AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ದತೆ: 11 ಸಂಯೋಜಕರನ್ನು ನೇಮಿಸಿದ ಬಿಜೆಪಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಸಕ್ರಿಯವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗುತ್ತಿದೆ. ಈಗಾಗಲೇ ಆಯೋಹ ಚುನಾವಣಾಧಿಕಾರಿಗಳನ್ನು ಸಹ ನೇಮಕ ಮಾಡಿದೆ. ಇದರ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಬಿಜೆಪಿ ಸಹ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಇದಕ್ಕೆ ಪೂರಕೆವೆಂಬಂತೆ ಬಿಜೆಪಿ, ತನ್ನ 11 ಮಂದಿ ಸಂಯೋಜಕರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಹಾಗಾದ್ರೆ, ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ವಿವರ ಇಲ್ಲಿದೆ.

ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ದತೆ: 11 ಸಂಯೋಜಕರನ್ನು ನೇಮಿಸಿದ ಬಿಜೆಪಿ
Greater Bengaluru Election
ಕಿರಣ್​ ಹನಿಯಡ್ಕ
| Edited By: |

Updated on: Oct 23, 2025 | 9:07 PM

Share

ಬೆಂಗಳೂರು, (ಅಕ್ಟೋಬರ್ 23): ಗ್ರೇಟರ್ ಬೆಂಗಳೂರು ರಚನೆ ಬೆನ್ನಲ್ಲೇ ಚುನಾವಣೆಗೆ ( greater bengaluru authority election) ಆಯೋಗ ​ ಎಲ್ಲಾ ಸಿದ್ಶತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ಚುನಾವಣೆಗೆ ಬಿಜೆಪಿ ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ 11 ಮಂದಿ ಸಂಯೋಜಕರನ್ನು ನೇಮಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ, ವಲಯವಾರು ಸಂಘಟನಾತ್ಮಕ ಜಿಲ್ಲೆಯ ಪ್ರಮುಖರನ್ನು ನೇಮಕ ಮಾಡಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ‌ ನೇತೃತ್ವದಲ್ಲಿ ಒಟ್ಟು 11 ಜನರನ್ನು ಒಳಗೊಂಡ ಸಂಯೋಜಕರ ತಂಡ ನೇಮಕ ಮಾಡಲಾಗಿದೆ.

ಇಂದು (ಅಕ್ಟೋಬರ್ 23) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಸಭೆಗಳು ನಡೆದಿದೆ. ಸಭೆಯಲ್ಲಿ ಯಾರಿಗೆ ಜವಾಬ್ದಾರಿ ಹಂಚಿಕೆ ಮಾಡಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆಯಾಗಿದ್ದು, 11 ಮಂದಿ ಸಂಯೋಜಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಇದ್ದಾರೆ.

ಸಂಯೋಜಕರ ತಂಡ

ಬಿವೈ ವಿಜಯೇಂದ್ರ, ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಎಸ್ ಸುರೇಶ್ ಕುಮಾರ್, ಡಿವಿ ಸದಾನಂದ ಗೌಡ, ಪಿಸಿ ಮೋಹನ್, ಸಿ ಎನ್ ಮಂಜುನಾಥ್, ತೇಜಸ್ವಿ ಸೂರ್ಯ, ಡಾ. ಕೆ ಸುಧಾಕರ್, ಎನ್ ಎಸ್ ನಂದೀಶ್ ರೆಡ್ಡಿ.

5 ಪಾಲಿಕೆಗಳಿಗೆ ಸಂಘಟನಾತ್ಮಕ ಸಂಯೋಜಕರು

  • ಬೆಂಗಳೂರು ದಕ್ಷಿಣ – ಸಿಕೆ ರಾಮಮೂರ್ತಿ
  • ಬೆಂಗಳೂರು ಉತ್ತರ- ಎನ್ ಹರೀಶ್
  • ಬೆಂಗಳೂರು ಕೇಂದ್ರ – ಎ ಆರ್ ಸಪ್ತಗಿರಿ ಗೌಡ
  • ಬೆಂಗಳೂರು ಪೂರ್ವ- ಎಂಟಿಬಿ ನಾಗರಾಜ್ ಹಾಗೂ ಕೆ ಎಸ್ ನವೀನ್
  • ಬೆಂಗಳೂರು ಉತ್ತರ – ಮುನಿರತ್ನ ಹಾಗೂ ಭಾರತಿ ಶೆಟ್ಟಿ
  • ಬೆಂಗಳೂರು ದಕ್ಷಿಣ – ಬೈರತಿ ಬಸವರಾಜ ಹಾಗೂ ಎನ್ ರವಿಕುಮಾರ್
  • ಬೆಂಗಳೂರು ಕೇಂದ್ರ – ಡಾ. ಸಿ ಎನ್ ಅಶ್ವತ್ಥ ನಾರಾಯಣ, ಡಿ ಎಸ್ ಅರುಣ್
  • ಬೆಂಗಳೂರು ಪಶ್ಚಿಮ- ನಾರಾಯಣ ಸ್ವಾಮಿ, ಕೆ ಗೋಪಾಲಯ್ಯ, ಅಶ್ವಥ್ ನಾರಾಯಣ

Follow Us
ಕಿರಣ್​ ಹನಿಯಡ್ಕ
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ