AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 347 ಜನರಿಗೆ ಕೊರೊನಾ ದೃಢ; 10 ಮಂದಿ ಸಾವು

ಬೆಂಗಳೂರಿನಲ್ಲಿ ಇಂದು ಒಂದೇ ದಿನ 166 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,51,735 ಕ್ಕೆ ಏರಿಕೆಯಾಗಿದೆ. 12,51,735 ಸೋಂಕಿತರ ಪೈಕಿ 12,28,855 ಜನರು ಗುಣಮುಖರಾಗಿದ್ದಾರೆ.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 347 ಜನರಿಗೆ ಕೊರೊನಾ ದೃಢ; 10 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 30, 2021 | 8:31 PM

Share

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಅಕ್ಟೋಬರ್ 30) ಹೊಸದಾಗಿ 347 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,88,041 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,41,233 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 10 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,071 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 8,708 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 166 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,51,735 ಕ್ಕೆ ಏರಿಕೆಯಾಗಿದೆ. 12,51,735 ಸೋಂಕಿತರ ಪೈಕಿ 12,28,855 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 4 ಮಂದಿ ಸಾವನ್ನಪ್ಪಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,274 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 6,605 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 166, ಬೀದರ್ 0, ಚಾಮರಾಜನಗರ 1, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 2, ಚಿತ್ರದುರ್ಗ 1, ದಕ್ಷಿಣ ಕನ್ನಡ 21, ದಾವಣಗೆರೆ 4, ಧಾರವಾಡ 1, ಗದಗ 0, ಹಾಸನ 13, ಹಾವೇರಿ 0, ಕಲಬುರಗಿ 1, ಕೊಡಗು 9, ಕೋಲಾರ 3, ಕೊಪ್ಪಳ 0, ಮಂಡ್ಯ 8, ಮೈಸೂರು 44, ರಾಯಚೂರು 0, ರಾಮನಗರ 1, ಶಿವಮೊಗ್ಗ 9, ತುಮಕೂರು 19, ಉಡುಪಿ 14, ಉತ್ತರ ಕನ್ನಡ 14, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಕೊರೊನಾದಿಂದ ಮೃತಪಟ್ಟವರ ವಿವರ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊವಿಡ್19 ಸೋಂಕಿನಿಂದ 4 ಮಂದಿ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ, ಹಾವೇರಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕೊರೊನಾದಿಂದ ಒಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪಾಕ್ ಕ್ರಿಕೆಟ್ ತಂಡದ ಮೂವರು ಕ್ರಿಕೆಟರ್ಸ್​ಗೆ ಕೊರೊನಾ ಸೋಂಕು! ಮಂಡಳಿ ಅಧಿಕೃತ ಮಾಹಿತಿ

ಇದನ್ನೂ ಓದಿ: ಚೀನಾ ಆಯ್ತು ಈಗ ರಷ್ಯಾ: ಮಿತಿಮೀರಿದ ಕೊರೊನಾ ಸೋಂಕು, ಮಾಸ್ಕೋದಲ್ಲಿ 11 ದಿನ ಲಾಕ್​​ಡೌನ್​​

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ