Covaxin Vaccine: ಮಾಲೂರಿನಲ್ಲಿ ಕೊವ್ಯಾಕ್ಸಿನ್ ತಯಾರಿ ಆರಂಭ: ತಿಂಗಳಿಗೆ 1 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಉತ್ಪಾದನೆಗೆ ಯೋಜನೆ

ಲಸಿಕೆ ಉತ್ಪಾದನೆ ಹೆಚ್ಚಿಸುವ ಪ್ರಕ್ರಿಯೆಗೆ ಹೊಸ ವೇಗ ನೀಡಲು ಭಾರತ್ ಬಯೊಟೆಕ್ ಸಂಸ್ಥೆ ನಿರ್ಧರಿಸಿದೆ. ಈಗ ಮಾಲೂರು ಘಟಕದಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಕಂಪನಿ ಹೊಸ ಡೆಡ್​ಲೈನ್ ಕೊಟ್ಟುಕೊಂಡಿದೆ.

Covaxin Vaccine: ಮಾಲೂರಿನಲ್ಲಿ ಕೊವ್ಯಾಕ್ಸಿನ್ ತಯಾರಿ ಆರಂಭ: ತಿಂಗಳಿಗೆ 1 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಉತ್ಪಾದನೆಗೆ ಯೋಜನೆ
ಪ್ರಾತಿನಿಧಿಕ ಚಿತ್ರ
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 30, 2021 | 10:48 PM

ಬೆಂಗಳೂರು: ಭಾರತದಲ್ಲಿ ಈಗ ಕೊರೊನಾ ಲಸಿಕೆಯ ತೀವ್ರ ಕೊರತೆ ಇದೆ. ಸ್ವದೇಶಿ ಲಸಿಕಾ ಕಂಪನಿಯಾದ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಎಷ್ಟೇ ಪ್ರಯತ್ನಪಟ್ಟರೂ ಉದ್ದೇಶ ಈಡೇರುತ್ತಿಲ್ಲ. ಕೋಲಾರ ಜಿಲ್ಲೆಯಲ್ಲಿ ಮಾಲೂರಿನ ತನ್ನ ಘಟಕದಲ್ಲಿ ಜೂನ್ ತಿಂಗಳಲ್ಲೇ ಲಸಿಕೆ ಉತ್ಪಾದನೆ ಆರಂಭಿಸುವ ಪ್ರಯತ್ನವೂ ಇನ್ನೂ ಸಾಕಾರಗೊಂಡಿಲ್ಲ. ಆದರೆ ಇದೀಗ ಲಸಿಕೆ ಉತ್ಪಾದನೆ ಹೆಚ್ಚಿಸುವ ಪ್ರಕ್ರಿಯೆಗೆ ಹೊಸ ವೇಗ ನೀಡಲು ಸಂಸ್ಥೆ ನಿರ್ಧರಿಸಿದೆ. ಈಗ ಮಾಲೂರು ಘಟಕದಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಕಂಪನಿ ಹೊಸ ಡೆಡ್​ಲೈನ್ ಕೊಟ್ಟುಕೊಂಡಿದೆ.

ಭಾರತ್ ಬಯೋಟೆಕ್ ಕಂಪನಿಯು ಸದ್ಯ ತಿಂಗಳಿಗೆ 2.5 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಉತ್ಪಾದಿಸುತ್ತಿದೆ. ಆದರೆ, ಕೇಂದ್ರ ಸರ್ಕಾರವು ಭಾರತ್ ಬಯೋಟೆಕ್ ಕಂಪನಿಯು ಪ್ರತಿ ತಿಂಗಳು 10 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಬೇಕು ಎಂಬ ನಿರೀಕ್ಷಿಸಿದೆ. ಇದಕ್ಕಾಗಿ ಭಾರತ್ ಬಯೋಟೆಕ್ ಕಂಪನಿಯು ತನ್ನ ಕರ್ನಾಟಕದ ಕೋಲಾರದ ಮಾಲೂರು ಘಟಕದಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆಗೆ ಈ ಹಿಂದೆಯೇ ನಿರ್ಧರಿಸಿತ್ತು. ಜೂನ್ ತಿಂಗಳ ವೇಳೆಗೆ ಮಾಲೂರು ಘಟಕದಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಆರಂಭಿಸುವುದಾಗಿ ಹೇಳಿತ್ತು. ಆದರೆ, ಜೂನ್ ತಿಂಗಳಲ್ಲಿ ಲಸಿಕೆ ಉತ್ಪಾದನೆ ಆರಂಭವಾಗಿಲ್ಲ.

ಭಾರತ್ ಬಯೋಟೆಕ್ ಕಂಪನಿಯ ಹೊಸ ಡೆಡ್​ಲೈನ್ ಪ್ರಕಾರ, ಜುಲೈ ಅಂತ್ಯ ಇಲ್ಲವೇ ಆಗಸ್ಟ್ ತಿಂಗಳ ಆರಂಭದಲ್ಲಿ ಮಾಲೂರು ಘಟಕದಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಆರಂಭವಾಗಬೇಕಿದೆ. ನಿರೀಕ್ಷೆಯಂತೆ ಜುಲೈ ಅಂತ್ಯ ಇಲ್ಲವೇ ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಮಾಲೂರು ಘಟಕದಲ್ಲೇ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಆರಂಭವಾಗುತ್ತೆ ಎಂಬ ವಿಶ್ವಾಸವನ್ನು ಭಾರತ್ ಬಯೋಟೆಕ್ ಕಂಪನಿಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಕೋಲಾರದ ಮಾಲೂರು ಘಟಕದಲ್ಲಿ ಪ್ರತಿ ತಿಂಗಳು 1 ರಿಂದ 1.2 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸುವ ಸಾಮರ್ಥ್ಯ ಇದೆ. ಈ ಮೊದಲು ಮಾಲೂರು ಘಟಕದಲ್ಲಿ ಪ್ರಾಣಿಗಳ ಲಸಿಕೆಯನ್ನು ಉತ್ಪಾದಿಸಲಾಗುತ್ತಿತ್ತು. ಆದರೆ ಈಗ ಕೊರೊನಾದಿಂದ ಭಾರತ ಮಾತ್ರವಲ್ಲದೇ, ವಿಶ್ವದಲ್ಲೇ ಕೊರೊನಾ ಲಸಿಕೆಗೆ ಬಾರಿ ಬೇಡಿಕೆ ಬಂದಿದೆ. ಕೊರೊನಾದಿಂದ ವಿಶ್ವ ಪಾರಾಗಲು ಕೊರೊನಾ ಲಸಿಕೆಯೇ ರಾಮಬಾಣ. ಹೀಗಾಗಿ ತನ್ನ ಮಾಲೂರು ಘಟಕದಲ್ಲಿ ಪ್ರಾಣಿಗಳ ಲಸಿಕೆ ತಯಾರಿಯನ್ನು ನಿಲ್ಲಿಸಿ, ಕೊರೊನಾ ಲಸಿಕೆಯನ್ನ ಉತ್ಪಾದಿಸಲು ಭಾರತ್ ಬಯೋಟೆಕ್ ನಿರ್ಧರಿಸಿದೆ. ಈಗಾಗಲೇ ಕರ್ನಾಟಕ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ತೆಗೆದುಕೊಳ್ಳಬೇಕಿದ್ದ ಅನುಮತಿಗಳನ್ನು ಪಡೆದುಕೊಂಡಿದೆ. ಮಾಲೂರು ಘಟಕದಲ್ಲೇ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆ ಆರಂಭವಾದರೆ, ಕರ್ನಾಟಕಕ್ಕೂ ಇಲ್ಲಿಂದಲೇ ಕೊರೊನಾ ಲಸಿಕೆಯನ್ನು ಪೂರೈಕೆಯಾಗಲಿದೆ.

ಮಾಲೂರು ಘಟಕದಲ್ಲಿ ಬಯೋ ಸೇಫ್ಟಿ ಲೆವೆಲ್-3ರ ಸುರಕ್ಷತಾ ಕ್ರಮಗಳನ್ನು ಆಳವಡಿಸಿಕೊಳ್ಳಲಾಗಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಬಯೋ ಸೇಫ್ಟಿ ಲೆವೆಲ್-3ರಲ್ಲೇ ಉತ್ಪಾದಿಸಬೇಕು. ಕೊವ್ಯಾಕ್ಸಿನ್ ಲಸಿಕೆಯು ಜೀವಂತ ಕೊರೊನಾ ವೈರಸ್ ಅನ್ನು ನಿಷ್ಕ್ರಿಯಗೊಳಿಸಿ, ಲಸಿಕೆಯನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಹೊಂದಿದೆ. ಹೀಗಾಗಿ ಲಸಿಕೆಯ ಉತ್ಪಾದನೆ ವೇಳೆ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.

ಗುಜರಾತ್ ರಾಜ್ಯದ ಅಂಕಲೇಶ್ವರ್ ಘಟಕದಲ್ಲಿಯೂ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು ಭಾರತ್ ಬಯೋಟೆಕ್ ಪ್ಲ್ಯಾನ್ ಮಾಡಿದೆ. ಆದರೆ, ಗುಜರಾತ್ ಸರ್ಕಾರದಿಂದ ಅಗತ್ಯ ಅನುಮೋದನೆಗಳು ಇನ್ನೂ ಸಿಕ್ಕಿಲ್ಲ.

(Bharath Biotech to Manufacture Covaxin in Malur Biotech plan Monthly 1 crore dose production planned)

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ