ಕರ್ನಾಟಕ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಕೆಆರ್ಎಸ್ನಲ್ಲಿ ಒಳಹರಿವಿಗಿಂತ ಹೊರ ಹರಿವೇ ಹೆಚ್ಚು!
ಕರ್ನಾಟಕ ಡ್ಯಾಂಗಳ ನೀರಿನ ಮಟ್ಟ ಸೆಪ್ಟೆಂಬರ್ 29: ಮುಂಗಾರು ಮಳೆಯ ಕೊರತೆಯ ಕಾರಣ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯೇ ಮುಂದುವರಿದಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಮುಖ್ಯ ಜಲಾಶಯವಾಗಿರುವ ಮಂಡ್ಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಜಲಾಶಯದಲ್ಲಿ ಒಳಹರಿವಿಗಿಂತ ಹೊರಹರಿವೇ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕೆಆರ್‌ಎಸ್ ಡ್ಯಾಂ (ಸಂಗ್ರಹ ಚಿತ್ರ)Image Credit source: PTI
ಬೆಂಗಳೂರು, ಸೆಪ್ಟೆಂಬರ್ 29: ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದಲ್ಲಿ 104.70 ಅಡಿ ನೀರಿದ್ದು, 412 ಕ್ಯೂಸೆಕ್ ಒಳಹರಿವು ಹಾಗೂ 3,747 ಕ್ಯೂಸೆಕ್ ಹೊರಹರಿವು ಇದೆ. ಇದರೊಂದಿಗೆ, ಒಳಹರಿವಿಗಿಂತ ಹೊರಹರಿವೇ ಹೆಚ್ಚಾಗಿ ಆತಂಕಕ್ಕೆ ಕಾರಣವಾಗಿದೆ. ಮಳೆ ಕೊರತೆಯ ಪರಿಣಾಮ ಡ್ಯಾಂ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಇದೆ. ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯ, ಮೈಸೂರಿನ ಕಬಿನಿ ಜಲಾಶಯ, ಜಯಪುರದ ಆಲಮಟ್ಟಿ ಜಲಾಶಯ, ಹಾಸನದ ಹೇಮಾವತಿ ಜಲಾಶಯ ಸೇರಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ.
ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
- ಇಂದಿನ ನೀರಿನ ಮಟ್ಟ: 104.70 ಅಡಿ
- ಒಳಹರಿವು: 412 ಕ್ಯೂಸೆಕ್
- ಹೊರಹರಿವು: 3,747 ಕ್ಯೂಸೆಕ್
- ಸಂಗ್ರಹ: 26.723
ಬಸವಸಾಗರ ಜಲಾಶಯ ನೀರಿನ ಮಟ್ಟ
- ಗರಿಷ್ಠ ನೀರಿನ ಮಟ್ಟ: 492.25 ಮೀಟರ್
- ಇಂದಿನ ನೀರಿನ ಮಟ್ಟ: 490.88 ಮೀಟರ್
- ಒಳಹರಿವು: 8,551 ಕ್ಯೂಸೆಕ್
- ಹೊರಹರಿವು: 811 ಕ್ಯೂಸೆಕ್
ಕಬಿನಿ ಜಲಾಶಯ ನೀರಿನ ಮಟ್ಟ
- ಇಂದಿನ ನೀರಿನ ಮಟ್ಟ: 69.09 ಅಡಿ
- ಗರಿಷ್ಠ ಮಟ್ಟ: 84 ಅಡಿ
- ಜಲಾಶಯದಲ್ಲಿ ನೀರಿನ ಸಂಗ್ರಹ: 11.24 ಟಿಎಂಸಿ
- ಲೈವ್ ಸ್ಟೋರೇಜ್: 1.43 ಟಿಎಂಸಿ
- ಒಳಹರಿವು: 971 ಕ್ಯೂಸೆಕ್
- ಕಬಿನಿ ನದಿಗೆ ಬಿಡುಗಡೆ: 750 ಕ್ಯೂಸೆಕ್
- ಬಲದಂಡೆ ನಾಲೆಗೆ (RBC): 800 ಕ್ಯೂಸೆಕ್
- ಎಡದಂಡೆ ನಾಲೆಗೆ (LBC): ನೀರು ಬಿಡುಗಡೆ ಇಲ್ಲ
- ಒಟ್ಟು ಹೊರಹರಿವು: 1,550 ಕ್ಯೂಸೆಕ್
- ಜಲಾಶಯ ವ್ಯಾಪ್ತಿಯಲ್ಲಿ ಮಳೆ: 1 ಮಿ.ಮೀ.
ಆಲಮಟ್ಟಿ ಡ್ಯಾಂ ನೀರಿನ ಮಟ್ಟ
- ಗರಿಷ್ಠ ನೀರಿನ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 518.59 ಮೀಟರ್
- ಒಳಹರಿವು: ಇಲ್ಲ
- ಹೊರಹರಿವು: 9,965 ಕ್ಯೂಸೆಕ್
ಹೇಮಾವತಿ ಜಲಾಶಯ ನೀರಿನ ಮಟ್ಟ
- ಗರಿಷ್ಠ ಮಟ್ಟ: 2,922 ಅಡಿ (37 TMC)
- ಇಂದಿನ ಮಟ್ಟ: 2,891.88 ಅಡಿ (15.109 TMC)
- ಒಳಹರಿವು: 1,193 ಕ್ಯೂಸೆಕ್
- ನದಿಗೆ ಹೊರಹರಿವು: 300 ಕ್ಯೂಸೆಕ್
- ಕಾಲುವೆಗೆ: ನೀರು ಬಿಡುಗಡೆ ಇಲ್ಲ
- ಕಳೆದ ವರ್ಷದ ಇದೇ ದಿನದ ಹೇಮಾವತಿ ಮಟ್ಟ: 2,918.50 ಅಡಿ (33.779 TMC)
- ಒಳಹರಿವು: 6,372 ಕ್ಯೂಸೆಕ್
- ನದಿಗೆ ಹೊರಹರಿವು: 1,400 ಕ್ಯೂಸೆಕ್
- ಕಾಲುವೆಗೆ ಹೊರಹರಿವು: 4,875 ಕ್ಯೂಸೆಕ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us




