ಕೊನೆಗೂ MLC ನಾಮನಿರ್ದೇಶನಕ್ಕೆ ಗ್ರೀನ್ ಸಿಗ್ನಲ್ ನೀಡಿದ ರಾಜ್ಯಪಾಲರು, ನಾಲ್ವರು ನೂತನ ಪರಿಷತ್ ಸದಸ್ಯರು ಯಾರು?
ಕರ್ನಾಟಕ ವಿಧಾನಪರಿಷತ್ ಗೆ ನಾಲ್ವರನ್ನು ನಾಮನಿರ್ದೇಶನ ಮಾಡಲು ಕೊನೆಗೂ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಖಾಲಿ ಇದ್ದ ನಾಲ್ಕು ಪರಿಷತ್ ಸ್ಥಾನಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಲ್ವರ ಹೆಸರನ್ನು ಫೈನಲ್ ಮಾಡಿ ಕಳಹಿಸಿತ್ತು. ಇದೀಗ ಇದಕ್ಕೆ ರಾಜ್ಯಪಾಲರಿಂದ ಅಧಿಕೃತ ಮುದ್ರೆ ಬಿದ್ದಿದೆ. ಅಂತಿಮವಾಗಿ ವಿಧಾನಪರಿಷತ್ ಗೆ ನಾಮನಿರ್ದೇಶನ ನಾಲ್ವರು ಯಾರ್ಯಾರು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 07): ಕರ್ನಾಟಕ ವಿಧಾನ ಪರಿಷತ್ತಿಗೆ ನಾಲ್ಕು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಸಂಬಂಧ ಸರ್ಕಾರ ಕಳುಹಿಸಿದ ಪಟ್ಟಿಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಡಾ.ಆರತಿ ಕೃಷ್ಣ, ಎಫ್ ಹೆಚ್ ಜಕ್ಕಪ್ಪನವರ್, ಶಿವಕುಮಾರ್ ಕೆ ಅವರ ಹೆಸರುಗಳು ಇದ್ದ ಪಟ್ಟಿಗೆ ರಾಜ್ಯಪಾಲರು ಮುದ್ರೆ ಒತ್ತಿದ್ದಾರೆ. ಈ ಮೂಲಕ ಪರಿಷತ್ ಗೆ ಯಾರು ಯಾರು ಎನ್ನುವ ಗೊಂದಲಗಳೀಗೆ ತೆರೆ ಬಿದ್ದಿದೆ. ಮೂವರು 6 ವರ್ಷಗಳ ಅವಧಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇನ್ನು ರಮೇಶ್ ಬಾಬು 2026ರ ಜುಲೈ 21ರವರೆಗೆ ಅಧಿಕಾರವಧಿ ಇರಲಿದೆ.
ಜಕ್ಕಪ್ಪ, ಆರತಿ ಕೃಷ್ಣ, ರಮೇಶ್ ಬಾಬು ಹಾಗೂ ಪತ್ರಕರ್ತ ಶಿವಕುಮಾರ್ ರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡುವುದಕ್ಕೆ ಕಾಂಗ್ರೆಸ್ ಹೈಕಮ್ಯಾಂಡ್ ಒಪ್ಪಿಗೆ ನೀಡಿತ್ತು. ಈ ಪಟ್ಟಿಯನ್ನು ರಾಜ್ಯ ಸರ್ಕಾರ, ರಾಜ್ಯಪಾಲರಿಗೆ ಕಳುಹಿಸುತ್ತಿ. ಇದೀಗ ಈ ಪಟ್ಟಿಗೆ ರಾಜ್ಯಪಾಲರ ಮುದ್ರೆ ಬಿದ್ದಿದೆ. ಇದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಆರತಿ ಕೃಷ್ಣ, ಕೆಪಿಸಿಸಿ ಮಾಧ್ಯಮ ವಕ್ತಾರ ರಮೇಶ್ ಬಾಬು, ಮೈಸೂರಿನ ಪತ್ರಕರ್ತ ಶಿವಕುಮಾರ್ ಹಾಗೂ ಜಕ್ಕಪ್ಪ ವಿಧಾನ ಪರಿಷತ್ ಗೆ ನಾಮ ನಿರ್ದೇಶನಗೊಂಡಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ ನಾಮನಿರ್ದೇಶನ: ದಿನೇಶ್ ಅಮಿನ್ ಮಟ್ಟು ಆಯ್ಕೆಗೆ ಬಿಜೆಪಿ ವಿರೋಧ
ಜಕ್ಕಪ್ಪ ಮತ್ತು ಆರತಿ ಕೃಷ್ಣ ಕಾಂಗ್ರೆಸ್ ಪಕ್ಷದ ಹೈಕಮ್ಯಾಂಡ್ ಕೋಟಾದ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದರೇ, ಇನ್ನೂ ಸಿಎಂ ಕೋಟಾದಿಂದ ರಮೇಶ್ ಬಾಬು ಮತ್ತು ಪತ್ರಕರ್ತ ಶಿವಕುಮಾರ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
ಮೊದಲ ಪಟ್ಟಿಯಲ್ಲಿ ರಮೇಶ್ ಬಾಬು, ಡಿ.ಜಿ. ಸಾಗರ್, ದಿನೇಶ್ ಅಮೀನ್ ಮಟ್ಟು, ಆರತಿ ಕೃಷ್ಣ ಅವರ ಹೆಸರುಗಳು ಇದ್ದವು. ಸಿಎಂ ಸಿದ್ದರಾಮಯ್ಯನವರ ಪಟ್ಟಿಗೆ ಹೈಕಮಾಂಡ್ ಸಹ ಈ ಮೊದಲು ಹೈಕಮಾಂಡ್ ಅನುಮೋದಿಸಿತ್ತು. ಈ ಪೈಕಿ ಸಾಗರ್ ಮತ್ತು ಅಮೀನ್ ಮಟ್ಟು ನೇಮಕ ಪ್ರಸ್ತಾಪಕ್ಕೆ ಸ್ಥಳೀಯವಾಗಿ ಆಕ್ಷೇಪ ವ್ಯಕ್ತವಾಗಿದ್ದವು. ಅಲ್ಲದೇ ಅಮೀನ್ ಮಟ್ಟು ವಿರುದ್ಧ ರಾಜ್ಯಪಾಲರಿಗೆ ದೂರೂ ನೀಡಲಾಗಿತ್ತು. ಬಳಿಕ ಸರ್ವಸಮ್ಮತ ಹೆಸರು ನೀಡುವಂತೆ ಸಿಎಂ, ಡಿಸಿಎಂ ಅವರಿಗೆ ಹೈಕಮಾಂಡ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಪಟ್ಟಿಯಿಂದ ಅಮೀನ್ ಮಟ್ಟು ಹಾಗೂ ಡಿ.ಜಿ. ಸಾಗರ್ ಹೆಸರುಗಳನ್ನು ಕೈಬಿಟ್ಟು ಪತ್ರಕರ್ತ ಶಿವಕುಮಾರ್ ಮತ್ತು ಜಕ್ಕಪ್ಪನವರ್ ಹಸರು ಸೇರ್ಪಡೆ ಮಾಡಲಾಗಿತ್ತು. ಬಳಿಕ ಇದಕ್ಕೆ ಹೈಕಮಾಂಡ ಓಕೆ ಎಂದಿತ್ತು. ತದನಂತರ ಇದೇ ಪಟ್ಟಿಯನ್ನು ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Sun, 7 September 25




