
ಬೆಂಗಳೂರು, (ಏಪ್ರಿಲ್ 03): ದುಬೈನಿಂದ ಚಿನ್ನ ಸಾಗಾಟ (gold smuggling case) ಮಾಡಿ ಕಂಬಿ ಎಣಿಸುತ್ತಿರುವ ರನ್ಯಾ ರಾವ್ (Ranya Rao) ಕಳ್ಳಾಟ ಒಂದೊಂದೇ ಅಂಶ ಬಯಲಿಗೆ ಬರುತ್ತಿವೆ. ರನ್ಯಾ ಕಳ್ಳಾಟದ ಕೇಸ್ ನ ಮೂರನೇ ಆರೋಪಿ ಸಾಹಿಲ್ ಜೈನ್ DRI ಮುಂದೆ ಅನೇಕ ಸಂಗತಿ ಬಾಯ್ಬಿಟ್ಟಿದ್ದಾನೆ. ಜನವರಿಯಿಂದ ರನ್ಯಾ ಬರೋಬ್ಬರಿ 49.6 ಕೆಜಿ ಚಿನ್ನ ಸಾಗಿಸಿದ್ದ ಸ್ಫೋಟಕ ವಿಚಾರ ಬಯಲಾಗಿದೆ. ಈ ಚಿನ್ನವನ್ನೆಲ್ಲ ತಂದು ಸಾಹಿಲ್ ಜೈನ್ಗೆ (Sahil Jain) ಕೊಟ್ಟಿದ್ದ ರನ್ಯಾ, ಅದನ್ನ ಆತನ ಮೂಲಕವೇ ಮಾರಾಟ ಮಾಡಿಸುತ್ತಿದ್ದಳು. ಅಷ್ಟೇ ಅಲ್ಲ ಚಿನ್ನ ತರಲು 30 ಕೋಟಿ ರೂಪಾಯಿ ಹಣವನ್ನು ಹವಾಲ ಮೂಲಕ ದುಬೈಗೆ ಸಾಗಾಟ ಮಾಡುತ್ತಿದ್ದಳು ಎನ್ನುವು ತನಿಖೆಯಲ್ಲಿ ಬಟಾಬಯಲಾಗಿದೆ.
ಕಳೆದ ನವೆಂಬರ್ ತಿಂಗಳಿನಿಂದಲೇ ಬರೋಬ್ಬರಿ 49.6 ಕೆಜಿ ಚಿನ್ನ ತಂದು ತನಗೆ ಕೊಟ್ಟಿರುವುದಾಗಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ 3ನೇ ಆರೋಪಿ ಸಾಹಿಲ್ ಜೈನ್ ಡಿಆರ್‌ಐ ಮುಂದೆ ಬಾಯ್ಬಿಟ್ಟಿದ್ದಾನೆ. ಹೌದು… ನವೆಂಬರ್ನಿಂದಲೇ ಬರೋಬ್ಬರಿ 49.6 ಕೆಜಿ ಚಿನ್ನ ತಂದು ಸಾಹಿಲ್ ಜೈನ್ಗೆ ಕೊಡುತ್ತಿದ್ದಳು. ಇನ್ನು ರನ್ಯಾ ತಂದುಕೊಟ್ಟಿದ್ದ 49.6 ಕೆಜಿ ಚಿನ್ನವನ್ನು ಸಾಹಿಲ್ ಜೈನ್ ಮಾರಾಟ ಮಾಡಿದ್ದ. ಪ್ರತಿ ಬಾರಿ ದುಬೈನಿಂದ ಬೆಂಗಳೂರಿಗೆ ಚಿನ್ನತಂದು ಮಾರಾಟ ಮಾಡಿದ ಬಳಿಕ ಅದರಿಂದ ಬಂದ ಹಣದಿಂದಲೇ ಮತ್ತೆ ಚಿನ್ನ ಖದೀಗೆ ಹೋಗುತ್ತಿದ್ದಳು. ಇದುವರೆಗೂ 30 ಕೋಟಿ ರೂ. ಹಣ ಹವಾಲ ಮೂಲಕ ದುಬೈಗೆ ಸಾಗಾಟವಾಗಿರುವ ಮಾಹಿತಿ ಲಭ್ಯವಾಗಿದೆ.
ರನ್ಯಾ ರಾವ್ ಒಮ್ಮೆ ಭಾರತಕ್ಕೆ ಚಿನ್ನ ತಂದು ಮಾರಾಟ ಮಾಡಿದ ಬಳಿಕ ಅದರಿಂದ ಬಂದ ಹಣದಿಂದಲೇ ಮತ್ತೆ ದುಬೈನಲ್ಲಿ ಚಿನ್ನ ಖರೀದಿ ಮಾಡುತ್ತಿದ್ದಳು. ಹೀಗೆ ಪ್ರತಿ ಬಾರಿ ದುಬೈಗೆ ಹವಾಲ ಮೂಲಕ ಹಣ ರವಾನಿಸೋ ಕೆಲಸವನ್ನ ಸಾಹಿಲ್ ಜೈನ್ ಮೂಲಕ ಮಾಡಿಸುತ್ತಿದ್ದಳು. ಇದಕ್ಕೂ ಮುನ್ನ ಜನವರಿಯಲ್ಲಿ 55 ಲಕ್ಷ ರೂ, ಫೆಬ್ರವರಿಯಲ್ಲಿ 55 ಲಕ್ಷ, ಮತ್ತೊಮ್ಮೆ 30 ಲಕ್ಷ ಸೇರಿ ಒಟ್ಟು 1,73,61,787 ರೂ ಹಣವನ್ನು ಮನೆಗೆ ಹವಾಲ ಮೂಲಕ ತರಿಸಿಕೊಂಡಿದ್ದಾಳೆ. ಪ್ರತಿ ಬಾರಿಯ ಹವಾಲಾ ವಹಿವಾಟಿಗೆ ಸಾಹಿಲ್ ಜೈನ್ ಐವತ್ತೈದು ಸಾವಿರ ಕಮಿಷನ್ ಪಡೆಯುತ್ತಿದ್ದ.
ಸದ್ಯ ರನ್ಯಾ ರಾವ್ ಕೇಸ್ ನಲ್ಲಿ ಇದುವರೆಗೆ 49.6 kg ಚಿನ್ನದ ಸಾಗಾಟ ಮಾಡಿದ್ದು, ದುಬೈಗೆ ಹವಾಲ ಮೂಲಕ 38,39,97,000 ರೂ. ಹಣ ಕಳಿಸಿರೋ ವಿಚಾರ ಬಯಲಾಗಿದೆ. ಆದರೆ ಡಿಆರ್ ಗೆ ಇದುವರೆಗೆ ಸಿಕ್ಕಿರುವುದು 14.206 ಕೆಜಿ ಚಿನ್ನ, 2,67,00,000 ರೂ. ನಗದು ಮತ್ತು ಎರಡು ಕೆಜಿ ಚಿನ್ನದ ಆಭರಣ ಮಾತ್ರ ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ (Ballari) ಮೂಲದ ಸಾಹಿಲ್ ಜೈನ್ ರನ್ಯಾ ರಾವ್ ಜೊತೆಗೆ ವಾಟ್ಸಪ್ ಚಾಟಿಂಗ್ ಮಾಡಿದ್ದ ಹಿನ್ನೆಲೆ ಸಾಹಿಲ್ ಜೈನ್ ಲಾಕ್ ಆಗಿದ್ದ. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಅವರ ಸಹೋದರರ ಬಟ್ಟೆ ಅಂಗಡಿ ಬಳ್ಳಾರಿಯಲ್ಲಿದ್ದು, ಸಹೋದರರು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಆದರೆ ಕೆಲ ವರ್ಷಗಳಿಂದ ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿದೆ. ಚಿನ್ನದ ವ್ಯಾಪಾರಿಗಳ ಜೊತೆ ನಂಟು ಇರುವ ಹಿನ್ನೆಲೆ ಚಿನ್ನದ ಮಾರಾಟದ ಜವಾಬ್ದಾರಿಯೂ ಸಾಹಿಲ್ ಮೇಲಿತ್ತು.
Published On - 7:54 pm, Thu, 3 April 25