AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಲಿಂಗಾ ರೆಡ್ಡಿ ರಾಜೀನಾಮೆ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಹೆಚ್​ಕೆ ಪಾಟೀಲ್ ಶಾಕಿಂಗ್ ಮಾತು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಪ್ರಬಲ ಎಚ್ಚರಿಕೆ ಗಂಟೆಯಾಗಿದೆ ಎಂದು ಹಿರಿಯ ನಾಯಕ ಹೆಚ್​​ಕೆ ಪಾಟೀಲ್ ವಿಧಾನಸೌಧದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರ ಅಸಮಾಧಾನಗಳ ಬಗ್ಗೆ ಸಂಬಂಧಪಟ್ಟ ನಾಯಕರು ತಕ್ಷಣವೇ ಮಧ್ಯಪ್ರವೇಶಿಸಿ ಭಿನ್ನಮತ ಶಮನಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಮಲಿಂಗಾ ರೆಡ್ಡಿ ರಾಜೀನಾಮೆ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಹೆಚ್​ಕೆ ಪಾಟೀಲ್ ಶಾಕಿಂಗ್ ಮಾತು
ಹೆಚ್​​ಕೆ ಪಾಟೀಲ್Image Credit source: tv9
ಗಣಪತಿ ಶರ್ಮಾ
|

Updated on: Jun 05, 2026 | 2:25 PM

Share

ಬೆಂಗಳೂರು, ಜೂನ್ 5: ಖಾತೆ ಹಂಚಿಕೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷದಲ್ಲಿ ಸ್ಫೋಟಗೊಂಡಿರುವ ಅಸಮಾಧಾನದ ಜ್ವಾಲೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ದಿಢೀರ್ ರಾಜೀನಾಮೆ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಈ ಕುರಿತು ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಹೆಚ್​​ಕೆ ಪಾಟೀಲ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಲಿಂಗಾ ರೆಡ್ಡಿ ರಾಜೀನಾಮೆ ನಡೆ ಸರ್ಕಾರ ಹಾಗೂ ಪಕ್ಷದ ನಾಯಕತ್ವಕ್ಕೆ ಒಂದು ದೊಡ್ಡ ಎಚ್ಚರಿಕೆ ಗಂಟೆ (Wake-up call) ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಾಂಶಗಳು

  • ರಾಮಲಿಂಗಾ ರೆಡ್ಡಿ ರಾಜೀನಾಮೆ ಕೇವಲ ವೈಯಕ್ತಿಕ ನಿರ್ಧಾರವಲ್ಲ: ಹೆಚ್​ಕೆ ಪಾಟೀಲ್.
  • ಇದು ಹೈಕಮಾಂಡ್‌ಗೆ ಒಂದು ಗಂಭೀರ ಎಚ್ಚರಿಕೆ ಗಂಟೆ ಎಂದ ಹಿರಿಯ ನಾಯಕ.
  • ನಿರ್ಧಾರ ಪುನರ್ಪರಿಶೀಲಿಸುವಂತೆ ರಾಮಲಿಂಗಾ ರೆಡ್ಡಿಗೆ ಮನವಿ.

ಸ್ನೇಹಿತನಿಗೆ ಕರೆ ಮಾಡಿ ಮನವೊಲಿಸಲು ಯತ್ನ

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್​ಕೆ ಪಾಟೀಲ್, ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯವನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ತಕ್ಷಣವೇ ನನ್ನ ಆಪ್ತ ಸ್ನೇಹಿತರಾದ ಅವರಿಗೆ ಫೋನ್ ಮಾಡಿ ಮಾತನಾಡಿದ್ದೇನೆ. ಅವರು ತಮ್ಮ ಆಂತರಿಕ ಅಭಿಪ್ರಾಯ ಹಾಗೂ ಬೇಸರವನ್ನು ನನ್ನ ಬಳಿ ಹಂಚಿಕೊಂಡಿದ್ದಾರೆ. ಅವರು ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ನಾನು ವಿನಂತಿಸುತ್ತೇನೆ ಎಂದರು.

ಹೆಚ್​ಕೆ ಪಾಟೀಲ್ ಮಾತಿನ ವಿಡಿಯೋ

ತಕ್ಷಣ ಮಧ್ಯಪ್ರವೇಶಿಸುವಂತೆ ಹೈಕಮಾಂಡ್‌ಗೆ ಒತ್ತಾಯ

ಪಕ್ಷದಲ್ಲಿ ಉದ್ಭವಿಸಿರುವ ಈ ಬಿಕ್ಕಟ್ಟಿನ ಕುರಿತು ಉನ್ನತ ನಾಯಕತ್ವ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ‘ಸಂಬಂಧಪಟ್ಟ ನಾಯಕರು ಇಂತಹ ಸಂದರ್ಭದಲ್ಲಿ ತಕ್ಷಣವೇ ಗಂಭೀರವಾಗಿ ಗಮನಹರಿಸಬೇಕು. ಇದೊಂದು ರೀತಿಯ ದೊಡ್ಡ ಎಚ್ಚರಿಕೆ ಗಂಟೆ. ದಯಮಾಡಿ ಹಿರಿಯ ನಾಯಕರು ಈ ವಿಚಾರವನ್ನು ಲಘುವಾಗಿ ಪರಿಗಣಿಸದೆ, ತಕ್ಷಣವೇ ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದು ಹೈಕಮಾಂಡ್‌ಗೆ ವಿನಂತಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ