Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವೇ ಜಾತಿಗೆ ಮಾತ್ರ ನಿಗಮ ಏಕೆ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಬಜೆಟ್‌ನಲ್ಲಿ ನಿಗಮ ಸ್ಥಾಪನೆ ಘೋಷಣೆಯಾಗಿದೆ. ಎಲ್ಲಾ ಜಾತಿಗಳಿಗೂ ಹಂತ ಹಂತವಾಗಿ ನಿಗಮ ರಚನೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಿ ಕಾನೂನಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಉತ್ತರ ನೀಡಲಾಗಿದೆ. ವಿಚಾರಣೆ ನಾಳೆಗೆ ಮುಂದೂಡಿ ಹೈಕೋರ್ಟ್ ಆದೇಶಿಸಿದೆ.

ಕೆಲವೇ ಜಾತಿಗೆ ಮಾತ್ರ ನಿಗಮ ಏಕೆ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: ganapathi bhat

Updated on:Jun 30, 2021 | 10:46 PM

ಬೆಂಗಳೂರು: ಜಾತಿ ಆಧಾರದಲ್ಲಿ ನಿಗಮಗಳ ಸ್ಥಾಪನೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲಾಗಿದೆ. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಸಲಾಗಿದೆ. ಹಲವು ಹಿಂದುಳಿದ ವರ್ಗಗಳನ್ನು ಅಧಿಸೂಚಿತಗೊಳಿಸಲಾಗಿದೆ. ಹೀಗಿದ್ದಾಗ ಕೆಲವೇ ಜಾತಿಗೆ ಮಾತ್ರ ನಿಗಮ ಏಕೆ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ.

ಸರ್ಕಾರ ಈ ಜಾತಿಗಳನ್ನೇ ಆಯ್ಕೆ ಮಾಡಲು ಮಾನದಂಡವೇನು? ಆಯ್ಕೆಗೆ ಮುನ್ನ ಯಾವುದಾದ್ರೂ ಪ್ರಕ್ರಿಯೆ ಅನುಸರಿಸಲಾಗಿತ್ತೇ? ಕೆಲ ಹಿಂದುಳಿದ ಜಾತಿಗಳ ನಿಗಮಕ್ಕೆ ಕಡಿಮೆ ಹಣ ನಿಗದಿಪಡಿಸಲಾಗಿದೆ. ವೀರಶೈವ ನಿಗಮಕ್ಕೆ 500 ಕೋಟಿ ಹಂಚಿಕೆಗೆ ಮಾನದಂಡವೇನು? ಎಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ.

ಬಜೆಟ್‌ನಲ್ಲಿ ನಿಗಮ ಸ್ಥಾಪನೆ ಘೋಷಣೆಯಾಗಿದೆ. ಎಲ್ಲಾ ಜಾತಿಗಳಿಗೂ ಹಂತ ಹಂತವಾಗಿ ನಿಗಮ ರಚನೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಿ ಕಾನೂನಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಉತ್ತರ ನೀಡಲಾಗಿದೆ. ವಿಚಾರಣೆ ನಾಳೆಗೆ ಮುಂದೂಡಿ ಹೈಕೋರ್ಟ್ ಆದೇಶಿಸಿದೆ.

ಇದಕ್ಕೂ ಮೊದಲು, ಕೆಲವು ಸಮುದಾಯಗಳು ತಮ್ಮ ಸಮುದಾಯಗಳ ನಿಗಮಗಳಿಗೆ ಮೀಸಲಾತಿ, ನಿಗಮ, ಪ್ರಾಧಿಕಾರ, ಹಣ ಹಂಚಿಕೆ ಇತ್ಯಾದಿಗೆ ಬೇಡಿಕೆ ಇಟ್ಟಿದ್ದವು. ಒಕ್ಕಲಿಗರಿಗೆ ಮೀಸಲಾತಿ ಮತ್ತು ಪ್ರಾಧಿಕಾರ ರಚನೆ ಸಂಬಂಧ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ‌ ಸಭೆ ನಡೆಸಿದ್ದವು. ಈ ವೇಳೆ, ಡಿಸಿಎಂ ಅಶ್ವತ್ಥ್​ ನಾರಾಯಣ್​ಗೆ ನಿರ್ಮಲಾನಂದನಾಥಶ್ರೀಗಳು ಮನವಿ ಸಲ್ಲಿಸಿದರು. ಒಕ್ಕಲಿಗ ಸಮುದಾಯ ನೀಡಿದ್ದ ಮನವಿಯನ್ನು ಶ್ರೀಗಳು ಸಲ್ಲಿಸಿದ್ದರು.

ಸಭೆ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ಸಮುದಾಯದವರು ಪ್ರಮುಖವಾಗಿ 4 ಬೇಡಿಕೆಗಳನ್ನ ಮುಂದಿಟ್ಟಿದ್ದರು. ಅವುಗಳು ಯಾವುದೆಂದರೆ ಒಕ್ಕಲಿಗ ನಿಗಮ ಆಗಬೇಕು, ಇದಕ್ಕೆ 1 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು. ಸದ್ಯ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ 3Aಗೆ ಶೇ.4ರಷ್ಟಿದೆ. ಅದರಲ್ಲಿ ಬೇರೆ ಜಾತಿಯವರನ್ನ ಸೇರಿಸಲಾಗಿದೆ. ಹಾಗಾಗಿ, ಸಮುದಾಯಕ್ಕೆ ಮೀಸಲಾತಿ ಪರ್ಸೆಂಟೇಜ್​ ಹೆಚ್ಚಿಸಬೇಕು ಎಂದು ಅಶೋಕ್​ ಹೇಳಿದ್ದರು.

ಇದನ್ನೂ ಓದಿ: ಆನ್​ಲೈನ್ ಜೂಜು, ಬೆಟ್ಟಿಂಗ್ ನಿಷೇಧದ ಬಗ್ಗೆ ನಿಲುವು ತಿಳಿಸದ ಸರ್ಕಾರ: ಹೈಕೋರ್ಟ್ ಅಸಮಾಧಾನ

ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Published On - 9:23 pm, Wed, 30 June 21