ಕಲಬುರಗಿಯ ಸರ್ಕಾರಿ ಚಿಕಿತ್ಸಾಲಯಗಳಲ್ಲಿ ಎದುರಾಗಿದೆ ಔಷಧಗಳ ಕೊರತೆ!
Kalaburagi: ಸರ್ಕಾರಿ ಔಷಧ ಗೋದಾಮುಗಳಲ್ಲಿ 452 ಬಗೆಯ ಔಷಧಗಳನ್ನು ದಾಸ್ತಾನು ಮಾಡಬೇಕಿದ್ದರೂ ಕಲಬುರಗಿ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಕೇವಲ 213 ಬಗೆಯ ಔಷಧಗಳಿವೆ.
ಕಲಬುರಗಿ: ಕಲಬುರಗಿ ಜಿಲ್ಲೆಯ (Kalaburagi district) ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ (health centres) ಅತ್ಯಗತ್ಯ ಔಷಧಗಳಾದ ಪ್ಯಾರಸಿಟಮಾಲ್ (paracetamol) ಮತ್ತು ಡೈಕ್ಲೋಫೆನಾಕ್ ಕೊರತೆ ಎದುರಾಗಿದೆ. ಮಾತ್ರೆಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿರುವುದೇ ಕೊರತೆಗೆ ಕಾರಣ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಎಲ್ಲಾ ಔಷಧಗಳನ್ನು ಖಾಸಗಿ ಮೆಡಿಕಲ್ ಶಾಪ್ ಗಳಲ್ಲಿ ಖರೀದಿಸುವಂತೆ ವೈದ್ಯರು ರೋಗಿಗಳಿಗೆ ಹೇಳಲಾರಂಭಿಸಿದ್ದಾರೆ ಎಂದು timesofindia.indiatimes.com ವರದಿ ಮಾಡಿದೆ.
ಸರ್ಕಾರಿ ಔಷಧ ಗೋದಾಮುಗಳಲ್ಲಿ 452 ಬಗೆಯ ಔಷಧಗಳನ್ನು ದಾಸ್ತಾನು ಮಾಡಬೇಕಿದ್ದರೂ ಕಲಬುರಗಿ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಕೇವಲ 213 ಬಗೆಯ ಔಷಧಗಳಿವೆ. ಕೆಲವು ಸರ್ಕಾರಿ ಚಿಕಿತ್ಸಾಲಯಗಳಲ್ಲಿ 55 ಎಂ.ಜಿ. ಪ್ಯಾರಸಿಟಮಾಲ್ ಚುಚ್ಚುಮದ್ದು ಇದೆ. ಆದರೆ ಮಾತ್ರೆಗಳಿಲ್ಲ, ಮಾತ್ರೆಗಳಿದ್ದಿದ್ದರೆ ಅವುಗಳನ್ನು ಸೇವಿಸಲು ಸುಲಭವಾಗುತ್ತದೆ.
ಔಷಧ ದಾಸ್ತಾನು ಉಸ್ತುವಾರಿ ವಹಿಸಿಕೊಂಡಿರುವ ಡಾ. ರಾಜಶೇಖರ್ ಮಾಳಿ ಮಾತನಾಡಿ, ‘ಕಳೆದ ಕೆಲ ತಿಂಗಳಿಂದ ಔಷಧಗಳ ಕೊರತೆ ಎದುರಿಸುತ್ತಿದ್ದರೂ ಅದನ್ನು ಹೇಗೋ ನಿಭಾಯಿಸಿದ್ದೇವೆ. ಇದೀಗ ಆರೋಗ್ಯ ಕೇಂದ್ರದ ಎಲ್ಲ ವೈದ್ಯರಿಗೂ ಸ್ಥಳೀಯವಾಗಿ ಔಷಧ ಖರೀದಿಸಲು ಸರ್ಕಾರ ಹಣ ನೀಡಲಿದೆ. ಮುಂದೆ, ನಾವು ಟೆಂಡರ್ ಕರೆದು ಜಿಲ್ಲಾ ಔಷಧ ಗೋದಾಮಿನಲ್ಲಿ ಔಷಧಗಳನ್ನು ಖರೀದಿಸುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಮುರುಘಾ ಮಠದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರಿಗೆ ಡ್ರಗ್ಸ್ ನೀಡಲಾಗುತಿತ್ತು: ಕೆವಿ ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ
ಇದನ್ನೂ ಓದಿ: ಕಳೆದೊಂದು ವರ್ಷದಲ್ಲಿ ಗಗನ ಚುಂಬಿಸಿದ ಅಗತ್ಯ ವಸ್ತುಗಳ ಬೆಲೆ: ಯಾವುದರ ಬೆಲೆ, ಎಷ್ಟೆಷ್ಟು ಏರಿಕೆ?