AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಸಂಭ್ರಮದ ಬೆನ್ನಲ್ಲೇ ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ; 441ಕ್ಕೆ ಏರಿದ ಎಕ್ಯೂಐ!

ದೀಪಾವಳಿ ಹಬ್ಬದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದೆ. AQI 441ಕ್ಕೆ ಏರಿಕೆಯಾಗಿದ್ದು, ಬುರಾರಿ ಕ್ರಾಸಿಂಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಜನರಲ್ಲಿ ಉಸಿರಾಟದ ಸಮಸ್ಯೆ ಆತಂಕ ಹೆಚ್ಚಾಗಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ-ಎನ್‌ಸಿಆರ್‌ನಲ್ಲಿ GRAP ಹಂತ 3 ನಿರ್ಬಂಧ ಜಾರಿಗೊಳಿಸಲಾಗಿದೆ. ಮುಂಬೈನಲ್ಲೂ ಗಾಳಿಯ ಗುಣಮಟ್ಟದ ಏರಿಳಿತ ವರದಿಯಾಗಿದೆ.

ದೀಪಾವಳಿ ಸಂಭ್ರಮದ ಬೆನ್ನಲ್ಲೇ ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ; 441ಕ್ಕೆ ಏರಿದ ಎಕ್ಯೂಐ!
ಸಾಂದರ್ಭಿಕ ಚಿತ್ರ
ಭಾವನಾ ಹೆಗಡೆ
|

Updated on: Nov 09, 2026 | 9:48 AM

Share

ಮುಖ್ಯಾಂಶಗಳು

  • ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ, AQI 441ಕ್ಕೆ ಏರಿಕೆ.
  • ಬುರಾರಿ ಕ್ರಾಸಿಂಗ್‌ನಲ್ಲಿ ಗರಿಷ್ಠ 441 AQI ದಾಖಲು, ಹಲವು ಪ್ರದೇಶಗಳಲ್ಲಿ ತೀವ್ರ ಮಾಲಿನ್ಯ.
  • ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ-ಎನ್‌ಸಿಆರ್‌ನಲ್ಲಿ GRAP ಹಂತ 3 ನಿರ್ಬಂಧ ಜಾರಿ.

ನವದೆಹಲಿ, ನವೆಂಬರ್ 09: ದೀಪಾವಳಿ ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಪಟಾಕಿಗಳ ಅಬ್ಬರದ ಪರಿಣಾಮ ದೆಹಲಿಯ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಇಂದು ಬೆಳಗಿನ ಜಾವವೇ ವಾಯು ಗುಣಮಟ್ಟ ಸೂಚ್ಯಂಕ 400ರ ಗಡಿ ದಾಟಿದ್ದು, ಹಲವು ಪ್ರದೇಶಗಳು ತೀವ್ರ ಮಾಲಿನ್ಯದ ವರ್ಗಕ್ಕೆ ಸೇರಿವೆ. ದಟ್ಟ ಹೊಗೆ ಮತ್ತು ಮಂಜಿನಂತಹ ವಾತಾವರಣದಿಂದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಜನರು ಉಸಿರಾಟದ ಸಮಸ್ಯೆ ಎದುರಿಸುವ ಆತಂಕ ಹೆಚ್ಚಾಗಿದೆ.

ದೆಹಲಿಯಲ್ಲಿ AQI 441ಕ್ಕೆ ಏರಿಕೆ: ಯಾವ ಪ್ರದೇಶದಲ್ಲಿ ಎಷ್ಟಿದೆ?

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ದೆಹಲಿಯ ಬುರಾರಿ ಕ್ರಾಸಿಂಗ್‌ನಲ್ಲಿ ಗರಿಷ್ಠ 441 AQI ದಾಖಲಾಗಿದೆ. ವಿವೇಕ್ ವಿಹಾರ್‌ನಲ್ಲಿ 437, ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 434, ಉತ್ತರ ದೆಹಲಿ ವಿಶ್ವವಿದ್ಯಾಲಯ ಕ್ಯಾಂಪಸ್ ಮತ್ತು ಜಹಾಂಗೀರ್‌ಪುರಿಯಲ್ಲಿ ತಲಾ 433 ಸೂಚ್ಯಂಕ ದಾಖಲಾಗಿದೆ. ರೋಹಿಣಿಯಲ್ಲಿ 430, ಘಾಜಿಪುರದಲ್ಲಿ 418 ಮತ್ತು ಮುಂಡ್ಕಾದಲ್ಲಿ 417 AQI ದಾಖಲಾಗಿದೆ.

ಇನ್ನು ದೆಹಲಿಯ ಐಟಿಒ ಪ್ರದೇಶದಲ್ಲಿ ಬೆಳಗಿನ ಜಾವ 4.20ರ ಸುಮಾರಿಗೆ 406 AQI ದಾಖಲಾಗಿದ್ದು, ತೀವ್ರ ಮಾಲಿನ್ಯದ ವರ್ಗಕ್ಕೆ ಸೇರಿದೆ. ರಾಜೀವ್ ಚೌಕ್‌ನಲ್ಲಿ 381 ಮತ್ತು ಸೌತ್ ಎಕ್ಸ್‌ಟೆನ್ಷನ್‌ನಲ್ಲಿ 360 ಸೂಚ್ಯಂಕ ದಾಖಲಾಗಿದೆ.

ದೆಹಲಿ ಮಾತ್ರವಲ್ಲ, ಮುಂಬೈನಲ್ಲೂ ಹೊಗೆ ಆವರಣ

ಮುಂಬೈನಲ್ಲೂ ಸೋಮವಾರ ಬೆಳಗ್ಗೆ ಮಂಜು ಮತ್ತು ಹೊಗೆಯ ವಾತಾವರಣ ಕಂಡುಬಂದಿದೆ. ನಗರದ ಸರಾಸರಿ AQI 170 ದಾಖಲಾಗಿದ್ದು, ಮಧ್ಯಮ ಮಾಲಿನ್ಯದ ವರ್ಗದಲ್ಲಿದೆ. ಖೇರ್ವಾಡಿ-ಬಾಂದ್ರಾ ಪೂರ್ವದಲ್ಲಿ 264, ಸೆವ್ರಿಯಲ್ಲಿ 226 ಮತ್ತು ಘಾಟ್ಕೋಪರ್‌ನಲ್ಲಿ 221 AQI ದಾಖಲಾಗಿದೆ. ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಮುಂಬೈನ ವಾಯು ಗುಣಮಟ್ಟ ಶೇಕಡಾ 30ರಷ್ಟು ಉತ್ತಮವಾಗಿದೆ ಎಂದು ವರದಿಯಾಗಿದೆ.

GRAP ಹಂತ 3 ನಿರ್ಬಂಧ ಜಾರಿ

ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ಈಗಾಗಲೇ GRAP ಹಂತ 3 ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ವಾಹನಗಳ ಹೊಗೆ, ಪಟಾಕಿ ಸಿಡಿಸುವಿಕೆ, ನೆರೆಯ ರಾಜ್ಯಗಳ ಕೃಷಿ ತ್ಯಾಜ್ಯ ಸುಡುವಿಕೆ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿವೆ. AQI 401ರಿಂದ 500ರವರೆಗೆ ಇದ್ದರೆ ಅದನ್ನು ತೀವ್ರ ಮಾಲಿನ್ಯ ಎಂದು ಪರಿಗಣಿಸಲಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಸಿಎಂ ಗಮನಕ್ಕೆ ತಂದ ಹಾಸನ ಡಿಸಿ
ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಸಿಎಂ ಗಮನಕ್ಕೆ ತಂದ ಹಾಸನ ಡಿಸಿ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್​ಗೆ ಡಿಕೆಶಿ ಕೌಂಟರ್
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​