AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರ ಸಂಘನೆಗಳೊಂದಿಗೆ ನಂಟು ಆರೋಪ: ಕಲಬುರಗಿಯಲ್ಲಿ ಶಂಕಿತ ವ್ಯಕ್ತಿ ಅರೆಸ್ಟ್​

ಉಗ್ರ ಸಂಘನೆ ಲಷ್ಕರ್-ಎ-ತೈಬಾ ಜೊತೆ ನಂಟು ಹೊಂದಿರುವ ಶಂಕೆ ಮೇರೆಗೆ ಕಲಬುರಗಿಯ ಸರಾಫ್ ಬಜಾರ್‌ನಲ್ಲಿ ಚಿನ್ನಾಭರಣ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್‌ವುಲ್‌ ಮಲೀಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಹೋದರನೊಂದಿಗೆ ಕೆಲಸ ಮಾಡುತ್ತಿದ್ದ ಆರೋಪಿ, ಸಾಮಾಜಿಕ ಜಾಲತಾಣಗಳ ಮೂಲಕ ಲಷ್ಕರ್ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಉಗ್ರ ಸಂಘನೆಗಳೊಂದಿಗೆ ನಂಟು ಆರೋಪ: ಕಲಬುರಗಿಯಲ್ಲಿ ಶಂಕಿತ ವ್ಯಕ್ತಿ ಅರೆಸ್ಟ್​
ಕಲಬುರಗಿಯಲ್ಲಿ ಓರ್ವ ಶಂಕಿತ ವ್ಯಕ್ತಿ ವಶಕ್ಕೆ Image Credit source: Tv9 Kannada
ದತ್ತಾತ್ರೇಯ ಪಾಟೀಲ್​
| Edited By: |

Updated on:Oct 18, 2026 | 12:14 PM

Share

ಬೆಂಗಳೂರು, ಅಕ್ಟೋಬರ್​​ 18: ಉಗ್ರ ಸಂಘನೆಗಳೊಂದಿಗೆ ನಂಟು ಹೊಂದಿದ ಆರೋಪ ಹಿನ್ನೆಲೆ ಕಲಬುರಗಿಯಲ್ಲಿ ಓರ್ವ ಶಂಕಿತ ವ್ಯಕ್ತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸರಾಫ್ ಬಜಾರ್‌ನಲ್ಲಿ ಚಿನ್ನಾಭರಣ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್‌ವುಲ್‌ ಮಲೀಕ್ ಆರೋಪಿಯಾಗಿದ್ದು, ಈತ ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಸಹೋದರನೊಂದಿಗೆ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಮ್ತಾಜ್‌ವುಲ್‌ ಮಲೀಕ್, ಸಾಮಾಜಿಕ ಜಾಲತಾಣಗಳ ಮೂಲಕ ಲಷ್ಕರ್ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ. ಹಲವು ಮಹತ್ವದ ವಿಷಯಗಳನ್ನು ಮೆಸೇಜ್ ಮೂಲಕ ಹಂಚಿಕೊಂಡಿದ್ದ ಎಂಬ ಮಾಹಿತಿ ಲಭಿಸಿದೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೆಲ ದಿನಗಳ ಹಿಂದೆ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಯುವಕನನ್ನು ಬಂಧಿಸಲಾಗಿತ್ತು. ಈ ನಡುವೆಯೇ ಕಲಬುರಗಿಯಲ್ಲಿ ಇದೀಗ ಮತ್ತೊಬ್ಬ ಶಂಕಿತ ವ್ಯಕ್ತಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

‘ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು’

ಶಂಕಿತ ಭಯೋತ್ಪಾದಕನ ವಶಕ್ಕೆ ಪಡೆದ ಪ್ರಕರಣ ಸಂಬಂಧ ಕಲಬುರಗಿ ನಗರದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಉಗ್ರರ ಜೊತೆ ನಂಟು ಹಿನ್ನೆಲೆ ಓರ್ವನನ್ನು ಅರೆಸ್ಟ್​ ಮಾಡಲಾಗಿದೆ. ಕೇಂದ್ರ ಗುಪ್ತಚರ ಮತ್ತು ರಾಜ್ಯ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ಬಳಿಕ ಓರ್ವ ಸಂಪರ್ಕದಲ್ಲಿದ್ದ ಎಂಬ ವಿಚಾರ ಗೊತ್ತಾಗಿದೆ. ನಾವು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕೇಂದ್ರದ ಜೊತೆ ಕೋ-ಆರ್ಡಿನೇಷನ್​ನೊಂದಿಗೆ ತನಿಖೆ ನಡೆಸ್ತಿದ್ದೇವೆ. ಹೊರ ರಾಜ್ಯದವರು ಬಹಳಷ್ಟು ಜನರು ಇಲ್ಲಿ ಉದ್ಯೋಗಕ್ಕೆ ಬರ್ತಿದ್ದಾರೆ. ಇಲ್ಲಿಗೆ ಉದ್ಯೋಗಕ್ಕೆ ಬರೋದು ಅವರ ಹಕ್ಕು, ತಡೆಯಲು ಆಗಲ್ಲ. ಬೇರೆ ರಾಜ್ಯದವರ ಕುರಿತು ಮಾಹಿತಿ ಕೇಳಿದ್ದೇವೆ, ಯಾರೂ ಕೊಟ್ಟಿಲ್ಲ. ದಸರಾ ಹಬ್ಬದ ನಂತರ ಎಲ್ಲಾ ಉದ್ಯಮಿಗಳು, ಇ-ಕಾಮರ್ಸ್, ಕಾಫಿ ಅಸೋಸಿಯೇಷನ್, ಹೋಂ ​ಸ್ಟೇ ಸೇರಿದಂತೆ ಎಲ್ಲರನ್ನೂ ಕರೆಸಿ ನಿಮ್ಮ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸೆಸ್ ಏನೆಂದು ಮಾಹಿತಿ ಸಂಗ್ರಹ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ.

ಸಾಲು ಸಾಲು ಪ್ರಕರಣ

ಪಾಕಿಸ್ತಾನ ಮೂಲದ ಘೋಷಿತ ಉಗ್ರ ಶಹಜಾದ್ ಭಟ್ಟಿ ಆ್ಯಂಡ್​ ಇತರರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಯಣಕೂರ ಗ್ರಾಮದ ವಿಶಾಲ್ ಮೇತ್ರೆ ಎಂಬಾತನನ್ನು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಎನ್​ಐಎ ಅ1ರಂದು ಬಂಧಿಸಿತ್ತು. ಆ ಬಳಿಕ ವಿಶಾಲ್​ ಮೇತ್ರೆ ಸೇರಿದಂತೆ 7 ಜನರ ವಿರುದ್ಧ FIR ದಾಖಲಾಗಿತ್ತು. ಆರೋಪಿ ಪಾಕಿಸ್ತಾನ ಮೂಲದ ಉಗ್ರರ ಜಾಲದ ಜೊತೆ ನಂಟಿದೆ. ವಾಟ್ಸ್​​ಆ್ಯಪ್​​​, ಇನ್​​ಸ್ಟಾಗ್ರಾಮ್​​​​ ಮೂಲಕ ಪಾಕ್ ಮೂಲದ ಶಹಜಾದ್ ಭಟ್ಟಿ ರಾಣಾ ಹುನೇನ್ ಜೊತೆ ವಿಶಾಲ್​ ಮೇತ್ರೆ ಸಂಪರ್ಕ ಹೊಂದಿದ್ದ. ಅಕ್ರಮಶಸ್ತ್ರಾಸ್ತ್ರ ಖರೀದಿ,ಸಾಗಣೆ ಕುರಿತು ಚರ್ಚಿಸಿದ್ದ ಎಂಬ ಬಗ್ಗೆ ಎಫ್​​ಐಆರ್​​ನಲ್ಲಿ ಉಲ್ಲೇಖಿಸಲಾಗಿತ್ತು.

LIVE TV

ಇದನ್ನೂ ಓದಿ: ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಬೀದರ್‌ನ ವಿಶಾಲ್ ಮೈತ್ರೆ ಸಹಿತ ಏಳು ಜನರ ವಿರುದ್ಧ FIR

ಜೂನ್ 2026ರಲ್ಲ, ಉತ್ತರ ಪ್ರದೇಶ ಮೂಲದ ೨೦ ವರ್ಷದ ಸುಹೇಲ್ ಎಂಬಾತನನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗ್ರಾಮವೊಂದರಲ್ಲಿ ಬಂಧಿಸಲಾಗಿತ್ತು. ಈತ ಪೇಂಟರ್ ಸೋಗಿನಲ್ಲಿ ತಲೆಮರೆಸಿಕೊಂಡಿದ್ದು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಮತ್ತು ವಿದೇಶಿ ಹ್ಯಾಂಡ್ಲರ್‌ಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಆನ್‌ಲೈನ್ ಉಗ್ರಗಾಮಿ ಪ್ರೇರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆಧಾರದ ಮೇಲೆ ಎನ್‌ಐಎ (NIA) ನೀಡಿದ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:44 am, Sun, 18 October 26

Follow Us
ದತ್ತಾತ್ರೇಯ ಪಾಟೀಲ್​
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​