Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2025: ಮೋದಿ ಸರ್ಕಾರದ ಬಜೆಟ್​ಗೆ ಕೌಂಟ್‌ಡೌನ್, ಇಡೀ ದೇಶದ ಚಿತ್ತ ಬಜೆಟ್​ನತ್ತ

2025ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ರಾಷ್ಟ್ರಪತಿಗಳ ಭಾಷಣದ ಮೂಲಕ ಆರಂಭಗೊಂಡಿದೆ. ಇಂದು(ಫೆಬ್ರವರಿ 01) ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್​ ಮಂಡನೆ ಮಾಡಲಿದ್ದು, ಯಾವ ಕ್ಷೇತ್ರಕ್ಕೆ ಏನೇನು ಬಂಪರ್ ಕೊಡುಗೆ ಘೋಷಣೆ ಮಾಡುತ್ತಾರೆ ಎಂದು ಇಡೀ ದೇಶವೇ ಬಜೆಟ್​ನತ್ತ ಚಿತ್ತ ನೆಟ್ಟಿದೆ. ಇನ್ನು ಈ ಬಜೆಟ್​ನ ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ ಟಿವಿ9 ಡಿಜಿಟಲ್​ ನೀಡುತ್ತಿದ್ದು, ಒಂದೇ ಕ್ಲಿಕ್​ನಲ್ಲಿ ಇಡೀ ಬಜೆಟ್​ನ ಮಾಹಿತಿಯನ್ನು ಪಡೆದುಕೊಳ್ಳಬಹುದು.

Budget 2025: ಮೋದಿ ಸರ್ಕಾರದ ಬಜೆಟ್​ಗೆ ಕೌಂಟ್‌ಡೌನ್, ಇಡೀ ದೇಶದ ಚಿತ್ತ ಬಜೆಟ್​ನತ್ತ
Union Budget 2025
Follow us
ರಮೇಶ್ ಬಿ. ಜವಳಗೇರಾ
| Updated By: ವಿವೇಕ ಬಿರಾದಾರ

Updated on:Feb 01, 2025 | 7:07 AM

ನವದೆಹಲಿ, (ಜನವರಿ 31): ಈಗಾಗಲೇ ನಿನ್ನೆಯಿಂದ (ಜನವರಿ 31) ಬಜೆಟ್ ಅಧಿವೇಶನ ಶುರುವಾಗಿದ್ದು, ಮೊದಲ ದಿನ ರಾಷ್ಟ್ರಪತಿ ದ್ರೌಪತಿ ಮುರ್ಮು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಇದಾದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಭಯ ಸದನದಲ್ಲೂ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ್ದು,. 2024-25 ರ ಆರ್ಥಿಕ ಸಮೀಕ್ಷೆಯ ಪ್ರಕಾರ 2025-26 ಹಣಕಾಸು ವರ್ಷದಲ್ಲಿ ಭಾರತದ GDP ಬೆಳವಣಿಗೆಯು 6.3% ಮತ್ತು 6.8% ರ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ನಿಧಾನವಾಗಬಹುದು ಎಂದು ಪ್ರೊಜೆಕ್ಷನ್ ಸೂಚಿಸಿದೆ. ಇದನ್ನೆಲ್ಲಾ ಬ್ಯಾಲೆನ್ಸ್ ಮಾಡುವಂತ ಇಂದು(ಫೆಬ್ರವರಿ 01)  ಬಜೆಟ್ ಮಂಡಿಸಲು ಸಜ್ಜಾಗಿದ್ದು, ಮೋದಿ ಸರ್ಕಾರದ ಲೆಕ್ಕಕ್ಕೆ ಕೌಂಟ್‌ಡೌನ್ ಶುರುವಾಗಿದೆ.

ಬಜೆಟ್ ನಿರೀಕ್ಷೆಗಳು

ಜನಸಮಾನ್ಯರು, ವೇತನದಾರರು, ಸ್ತ್ರೀ ಸಮುದಾಯ, ದೇಶದ ಮಧ್ಯಮವರ್ಗ ಉಸಿರು ಬಿಗಿ ಹಿಡಿದು ಕಾಯುತ್ತಿರೋ ಬಜೆಟ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಪ್ರಮಾಣಧ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದೆ. ಬಡ ಮತ್ತು ಮಧ್ಯಮವರ್ಗ ರೈತರು, ವ್ಯಾಪಾರಿಗಳಿಗೆ, ವೇತನದಾರರಿಗೆ ಮೋದಿ ಭರ್ಜರಿ ಗಿಫ್ಟ್ ಕೊಡುತ್ತಾರೆಂಬ ನಿರೀಕ್ಷೆ ಇದೆ. ಈ ಸುಳಿವು ನೀಡಿರುವ ಮೋದಿ, ಐತಿಹಾಸಿಕ ಬಜೆಟ್​ ಮಂಡಿಸುತ್ತೇವೆ ಎಂದಿದ್ದಾರೆ. ಹೀಗಾಗಿ ಜನಸಾಮಾನ್ಯರಿಗೆ ಈ ಬಜೆಟ್​ನಲ್ಲಿ ಬಂಪರ್ ಸಿಗುತ್ತಾ ಎಂದು ಕಾದುಕುಳಿತಿದ್ದಾರೆ.

ಇದನ್ನೂ ಓದಿ: ಕೇಂದ್ರ ಹಣಕಾಸು ಸಚಿವೆ ನೇತೃತ್ವದ ಬಜೆಟ್ ಟೀಮ್​ನ ಪ್ರಮುಖ ಸದಸ್ಯರಿವರು…

ಇಂದಿನ ಬಜೆಟ್ ಅನ್ನ ವೇತನದಾರರ ವರ್ಗ ಉಸಿರು ಬಿಗಿ ಹಿಡಿದು ನೋಡ್ತಿದೆ. ಯಾಕಂದ್ರೆ, ತೆರಿಗೆ ವಿನಾಯಿತಿ ಮಿತಿ ಹೆಚ್ಚಾಗಬಹುದಂಬ ನಿರೀಕ್ಷೆ ಇದೆ. 80C ಅಡಿಯಲ್ಲಿ ಇರುವ ತೆರಿಗೆ ವಿನಾಯಿತಿಯನ್ನ ಒಂದೂವರೆ ಲಕ್ಷದಿಂದ ಎರಡು ಲಕ್ಷಕ್ಕೆ ಏರಿಸುವ ಸಾಧ್ಯತೆ ಇದೆ. ಹಾಗೆಯೇ ಸದ್ಯ 15ಲಕ್ಷಕ್ಕಿಂತ ಹೆಚ್ಚು ವೇತನ ಪಡೆಯುವವರು 30ರಷ್ಟು ಆದಾಯ ಪಾವತಿಸುತ್ತಿದ್ದಾರೆ. ಈ ಮಿತಿಯನ್ನ 20ಲಕ್ಷಕ್ಕೆ ಏರಿಕೆ ಮಾಡಿ, 15ರಿಂದ 20ಲಕ್ಷಕ್ಕೆ ಮತ್ತೊಂದು ಸ್ಲ್ಯಾಬ್ ನೀಡಬಹುದು ಎನ್ನಲಾಗುತ್ತಿದೆ. ಇನ್ನೂ ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ 75 ಸಾವಿರ ಇದ್ದು, ಇದನ್ನ 1ಲಕ್ಷಕ್ಕೆ ಏರಿಕೆ ಮಾಡುವ ನಿರೀಕ್ಷೆ ಇದೆ. ಹಾಗೆಯೇ ಸದ್ಯ 7ಲಕ್ಷ ದಾಟಿದ್ರೆ 3ಲಕ್ಷದಿಂದಲೂ ತೆರಿಗೆ ಪಾವತಿಸುವ ಪದ್ಧತಿಯಿದೆ. ಈ ಮೀತಿಯನ್ನ 5ಲಕ್ಷಕ್ಕೆ ಹೆಚ್ಚಿಸಬಹುದು. ಈ ಮೂಲಕ ಹಳೇ ತೆರಿಗೆ ಪದ್ಧತಿಗೆ ನಿಧಾನವಾಗಿ ತಿಲಾಂಜಲಿ ಹಾಡಿ ಹೊಸ ತೆರಿಗೆ ಪದ್ಧತಿಗೆ ಉತ್ತೇಜನ ನೀಡಲು 7ಲಕ್ಷದವರೆಗೂ ಇರೋ ತೆರಿಗೆ ವಿನಾಯಿತಿಯನ್ನ 10ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.

ಕೇಂದ್ರ ಬಜೆಟ್​ ಲೈವ್​​ ಆಗಿ ಇಲ್ಲಿ ವೀಕ್ಷಿಸಿ

ಇನ್ನೂ ನಾಳಿನ ಬಜೆಟ್‌ ಮೇಲೆ ಕರ್ನಾಟಕವೂ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ರಾಜ್ಯಕ್ಕೆ ಬರಬೇಕಾದ ಅನುದಾನ, ವಿವಿಧ ಯೋಜನೆಗಳಡಿ ಕೇಂದ್ರ ಸರ್ಕಾರ ಉಳಿಸಿಕೊಂಡಿರುವ ಬಾಕಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನ, ರೈಲ್ವೆ ಯೋಜನೆಗಳು, ಮಹದಾಯಿ ಯೋಜನೆಗೆ ಅನುಮತಿ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕೆಂಬ ಬೇಡಿಕೆ ಇದೆ. ಇದೆಲ್ಲಾ ಇಂದಿನ ಬಜೆಟ್‌ನಲ್ಲಿ ಈಡೇರುತ್ತಾ ಎನ್ನುವುದನ್ನ ಕಾದು ನೋಡಬೇಕಿದೆ.

ಇನ್ನು ಬಜೆಟ್​ನ ಕ್ಷಣ ಕ್ಷಣದ ಮಾಹಿತಿಯನ್ನು ತಿಳಿದುಕೊಳ್ಳಲು ಟಿವಿ9 ಕನ್ನಡ ಡಿಜಿಟಲ್ ಫಾಲೋ ಮಾಡಿ.​

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:00 am, Sat, 1 February 25

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಅಶೋಕ
ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಅಶೋಕ
ಹಿಮಾನಿ ಶವವನ್ನು ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಪತ್ತೆ
ಹಿಮಾನಿ ಶವವನ್ನು ಸೂಟ್‌ಕೇಸ್‌ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಪತ್ತೆ
ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವಕಾಶ
ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವಕಾಶ
ನಟ್ಟು ಬೋಲ್ಟು ಹೇಳಿಕೆ: ಡಿಕೆಶಿ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ
ನಟ್ಟು ಬೋಲ್ಟು ಹೇಳಿಕೆ: ಡಿಕೆಶಿ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ
ಡಾ ರಾಜ್​ಕುಮಾರ್ ಅವರ ಒಂದು ಸನ್ನೆಗೆ ಲಕ್ಷ ಜನ ಸೇರ್ತಿದ್ರು: ಸಾಧು ಕೋಕಿಲ
ಡಾ ರಾಜ್​ಕುಮಾರ್ ಅವರ ಒಂದು ಸನ್ನೆಗೆ ಲಕ್ಷ ಜನ ಸೇರ್ತಿದ್ರು: ಸಾಧು ಕೋಕಿಲ
ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಮೇಲ್ವಿಚಾರಕ: ವಿದ್ಯಾರ್ಥಿನಿ ಕಣ್ಣೀರು
ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಮೇಲ್ವಿಚಾರಕ: ವಿದ್ಯಾರ್ಥಿನಿ ಕಣ್ಣೀರು
ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಅದು ಬ್ರಹ್ಮಾಸ್ತ್ರ: ನಾರಾಯಣಗೌಡ
ಪ್ರತಿಭಟನೆಗಳಿಗೆ ಬಂದ್ ಒಂದೇ ಅಸ್ತ್ರವಲ್ಲ, ಅದು ಬ್ರಹ್ಮಾಸ್ತ್ರ: ನಾರಾಯಣಗೌಡ
ಉತ್ತರ ಕನ್ನಡ ಜಿಲ್ಲೆಲಿ ಅತಿ ಹೆಚ್ಚು ಉಷ್ಣಾಂಶ ದಾಖಲು: ಡಿಸಿ ಹೇಳಿದ್ದಿಷ್ಟು
ಉತ್ತರ ಕನ್ನಡ ಜಿಲ್ಲೆಲಿ ಅತಿ ಹೆಚ್ಚು ಉಷ್ಣಾಂಶ ದಾಖಲು: ಡಿಸಿ ಹೇಳಿದ್ದಿಷ್ಟು
ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ
ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ
ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ
ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ: ಸಿದ್ದರಾಮಯ್ಯ