AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget 2023: ನಂದಿನಿ ಬ್ರಾಂಡ್​​ ರಕ್ಷಣೆಗೆ ಬದ್ಧ ಎಂದ ಸಿದ್ದರಾಮಯ್ಯ; 10 ಕೋಟಿ ಪ್ರೋತ್ಸಾಹಧನ ಘೋಷಣೆ

2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಸಿದಿರುವುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಚರ್ಮಗಂಟು ರೋಗ ಹರಡಿದ ಹಿನ್ನೆಲೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಶೇ 5ರಿಂದ ಶೇ 7ರಷ್ಟು ಇಳಿಕೆಯಾಗಿದೆ ಎಂದರು.

Karnataka Budget 2023: ನಂದಿನಿ ಬ್ರಾಂಡ್​​ ರಕ್ಷಣೆಗೆ ಬದ್ಧ ಎಂದ ಸಿದ್ದರಾಮಯ್ಯ; 10 ಕೋಟಿ ಪ್ರೋತ್ಸಾಹಧನ ಘೋಷಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 07, 2023 | 4:10 PM

Share

ಬೆಂಗಳೂರು: ಕೆಎಂಎಫ್​ನ ನಂದಿನಿ ಬ್ರಾಂಡ್ (Nandini Brand) ಕನ್ನಡಿಗರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು, ಇದನ್ನು ರಕ್ಷಿಸಲು ಮತ್ತು ಬೆಳೆಸಲು ಬದ್ಧವಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. 14ನೇ ಬಜೆಟ್ (Karnataka Budget 2023) ಮಂಡನೆ ಮಾಡಿದ ಅವರು, ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರೈತರ ಉತ್ಪನ್ನಗಳ ಮಾರುಕಟ್ಟೆಯನ್ನು ಸಕ್ರಿಯಗೊಳಿಸಲು ‘ನಂದಿನಿ’ ಮಾದರಿಯಲ್ಲಿ ರೈತರ ಉತ್ಪನ್ನಗಳ ಬ್ರ್ಯಾಂಡಿಂಗ್ ಅನ್ನು ಪ್ರೋತ್ಸಾಹಿಸಲು 10 ಕೋಟಿ ನೀಡಲಾಗುವುದು ಎಂದು ಘೋಷಿಸಿದರು.

2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಸಿದಿರುವುದನ್ನು ಉಲ್ಲೇಖಿಸಿದ ಅವರು, ಚರ್ಮಗಂಟು ರೋಗ ಹರಡಿದ ಹಿನ್ನೆಲೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಶೇ 5ರಿಂದ ಶೇ 7ರಷ್ಟು ಇಳಿಕೆಯಾಗಿದೆ ಎಂದರು.

‘ನಂದಿನಿ’ ಎಂಬ ಅಡಿಬರಹದೊಂದಿಗೆ ‘ಹಸುವಿನಿಂದ ಗ್ರಾಹಕನಿಗೆ ಗುಣಮಟ್ಟದ ಉತ್ಕೃಷ್ಟತೆ’ ಕೋಟ್ಯಂತರ ಜನರ ಜೀವನಕ್ಕೆ ಬೆಂಬಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ನಂದಿನಿ ಬ್ರಾಂಡ್ ಕನ್ನಡಿಗರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದೆ ಮತ್ತು ಈ ಬಾಂಧವ್ಯವನ್ನು ರಕ್ಷಿಸಲು ಮತ್ತು ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ರಾಜ್ಯದಲ್ಲಿ 33,000 ಜಾನುವಾರುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿ ಸಾವನ್ನಪ್ಪಿವೆ ಎಂದು ಅವರು ಮಾಹಿತಿ ನೀಡಿದರು.

ಹಾಲು ಕೊಡುವ ಜಾನುವಾರುಗಳನ್ನು ಕಳೆದುಕೊಂಡಿರುವ ಹೈನುಗಾರರಿಗೆ ಪರಿಹಾರ ನೀಡಲು 12 ಕೋಟಿ ರೂಪಾಯಿ ಬಾಕಿ ಮೊತ್ತವನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಪುಣ್ಯಕೋಟಿ ದತ್ತು ಯೋಜನೆ, ಹಾವೇರಿಯಲ್ಲಿ ಮೆಗಾ ಡೈರಿ

ರಾಜ್ಯದಲ್ಲಿ 100 ಹೊಸ ಪಶು ಚಿಕಿತ್ಸಾಲಯಗಳನ್ನು ಸ್ಥಾಪಿಸುವುದಾಗಿಯೂ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಗೋವುಗಳನ್ನು ದತ್ತು ಪಡೆಯಲು ಪ್ರೋತ್ಸಾಹಿಸಲು ಪುಣ್ಯಕೋಟಿ ದತ್ತು ಯೋಜನೆಯನ್ನೂ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಮೆಗಾ ಡೈರಿಗಳನ್ನು ಸ್ಥಾಪಿಸುವ ಯೋಜನೆಯನ್ನು ಸಿದ್ದರಾಮಯ್ಯ ಘೋಷಿಸಿದರು.

ಇದನ್ನೂ ಓದಿ: Karnataka Budget 2023: ಸಿದ್ದರಾಮಯ್ಯ ಬಜೆಟ್​​ನಲ್ಲಿ ಯಾವುದಕ್ಕೆಲ್ಲ ತೆರಿಗೆ ಹೆಚ್ಚಳ? ಇಲ್ಲಿದೆ ವಿವರ

ಇದಲ್ಲದೆ, ಶಿವಮೊಗ್ಗ, ಚಿತ್ರದುರ್ಗ-ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ಹಾಲು ಒಕ್ಕೂಟಗಳ ಸ್ಥಾಪನೆಗೆ ಸರ್ಕಾರ ಉತ್ತೇಜನ ನೀಡುತ್ತದೆ.

ಹೆಚ್ಚಲಿವೆ ಗೋಶಾಲೆಗಳು

ಕ್ಷೀರ ಸಮೃದ್ಧಿ ಶಾಕರ ಬ್ಯಾಂಕ್‌ಗೆ ಷೇರು ಬಂಡವಾಳವಾಗಿ 100 ಕೋಟಿ ರೂಪಾಯಿ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದರು. ಈ ಬ್ಯಾಂಕ್ ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತದೆ. ಇದೇ ವೇಳೆ, 50 ಕೋಟಿ ರೂಪಾಯಿ ವೆಚ್ಚದಲ್ಲಿ ಗೋಶಾಲೆಗಳ ಸಂಖ್ಯೆ ಹೆಚ್ಚಿಸಲು ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ.

ಇನ್ನಷ್ಟು ಕರ್ನಾಟಕ ಬಜೆಟ್ 2023 ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ