ತವರು ಜಿಲ್ಲೆ ಮೈಸೂರಿಗೆ ಸಿದ್ದರಾಮಯ್ಯ ಬಂಪರ್ ಕೊಡುಗೆ: ಇತರೆ ಜಿಲ್ಲೆಗೆ ಕೊಟ್ಟಿದ್ದೇನು?

|

Updated on: Mar 07, 2025 | 7:51 PM

ಸರ್ವರಿಗೂ ಸಮಪಾಲು ಧ್ಯೇಯವಾಕ್ಯದೊಂದಿಗೆ ಸಿಎಂ ಸಿದ್ದರಾಮಯ್ಯ ಇಂದು(ಮಾರ್ಚ್​ 07) ಬಜೆಟ್ ಮಂಡಿಸಿದ್ದು, ಬೆಂಗಳೂರಿಗೆ ಆದ್ಯತೆ ಕೊಟ್ಟಷ್ಟೇ ರಾಜ್ಯದ ಇತರೆ ಜಿಲ್ಲೆಗಳಿಗೂ ಪ್ರಾಮುಖ್ಯತೆ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯನವರು ತಮ್ಮ ತವರು ಜಿಲ್ಲೆ ಮೈಸೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಹಾಗಾದ್ರೆ, ನಿಮ್ಮ ನಿಮ್ಮ ಜಿಲ್ಲೆಗೆ ಏನೇನು ಸಿಕ್ಕಿದೆ ಎನ್ನುವ ವಿವರ ಇಲ್ಲಿದೆ.

ತವರು ಜಿಲ್ಲೆ ಮೈಸೂರಿಗೆ ಸಿದ್ದರಾಮಯ್ಯ ಬಂಪರ್ ಕೊಡುಗೆ: ಇತರೆ ಜಿಲ್ಲೆಗೆ ಕೊಟ್ಟಿದ್ದೇನು?
Siddaramaiah Budget 2025
Follow us on

ಬೆಂಗಳೂರು, (ಮಾರ್ಚ್​ 07):  ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಇಂದು (ಮಾರ್ಚ್​ 07) 2025ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget 2025)​ ಮಂಡನೆ ಮಾಡಿದ್ದಾರೆ. ಬಜೆಟ್​ನ ಗಾತ್ರ ಬರೋಬ್ಬರಿ 4 ಲಕ್ಷ ಕೋಟಿ ರೂ. ಆಗಿದೆ. ಕಳೆದ ವರ್ಷ 3 ಲಕ್ಷ 71 ಸಾವಿರದ 383 ಕೋಟಿ ಬಜೆಟ್ ಗಾತ್ರವಿತ್ತು. ಈ ಬಾರಿ ಈ ಅಂಕಿ 4 ಲಕ್ಷ ಕೋಟಿ ದಾಟಿದೆ. ಅಂದ್ರೆ 4 ಲಕ್ಷ 9 ಸಾವಿರದ 549 ಕೋಟಿ ರೂಪಾಯಿಯ ದಾಖಲೆಯ ಬಜೆಟ್ ಇದಾಗಿದೆ.  ಇನ್ನು ಈ ಬಾರಿ ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್, ಹಲವು ಜಿಲ್ಲೆಗಳಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಅದರಲ್ಲೂ ತಮ್ಮ ತವರು ಜಿಲ್ಲೆ ಮೈಸೂರು(Mysuru) ಜಿಲ್ಲೆಗೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಹಾಗಾದ್ರೆ, ಯಾವ್ಯಾವ ಜಿಲ್ಲೆಗೆ ಏನೇನು ನೀಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ತವರು ಜಿಲ್ಲೆ ಮೈಸೂರಿಗೆ ಭರಪೂರ ಕೊಡುಗೆ

ಮೈಸೂರಲ್ಲಿ 500 ಕೋಟಿ ವೆಚ್ಚದ ಚಿತ್ರನಗರಿ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಚಿತ್ರನಗರಿಗೆ 150 ಎಕರೆ ಜಮೀನು ಮೀಸಲಿಟ್ಟಿದ್ದಾರೆ. ವಿಮಾನ ನಿಲ್ದಾಣದ ಅಭಿವೃದ್ಧಿಗೆ 319 ಕೋಟಿ ರೂ. ಅನುದಾನ ನೀಡಿದ್ರೆ, ಮೈಸೂರಿನ 150 ಎಕರೆ ಪ್ರದೇಶದಲ್ಲಿ ಪಿಸಿಬಿ ಪಾರ್ಕ್ ಅಭಿವೃದ್ಧಿ. ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಎಂಡೋಕ್ರೈನಾಲಜಿ ಕೇಂದ್ರ ಪ್ರಾರಂಭ. ಮೈಸೂರಿನ ರಂಗಾಯಣದ ಕಾರ್ಯಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನ. ಹಾಗೂ ಕುಸ್ತಿ, ವಾಲಿಬಾಲ್‌, ಖೋಖೋ ಅಕಾಡೆಮಿ ಸ್ಥಾಪನೆಗೆ 2 ಕೋಟಿ ರೂ ಅನುದಾನ ನೀಡಲಾಗಿದೆ.

ಇದನ್ನೂ ಓದಿ: Karnataka Budget 2025 Highlights: 16ನೇ ಬಾರಿಗೆ ಬಜೆಟ್​ ಮಂಡಿಸಿ ದಾಖಲೆ ನಿರ್ಮಿಸಿದ ಸಿಎಂ ಸಿದ್ದರಾಮಯ್ಯ, ಸ್ವೀಟ್​ 16

ಮಂಗಳೂರಿಗೆ ಸಿಎಂ ಭರ್ಜರಿ ಕೊಡುಗೆ

  • ಅಂತಾರಾಷ್ಟ್ರೀಯ ವಾಟರ್​​ ಮೆಟ್ರೋ ಯೋಜನೆ.
  • ಸದ್ಯ ಕೊಚ್ಚಿಯಲ್ಲಿರುವ ವಾಟರ್​ ಮೆಟ್ರೋ.
  • ಅಂತಾರಾಷ್ಟ್ರೀಯ ಕ್ರೂಸ್ ನಿರ್ಮಾಣ.
  • ಪ್ರವಾಸಿಗರನ್ನ ಆಕರ್ಷಿಸಲು ಐಷಾರಾಮಿ ಕ್ರೂಸ್

ಇನ್ನು ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದಕ್ಕೆ ಸಂಭ್ರಮ ವ್ಯಕ್ತಪಡಿಸಿದ ಶಾಸಕ ಅಶೋಕ್ ರೈ ಕಾರ್ತಕರ್ತರ ಜೊತೆಗೆ ಕುಣಿದು ಕುಪ್ಪಳಿಸಿದ್ರು.

ಇದನ್ನೂ ಓದಿ
ಕೇಂದ್ರದ ವಿರುದ್ಧ ಸಿದ್ದರಾಮಯ್ಯ ನಡೆಸಿದ ಬಜೆಟ್ ಪ್ರಹಾರಗಳಿವು
ಬಜೆಟ್ ಗಾತ್ರ 4.09 ಲಕ್ಷ ಕೋಟಿ ರೂ; ಪೂರ್ಣ ವಿವರ
ಅಬಕಾರಿ ಇಲಾಖೆಗೆ ಬಜೆಟ್​ನಲ್ಲಿ ಸಿದ್ದರಾಮಯ್ಯ ಹೊಸ ಟಾರ್ಗೆಟ್
ಸಿದ್ದರಾಮಯ್ಯ ಬಜೆಟ್​ನಲ್ಲಿ ಯಾವ ಇಲಾಖೆ ಎಷ್ಟೆಷ್ಟು ಸಿಕ್ತು? ಇಲ್ಲಿದೆ ವಿವರ

ಸಿದ್ದರಾಮಯ್ಯ ಬಜೆಟ್​ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು?

  • ಸವದತ್ತಿ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿಗೆ 199ಕೋಟಿ ರೂ.
  • ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆಗೆ ಕ್ರಮ
  • KGTTI ಕೇಂದ್ರಗಳಲ್ಲಿ $10 ಕೋಟಿ ವೆಚ್ಚದಲ್ಲಿ ಇಂಡಸ್ಟ್ರಿ
  • 4.0ಗೆ ಅನುಗುಣವಾಗಿ ಹೊಸ ಪ್ರಯೋಗಾಲಯ ಸ್ಥಾಪನೆ

ಸಿದ್ದರಾಮಯ್ಯ ಬಜೆಟ್​ನಲ್ಲಿ ರಾಯಚೂರಿಗೆ ಕೊಡುಗೆ ಏನು ?

  • ವಿಮಾನ ನಿಲ್ದಾಣ ಕಾಮಗಾರಿಗಳಿಗೆ 53 ಕೋಟಿ ರೂ. ಅನುದಾನ.
  • ರಾಜೀವ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 50 ಕೋಟಿ ರೂ ವೆಚ್ಚದಲ್ಲಿ ಕಿದ್ವಾಯಿ ಪೆರಿಫರೆಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆ

ವಿಜಯಪುರಕ್ಕೆ ಏನು ಕೊಡುಗೆ?

  • ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ.
  •  348 ಕೋಟಿ  ರೂ. ವೆಚ್ಚದಲ್ಲಿ ಏರ್​ಪೋರ್ಟ್​
  • ತಿಡಗುಂಡಿಯಲ್ಲಿ Plug & Play ಸೌಲಭ್ಯದ Flat Factoryಗಳ ಸ್ಥಾಪನೆ.

ಡಿಕೆ ಶಿವಕುಮಾರ್ ತವರು ಜಿಲ್ಲೆಗೆ ಏನು ಕೊಡುಗೆ?

  • ರಾಮನಗರ & ಉಲ್ಲಾಳಕ್ಕೆ ಕುಡಿಯುವ ನೀರಿನ ವ್ಯವಸ್ಥೆಗೆ 705 ಕೋಟಿ ರೂ.
  • ರಾಮನಗರ ಹೈಟೆಕ್‌ ರೇಷ್ಮೆಗೂಡು ಮಾರುಕಟ್ಟೆ ಕಾಮಗಾರಿಗೆ 250 ಕೋಟಿ ರೂ.

ಸಕ್ಕರೆ ನಗರಿಗೇನು ‘ಸಹಿ’?

  • ಮಂಡ್ಯ ಕೃಷಿ ವಿವಿ ಮೂಲಸೌಕರ್ಯ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ಗೃಹ ಸಚಿವ ಪರಮೇಶ್ವರ್​ ಜಿಲ್ಲೆ ತುಮಕೂರಿಗೆ ಸಿಕ್ಕಿದ್ದೇನು?

  • ತುಮಕೂರು ಜಿಲ್ಲೆ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 193 ಕೋಟಿ ರೂ, ವೆಚ್ಚದಲ್ಲಿ ಮಹಿಳಾ ವಸತಿ ನಿಲಯ ನಿರ್ಮಾಣ.