Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 836 ಜನರಿಗೆ ಕೊರೊನಾ ದೃಢ; 15 ಮಂದಿ ಸಾವು
ಬೆಂಗಳೂರಿನಲ್ಲಿ ಇಂದು ಒಂದೇ ದಿನ 310 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,44,674 ಕ್ಕೆ ಏರಿಕೆಯಾಗಿದೆ. 12,44,674 ಸೋಂಕಿತರ ಪೈಕಿ 12,21,117 ಜನರು ಗುಣಮುಖರಾಗಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 23) ಹೊಸದಾಗಿ 836 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,71,044 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,19,742 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 15 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,683 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 13,590 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 310 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,44,674 ಕ್ಕೆ ಏರಿಕೆಯಾಗಿದೆ. 12,44,674 ಸೋಂಕಿತರ ಪೈಕಿ 12,21,117 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 7 ಮಂದಿ ಸಾವನ್ನಪ್ಪಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,117 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 7,439 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ ಬಾಗಲಕೋಟೆ 1, ಬಳ್ಳಾರಿ 3, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 310, ಬೀದರ್ 3, ಚಾಮರಾಜನಗರ 5, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 26, ಚಿತ್ರದುರ್ಗ 2, ದಕ್ಷಿಣ ಕನ್ನಡ 106, ದಾವಣಗೆರೆ 2, ಧಾರವಾಡ 3, ಗದಗ 0, ಹಾಸನ 47, ಹಾವೇರಿ 0, ಕಲಬುರಗಿ 5, ಕೊಡಗು 37, ಕೋಲಾರ 15, ಕೊಪ್ಪಳ 0, ಮಂಡ್ಯ 18, ಮೈಸೂರು 78, ರಾಯಚೂರು 0, ರಾಮನಗರ 3, ಶಿವಮೊಗ್ಗ 22, ತುಮಕೂರು 25, ಉಡುಪಿ 69, ಉತ್ತರ ಕನ್ನಡ 32, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
ಇಂದಿನ 23/09/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/Dgayj1pGdF @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/p8UYXn8S82
— K’taka Health Dept (@DHFWKA) September 23, 2021
ಕೊರೊನಾದಿಂದ ಮೃತಪಟ್ಟವರ ವಿವರ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾದಿಂದ 7 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್19 ಸೋಂಕಿಗೆ 3 ಮಂದಿ ಬಲಿಯಾಗಿದ್ದಾರೆ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಧಾರವಾಡ, ಮೈಸೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಕೊರೊನಾದಿಂದ ತಲಾ 1 ಮಂದಿ ಮೃತಪಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಮಕ್ಕಳಿಗೆ ಕಾಡುತ್ತಿರುವ ಕೊರೊನಾ ದಾವಣಗೆರೆ ಜಿಲ್ಲೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಬಾಧಿಸುತ್ತಿದೆ. ಸೆಪ್ಟೆಂಬರ್ 6 ರಿಂದ 20 ರವರೆಗೆ 14 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 5, 10 ವರ್ಷದೊಳಗಿನ ತಲಾ ಒಬ್ಬರಿಗೆ ಕೊರೊನಾ ದೃಢವಾಗಿದೆ. 11-15 ವರ್ಷದೊಳಗಿನ ಮೂರು ಮಕ್ಕಳಿಗೆ ಕೊರೊನಾ ಕಾಣಿಸಿಕೊಂಡಿದೆ. 16-18 ವರ್ಷದೊಳಗಿನ 9 ಮಕ್ಕಳಿಗೆ ಕೊರೊನಾ ದೃಢವಾಗಿದೆ. ಸೋಂಕಿತ ಮಕ್ಕಳಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಟಿವಿ9ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕೊರೊನಾ ಬಿಕ್ಕಟ್ಟು: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್
ಇದನ್ನೂ ಓದಿ: ಪತ್ನಿ ಕೊರೊನಾ ಲಸಿಕೆ ತೆಗೆದುಕೊಂಡಿದ್ದಕ್ಕೆ ಪತಿಗೆ ಶಾಕ್; ಹುಡುಕಿ ಹೋಗಿ ನರ್ಸ್ಗೆ ಹೊಡೆದ ವ್ಯಕ್ತಿ