Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ಜಿಲ್ಲೆಗಳು, 27 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳ ಬಳಿ ಸಿಕ್ಕಿದ್ದೆಷ್ಟು ಗೊತ್ತಾ?

ಬೆಂಗಳೂರಿನಲ್ಲಿ ಲೋಕಾಯುಕ್ತರು ಏಕಕಾಲದಲ್ಲಿ 7 ಜಿಲ್ಲೆಗಳಲ್ಲಿ 28 ಕಡೆ ದಾಳಿ ನಡೆಸಿ 7 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 18 ಕೋಟಿಗೂ ಅಧಿಕ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳು ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ತಮ್ಮ ಆಸ್ತಿಗಳಿಗೆ ಸಮರ್ಪಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

7 ಜಿಲ್ಲೆಗಳು, 27 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳ ಬಳಿ ಸಿಕ್ಕಿದ್ದೆಷ್ಟು ಗೊತ್ತಾ?
7 ಜಿಲ್ಲೆಗಳು, 27 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳ ಬಳಿ ಸಿಕ್ಕಿದ್ದೆಷ್ಟು ಗೊತ್ತಾ?
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 31, 2025 | 10:12 PM

ಬೆಂಗಳೂರು, ಜನವರಿ 31: ಇಂದು ಬೆಳಂಬೆಳಗ್ಗೆ ಬೆಚ್ಚಗೆ ಮನೆಯಲ್ಲಿ ಮಲಗಿದ್ದ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ (Lokayukta raid) ಪೊಲೀಸರು ಶಾಕ್ ನೀಡಿದ್ದರು. ಕರ್ನಾಟಕದ 7 ಜಿಲ್ಲೆಗಳಲ್ಲಿ ಏಕಕಾಲದಲ್ಲಿ 28 ಕಡೆ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ. ನಿರಂತರ ಭ್ರಷ್ಟಾಚಾರದ ದೂರು, ಆದಾಯಕ್ಕೂ ಮೀರಿದ ಅಸಮತೋಲನ ಆಸ್ತಿ ಗಳಿಕೆ ಆರೋಪದ ಹೊತ್ತಿದ್ದ 7 ಸರ್ಕಾರಿ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಹಾಗಾದರೆ ಲೋಕಾ ರೇಡ್ ವೇಳೆ ಬಯಲಾದ ಭ್ರಷ್ಟ ಅಧಿಕಾರಿಗಳ ಆಸ್ತಿ-ಪಾಸ್ತಿಗಳ ಮೌಲ್ಯ ಎಷ್ಟು? ಸ್ಥಿರಾಸ್ತಿ ಮತ್ತು ಚರಾಸ್ತಿಗಳು ಪಕ್ಕಾ ಲೆಕ್ಕ ಇಲ್ಲಿದೆ.

7 ಜಿಲ್ಲೆ, 27 ಸ್ಥಳಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ

ಲೋಕಾಯುಕ್ತ ಭ್ರಷ್ಟ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನ. ಅಸಮತೋಲನ, ಅಕ್ರಮ ಸಂಪತ್ತು ಗಳಿಸಿರುವ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಚಳಿ ಬಿಡಿಸುತ್ತಿರುತ್ತಾರೆ. ಅದೇ ರೀತಿ ಇಂದು ಬೆಂಗಳೂರು ನಗರದ 2 ಕಡೆ, ಬೆಳಗಾವಿ-2, ಬಾಗಲಕೋಟೆ-1, ಚಿತ್ರದುರ್ಗ-1, ರಾಯಚೂರು-1 ಸೇರಿ 7 ಸರ್ಕಾರಿ ಅಧಿಕಾರಿಗಳ ಮೇಲೆ ಏಕಕಾಲಕ್ಕೆ 27 ಕಡೆ ದಾಳಿ‌ ಮಾಡಿ ಭ್ರಷ್ಟರ ಬೆವರಿಳಿಸಿದ್ದಾರೆ.

ಲೋಕಾಯುಕ್ತ ದಾಳಿ ನಂ.1) ಮಾಧವ್ ರಾವ್, ಬಿಬಿಎಂಪಿ ಹೆಬ್ಬಾಳ ಉಪ ವಿಭಾಗ, ಸಹಾಯಕ ಕಾರ್ಯಪಾಲಕ ಇಂಜಿನಿಯರ್​​

ಬೆಂಗಳೂರಿನ 5 ಸ್ಥಳಗಳಲ್ಲಿ ಶೋಧ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು, ಅಧಿಕಾರಿ ಸ್ಥಿರಾಸ್ತಿ ಅಂದಾಜು ಮೌಲ್ಯ 7 ನಿವೇಶನಗಳು, 2 ವಾಸದ ಮನೆಗಳು, 48.27 ಎಕರೆ ಕೃಷಿ ಜಮೀನು ಪತ್ತೆಯಾಗಿದ್ದು, ಒಟ್ಟು ಮೌಲ್ಯ 7 ಕೋಟಿ 52 ಲಕ್ಷ ಸ್ಥಿರಾಸ್ತಿ. 97 ಸಾವಿರ 200 ನಗದು, 55 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ 50 ಲಕ್ಷ ಬೆಲೆಬಾಳುವ ಐಶಾರಾಮಿ ವಾಹನಗಳು. ಒಟ್ಟಾರೆ ಚರಾಸ್ಥಿ ಮೌಲ್ಯ 1 ಕೋಟಿ 5 ಲಕ್ಷ 97 ಸಾವಿರದ 200 ಅಲ್ಲದೇ ಒಟ್ಟು ಆಸ್ತಿ ಮೌಲ್ಯ 8 ಕೋಟಿ 57 ಲಕ್ಷ 97 ಸಾವಿರದ 200 ಪತ್ತೆಯಾಗಿದೆ.

ಲೋಕಾಯುಕ್ತ ದಾಳಿ ನಂ.2) ಟಿ.ಕೆ.ರಮೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ

ಅಧಿಕಾರಿ ಸ್ಥಿರಾಸ್ತಿ 3 ನಿವೇಶನಗಳು, 1 ವಾಸದ ಮನೆ ಒಟ್ಟು ಸ್ಥಿರಾಸ್ತಿ ಮೌಲ್ಯ 1 ಕೋಟಿ 23 ಲಕ್ಷ 73 ಸಾವಿರದ 500, ಹಾಗೂ ಚರಾಸ್ಥಿ 20 ಸಾವಿರದ 200 ರೂಪಾಯಿ ನಗದು, 3 ಲಕ್ಷ 58 ಸಾವಿರದ 200 ಮೌಲ್ಯದ ಚಿನ್ನಾಭರಣಗಳು, 20 ಲಕ್ಷ ಬೆಲೆಬಾಳುವ ಐಶಾರಾಮಿ ವಾಹನಗಳು. 6 ಲಕ್ಷ 55 ಸಾವಿರ ಮೌಲ್ಯದ ಗೃಹಪಯೋಗಿ ವಸ್ತುಗಳು ಹಾಗೂ 67 ಲಕ್ಷ 50 ಸಾವಿರ ಮೌಲ್ಯದ ಇತರೆ ಖರ್ಚುಗಳು. ಒಟ್ಟು ಚರಾಸ್ಥಿ ಮೌಲ್ಯ 97 ಲಕ್ಷದ 83 ಸಾವಿರ 418 ರೂಪಾಯಿ. ಒಟ್ಟು ಟಿ.ಕೆ.ರಮೇಶ್ ಆಸ್ತಿ ಮೌಲ್ಯ 2 ಕೋಟಿ 21 ಲಕ್ಷದ 56 ಸಾವಿರದ 918 ರೂಪಾಯಿಗಳು ಪತ್ತೆಯಾಗಿದೆ.

ಲೋಕಾ ದಾಳಿ ನಂ.3) ಕೆ.ಸಿ.ಶಶಿಧರ್, ಮ್ಯಾನೇಜರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯ ಒಟ್ಟು 4 ಸ್ಥಳಗಳಲ್ಲಿ ಶೋಧ ಕಾರ್ಯ. ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 1 ಕೋಟಿ 21 ಲಕ್ಷದ 20 ಸಾವಿರ 1 ನಿವೇಶನ, 1 ವಾಸದ ಮನೆ, 9.14 ಎಕರೆ ಕೃಷಿ ಜಮೀನು. ಒಟ್ಟು ಚರಾಸ್ತಿ ಮೌಲ್ಯ 57 ಲಕ್ಷದ 5 ಸಾವಿರ 839 ರೂಪಾಯಿ, 58 ಸಾವಿರ ನಗದು ಹಣ, 21 ಲಕ್ಷದ 66 ಸಾವಿರದ 400 ರೂಪಾಯಿ ಮೌಲ್ಯದ ಚಿನ್ನಾಭರಣಗಳು. 34 ಲಕ್ಷದ 81 ಸಾವಿರದ 439 ರೂಪಾಯಿ ಮೌಲ್ಯದ ಐಶಾರಾಮಿ ವಾಹನಗಳು. ಅಲ್ಲದೇ ಎಲ್ಲಾ ಆಸ್ತಿ ಒಟ್ಟು ಮೌಲ್ಯ 1 ಕೋಟಿ 78 ಲಕ್ಷ 25 ಸಾವಿರದ 839 ರೂಪಾಯಿಗಳು ಪತ್ತೆಯಾಗಿದೆ.

ಲೋಕಾ ದಾಳಿ ನಂ.4) ಸಚಿನ್ ಬಸವಂತ್ ಮಂಡೆಡ್ ಅಲಿಯಾಸ್ ಮಂಡೆದಾರ್, ಸಬ್ ರಿಜಿಸ್ಟಾರ್, ಬೆಳಗಾವಿ ಉತ್ತರ, ಬೆಳಗಾವಿ

ಬೆಳಗಾವಿ ಜಿಲ್ಲೆಯ ಒಟ್ಟು 5 ಸ್ಥಳಗಳಲ್ಲಿ ಶೋಧ ಕಾರ್ಯ ಮಾಡಲಾಗಿದೆ. ಅಧಿಕಾರಿ ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 58 ಲಕ್ಷ. 1 ನಿವೇಶನ, 1 ನಿರ್ಮಾಣ ಹಂತದ ವಾಸದ ಮನೆ. ಮತ್ತು ಚರಾಸ್ತಿ ಮೌಲ್ಯ 1 ಕೋಟಿ 92 ಲಕ್ಷ 12 ಸಾವಿರದ 559 ರೂಪಾಯಿ, 1 ಲಕ್ಷ 35 ಸಾವಿರ ನಗದು, 87 ಲಕ್ಷದ 27 ಸಾವಿರದ 559 ಬೆಲೆಬಾಳುವ ಚಿನ್ನಾಭರಣಗಳು ಮತ್ತು 2 ಲಕ್ಷ 50 ಸಾವಿರ ಮೌಲ್ಯದ ಐಶಾರಾಮಿ ಕಾರುಗಳು. 1 ಕೋಟಿ 1 ಲಕ್ಷ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹಣ, ಮ್ಯೂಚುಯಲ್‌ ಫಂಡ್ ಮತ್ತು ಈಕ್ವಿಟಿ ಶೇರ್ಸ್ ಎಲ್ಲಾ ಸೇರಿ ಒಟ್ಟು ಮೌಲ್ಯ 1 ಕೋಟಿ 92 ಲಕ್ಷದ 12 ಸಾವಿರದ 559 ರೂಪಾಯಿ. ಒಟ್ಟು ಆಸ್ತಿ ಮೌಲ್ಯ 2 ಕೋಟಿ 50 ಲಕ್ಷ 12 ಸಾವಿರದ 559 ರೂಪಾಯಿ ಪತ್ತೆಯಾಗಿದೆ.

ಲೋಕಾ ದಾಳಿ ನಂ.5) ಸಂಜಯ್ ಅಣ್ಣಪ್ಪ ದುರ್ಗಣ್ಣವರ್, ಹೆಲ್ತ್ ಇನ್ಸ್ ಪೆಕ್ಟರ್, ರಾಯಬಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ

ಬೆಳಗಾವಿ ಜಿಲ್ಲೆಯ 3 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಶೋಧ ಕಾರ್ಯ ನಡೆಸಿದ್ದು, ಒಟ್ಟು ಸ್ಥಿರಾಸ್ತಿ ಮೌಲ್ಯ 50 ಲಕ್ಷ 77 ಸಾವಿರ. 4 ನಿವೇಶನ, 1 ವಾಸದ ಮನೆ, 1 ಎಕರೆ ಕೃಷಿ ಜಮೀನು. ಮತ್ತು ಚರಾಸ್ತಿ ಮೌಲ್ಯ 23 ಲಕ್ಷದ 30 ಸಾವಿರದ 514 ರೂಪಾಯಿ. ಮನೆಯಲ್ಲಿ ಸಿಕ್ಕ 2 ಸಾವಿರ 190 ರೂಪಾಯಿ ನಗದು ಹಣ, 9 ಲಕ್ಷ 92 ಸಾವಿರದ 324 ಬೆಲಬಾಳುವ ಚಿನ್ನಾಭರಣಗಳು. 4 ಲಕ್ಷ 50 ಸಾವಿರ ಮೌಲ್ಯದ ವಾಹನಗಳು ಹಾಗೂ 8 ಲಕ್ಷ 86 ಸಾವಿರ ಇತರೆ ಮತ್ತು ಗೃಹೋಪಯೋಗಿ ವಸ್ತುಗಳು. ಅಧಿಕಾರಿಯ ಒಟ್ಟು ಆಸ್ತಿ ಮೌಲ್ಯ – 74 ಲಕ್ಷದ 7 ಸಾವಿರದ 514.

ಲೋಕಾ ದಾಳಿ ನಂ.6) ಶಿವಲಿಂಗಯ್ಯ ಪಂಚಾಕ್ಷರಯ್ಯ ಹಿರೇಮಠ, ಪಿಡಿಓ, ಹುಲಗೇರಿ ಗ್ರಾ.ಪಂ. ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿ ಒಟ್ಟು 3 ಸ್ಥಳಗಳಲ್ಲಿ ಕಾರ್ಯಚರಣೆ ಮಾಡಲಾಗಿದೆ. ಅಧಿಕಾರಿಯ ಸ್ಥಿರಾಸ್ತಿ ಅಂದಾಜು ಮೌಲ್ಯ 1 ಕೋಟಿ 18 ಲಕ್ಷದ 70 ಸಾವಿರ. ಅಧಿಕಾರಿಯ ಹೆಸರಿನಲ್ಲಿ 1 ನಿವೇಶನ, 1 ವಾಸದ ಮನೆ ಇದ್ದು, ಚರಾಸ್ತಿ ಮೌಲ್ಯ 24 ಲಕ್ಣದ 75 ಸಾವಿರದ 630 ರೂಪಾಯಿ. 1 ಲಕ್ಷ 97 ಸಾವಿರದ 130 ನಗದು, 14 ಲಕ್ಷ 28 ಸಾವಿರದ 500 ಮೌಲ್ಯದ ಚಿನ್ನಾಭರಣಗಳು ಹಾಗೂ 8 ಲಕ್ಷ 50 ಸಾವಿರ ಮೌಲ್ಯದ ವಾಹನಗಳು. ಅಧಿಕಾರಿಯ ಎಲ್ಲಾ ಆಸ್ತಿ ಒಟ್ಟು 1 ಕೋಟಿ 43 ಲಕ್ಷದ 45 ಸಾವಿರದ 630 ರೂಪಾಯಿಗಳು ಪತ್ತೆಯಾಗಿದೆ.

ಲೋಕಾಯುಕ್ತ ದಾಳಿ ನಂ.7)ನರಸಿಂಗ ರಾವ್ ಗುಜ್ಜಾರ್, ಅಸಿಸ್ಟಿಂಟ್ ಅಕೌಂಟೆಂಟ್, ಜಿಲ್ಲಾ ಪಂಚಾಯತ್ ಕಚೇರಿ, ರಾಯಚೂರು ಜಿಲ್ಲೆ

ರಾಯಚೂರು ಜಿಲ್ಲೆಯ 2 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ ಮಾಡಲಾಗಿದೆ. ಅಧಿಕಾರಿಯ ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 78 ಲಕ್ಷ. ಅಧಿಕಾರಿ ಹೆಸರಿನಲ್ಲಿ 5 ನಿವೇಶನಗಳು, 2 ವಾಸದ ಮನೆಗಳು ಪತ್ತೆಯಾಗಿದ್ದು, ಚರಾಸ್ತಿ ಮೌಲ್ಯ 42 ಲಕ್ಷ 48 ಸಾವಿರದ 182 ರೂಪಾಯಿಗಳು. 38 ಸಾವಿರದ 182 ರೂಪಾಯಿ ನಗದು ಹಣ, 40 ಲಕ್ಷ 40 ಸಾವಿರ ಮೌಲ್ಯದ ಚಿನ್ನಾಭರಣಗಳು ಹಾಗೂ 1 ಲಕ್ಷ 70 ಸಾವಿರ ಮೌಲ್ಯದ ವಾಹನಗಳು ಪತ್ತೆ. ಅಧಿಕಾರಿಯ ಒಟ್ಟು ಆಸ್ತಿ ಮೌಲ್ಯ 1 ಕೋಟಿ 20 ಲಕ್ಷ 48 ಸಾವಿರದ 182 ರೂಪಾಯಿಗಳು ಪತ್ತೆಯಾಗಿದೆ.

ಸದ್ಯ ರಾಜ್ಯದ 7 ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ ವೇಳೆ ಆದಾಯಕ್ಕೂ ಮೀರಿದ ಅಸಮತೋಲನ ಆಸ್ತಿ ಹೊಂದಿರುವ ಆರೋಪದಲ್ಲಿ 18 ಕೋಟಿಗೂ ಅಧಿಕ ಮೌಲ್ಯದ ಆಸ್ತಿ-ಪಾಸ್ತಿ ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಆಸ್ತಿಗೆ ಸಂಬಂಧಪಟ್ಟಂತ ಸಮರ್ಪಕ ದಾಖಲೆಗಳನ್ನು ಭ್ರಷ್ಟ ಅಧಿಕಾರಿಗಳು ಒದಗಿಸಬೇಕಾಗುತ್ತದೆ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ.

ವರದಿ: ಪ್ರದೀಪ್ ಜೊತೆ ಶಿವಪ್ರಸಾದ್ ಟಿವಿನೈನ್ ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.