AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಹಾಟ್​ ಫೇವರಿಟ್ ಜೇಮ್ಸ್, ಜೆಲ್ಲಿಸ್​ಗಳಲ್ಲಿ ಹಾನಿಕಾರಕ ರಾಸಾಯನಿಗಳ ಬಳಕೆ: ಟೆಸ್ಟ್​​ಗೆ ಮುಂದಾದ ಆಹಾರ ಇಲಾಖೆ

ಮಕ್ಕಳು ಇಷ್ಟಪಡುವ ಸಿಹಿ ಪದಾರ್ಥಗಳಾದ ಚಾಕೊಲೇಟ್, ಪೆಪ್ಪರ್ಮೆಂಟ್, ಜೆಲ್ಲಿಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಬಣ್ಣಗಳ ಬಳಕೆ ಮಾಡುವುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಅಲರ್ಟ್ ಆಗಿರುವ ಆಹಾರ ಇಲಾಖೆ ಸ್ಯಾಂಪಲ್ಸ್ ಪಡೆದು ಟೆಸ್ಟ್​​ಗೆ ಒಳಪಡಿಸಲು ಮುಂದಾಗಿದೆ. ಇವುಗಳ ಸೇವೆ ಮಕ್ಕಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಮಕ್ಕಳ ಹಾಟ್​ ಫೇವರಿಟ್ ಜೇಮ್ಸ್, ಜೆಲ್ಲಿಸ್​ಗಳಲ್ಲಿ ಹಾನಿಕಾರಕ ರಾಸಾಯನಿಗಳ ಬಳಕೆ: ಟೆಸ್ಟ್​​ಗೆ ಮುಂದಾದ ಆಹಾರ ಇಲಾಖೆ
ಪ್ರಾತಿನಿಧಿಕ ಚಿತ್ರ
Vinay Kashappanavar
| Edited By: |

Updated on: May 06, 2025 | 12:42 PM

Share

ಬೆಂಗಳೂರು, ಮೇ 06: ಚಾಕೊಲೇಟ್ (Chocolate), ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ ಮಕ್ಕಳಿಗೆ ಬಲು ಇಷ್ಟ. ಒಂದು ಪಕ್ಷ ಮಕ್ಕಳು ಊಟ ಬೇಕಾದರೂ ಬಿಡುತ್ತಾರೆ, ಇವುಗಳನ್ನು ತಿನ್ನುವುದು ಮಾತ್ರ ಬಿಡುವುದಿಲ್ಲ. ಆದರೆ ಇವುಗಳನ್ನು ಮಕ್ಕಳಿಗೆ ನೀಡುವುದಕ್ಕೂ ಮುಂಚೆ ಆಹಾರ ಇಲಾಖೆ (food Department) ಪೋಷಕರಿಗೆ ಎಚ್ಚರಿಕೆ ನೀಡಿದೆ. ಚಾಕೊಲೇಟ್, ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದ್ದು, ಟೆಸ್ಟ್ ಮಾಡಲು ಮುಂದಾಗಿದೆ.

ಮಕ್ಕಳ ಅಚ್ಚುಮೆಚ್ಚಿನ ಚಾಕೊಲೇಟ್, ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಎಫ್​​ಎಸ್​ಎಸ್​​ಎಐ ಸೂಚನೆ ಬೆನ್ನಲೆ ರಾಜ್ಯದಲ್ಲಿ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಸ್ಯಾಂಪಲ್ಸ್ ಪಡೆದು ಆಹಾರ ಇಲಾಖೆಯ ಲ್ಯಾಬ್​ಗಳಲ್ಲಿ ಟೆಸ್ಟ್​​ಗೆ ಒಳಪಡಿಸಲು ಮುಂದಾಗಿದೆ.

ಇದನ್ನೂ ಓದಿ: ಜಿಲೇಬಿಯಲ್ಲಿ ಕೃತಕ ಬಣ್ಣ, ಶರಬತ್​ನಲ್ಲಿ ಕಲುಷಿತ ನೀರು ಶಂಕೆ: ಮಾದರಿ ಸಂಗ್ರಹಕ್ಕೆ ಮುಂದಾದ ಆಹಾರ ಇಲಾಖೆ

ಇದನ್ನೂ ಓದಿ
Image
ಬೆಲ್ಲವೂ ಅಪಾಯಕಾರಿ: ಸಲ್ಫರ್ ಡೈಆಕ್ಸೈಡ್, ಕೃತಕ ಬಣ್ಣ ಪತ್ತೆ
Image
ಟ್ಯಾಟೂನಿಂದ ಬರುತ್ತೆ ಹೆಚ್​ಐವಿ, ಕ್ಯಾನ್ಸರ್​: ಆರೋಗ್ಯ ಇಲಾಖೆ ಅಲರ್ಟ್
Image
ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ: ಆರೋಗ್ಯ ಇಲಾಖೆ
Image
ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ: ಇಡ್ಲಿ ತಿಂದರೂ ಬರಬಹುದು ಕ್ಯಾನ್ಸರ್‌!

ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ಗಳಲ್ಲಿ ಕೃತಕ ಕಲರ್ ಬಳಕೆ ಮಾಡುತ್ತಿದ್ದು, ತಯಾರಿಕಾ ಘಟಕಗಳಲ್ಲಿ ಸ್ವಚ್ಛತೆ ಇರಲ್ಲ ಎನ್ನಲಾಗುತ್ತಿದೆ. ಚಾಕೊಲೇಟ್​ಗಳ ತಯಾರಿಕೆಯಲ್ಲಿ ಕೆಲವು ರಾಸಾಯನಿಕಗಳ ಬಳಕೆ ಬಗ್ಗೆ ಕೂಡ ದೂರುಗಳು ಬಂದಿವೆ. ಹೀಗಾಗಿ ಆಹಾರ ಇಲಾಖೆ ರಾಜ್ಯದಲ್ಲಿ ಸ್ಯಾಂಪಲ್ಸ್​ ಪಡೆಯಲು ಮುಂದಾಗಿದೆ.​ ಅಷ್ಟೇ ಅಲ್ಲದೆ ವಿದೇಶದಿಂದ ಆಮದು ಆಗುವ ಪದಾರ್ಥಗಳನ್ನು ಟೆಸ್ಟ್ ಮಾಡಲು ಮುಂದಾಗಿದ್ದು, ಅಸುರಕ್ಷಿತ ಪದಾರ್ಥಗಳ ಮೇಲೂ ಕ್ರಮಕ್ಕೆ ಆಹಾರ ಇಲಾಖೆ ಪ್ಲಾನ್ ಮಾಡಿದೆ.

ಕಿಡ್ನಿ, ಹೃದಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ: ಆಹಾರ ತಜ್ಞೆ ಕೀರ್ತಿ ಹಿರಿಸಾವೆ

ಇನ್ನು ಈ ಬಗ್ಗೆ ಆಹಾರ ತಜ್ಞೆ ಕೀರ್ತಿ ಹಿರಿಸಾವೆ ಪ್ರತಿಕ್ರಿಯಿಸಿದ್ದು, ಇವುಗಳ ಸೇವನೆಯಿಂದ ಮಕ್ಕಳ ದೇಹದ ತೂಕ ಏರಿಕೆಯಾಗುತ್ತದೆ. ತೂಕ ಏರಿಕೆಯಿಂದ ಟಾಕ್ಸಿನ್ ಪ್ರಮಾಣ ಹೆಚ್ಚಾಗುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಕಲರ್​ಗಳಿಂದಲೂ ಅಪಾಯ ಇದೆ. ಕಿಡ್ನಿ, ಹೃದಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಲ್ಲವೂ ಅಪಾಯಕಾರಿ: ಸಲ್ಫರ್ ಡೈಆಕ್ಸೈಡ್, ಕೃತಕ ಬಣ್ಣ ಪತ್ತೆ

ಚಾಕೊಲೇಟ್, ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​ಗಳಲ್ಲಿ ಫುಡ್​ ಪ್ಲೇವರ್​ಗಳನ್ನ ಬಳಕೆ ಮಾಡಿರುತ್ತಾರೆ. ಇದರಿಂದ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಆಸೆಯಾಗುತ್ತದೆ. ಇನ್ನು ಇವುಗಳ ತಯಾರಿಕೆಯಲ್ಲಿಯೂ ಸ್ವಚ್ಛತೆ ಇರುವುದಿಲ್ಲ. ಹೀಗಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿದೇಶದಿಂದ ಬರುವ ಚಾಕೋಲೆಟ್, ಜೆಲ್ಲಿಸ್​ಗಳ ಬಗ್ಗೆ ಎಚ್ಚರ ವಹಿಸಬೇಕು. ಏಕೆಂದರೆ ಅಲ್ಲಿ ತಯಾರಿಕಾ ಘಟಕಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​