 ದಿನ ದರ್ಶನಕ್ಕೆ ಅವಕಾಶ

ಶಿವರಾತ್ರಿಯ‌ ಹಿನ್ನಲೆ ನಿರ್ಮಾಣ ‌ಮಾಡಲಾದ ಶೇಂಗಾ ಶಿವಲಿಂಗದ ದರ್ಶನಕ್ಕೆ ಫೆ.18ರಿಂದ ಹತ್ತು ದಿನಗಳಕಾಲ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 am, Sat, 18 February 23

Follow Us
Web contact
Web contact

TV9 Kannada

Read More
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ