Karnataka Rains: ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆ

ಕರ್ನಾಟಕದಲ್ಲಿ ಗಾಳಿ, ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಕೂಡ ಮುಂದಿನ ಮೂರು ದಿನಗಳ ಕಾಲ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಬಾಗಲಕೋಟೆ, ಬೀದರ್ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Karnataka Rains: ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆ
ಮಳೆImage Credit source: Hindustan Times
Follow us
ನಯನಾ ರಾಜೀವ್
|

Updated on: Jul 28, 2024 | 8:48 AM

ಕರ್ನಾಟಕ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಒಳನಾಡಿನ ಉಡುಪಿ, ಉತ್ತರ ಒಳನಾಡಿನ ಕಲಬುರಗಿ, ಬೆಳಗಾವಿ, ಬೀದರ್​ನಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆಮ ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಆಗುಂಬೆ, ಮೂಡಿಗೆರೆ, ಸೋಮವಾರಪೇಟೆ, ಕ್ಯಾಸಲ್​ರಾಕ್, ಶೃಂಗೇರಿ, ಗೇರುಸೊಪ್ಪ, ಲೋಂಡಾ, ನಾಪೊಕ್ಲು, ಭಾಗಮಂಡಲ, ತರೀಕೆರೆ, ಕೊಟ್ಟಿಗೆಹಾರ, ಕಳಸ, ಚಿಕ್ಕಮಗಳೂರು, ಕಮ್ಮರಡಿ, ಕೊಪ್ಪ, ತ್ಯಾಗರ್ತಿ, ಸಿದ್ದಾಪುರ, ಹಳಿಯಾಳ, ಯಲ್ಲಾಪುರ, ಧರ್ಮಸ್ಥಳ, ಸುಳ್ಯ, ಕಾರ್ಕಳ, ಶಿರಾಲಿ, ಬಾಳೆಹೊನ್ನೂರು, ಪೊನ್ನಂಪೇಟೆ, ಎನ್​ಆರ್​ಪುರ, ಅಜ್ಜಂಪುರದಲ್ಲಿ ಮಳೆಯಾಗಿದೆ.

ಮತ್ತಷ್ಟು ಓದಿ: Karnataka Rains: ಕರ್ನಾಟಕದ ಕರಾವಳಿ ಸೇರಿ 7 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ, ಆರೆಂಜ್ ಅಲರ್ಟ್​

ಹುಂಚದಕಟ್ಟೆ, ಉಪ್ಪಿನಂಗಡಿ, ಬೆಳ್ತಂಗಡಿ,ಪುತ್ತೂರು, ಕುಂದಾಪುರ, ಕದ್ರಾ, ಕೋಟ, ಮಾಣಿ, ಬೆಳಗಾವಿ, ಹಿರೇಕೆರೂರು, ಬೆಳಗಾವಿ ವಿಮಾನ ನಿಲ್ದಾಣ, ಸಂಕೇಶ್ವರ, ಹುಕ್ಕೇರಿ, ನಿಪ್ಪಾಣಿ, ಪಣಂಬೂರು, ಕಡೂರು, ಹಾರಂಗಿ, ಹಾಸನ, ಚಿಕ್ಕಮಗಳೂರಿನಲ್ಲಿ ಮಳೆಯಾಗಿದೆ.

ಚನ್ನಗಿರಿ, ಆನವಟ್ಟಿ, ಮಂಗಳೂರು, ಕಿರವತ್ತಿ, ಮುಂಡಗೋಡು, ಗೋಕರ್ಣ, ಕಲಘಟಗಿ, ಕುಶಾಲನಗರ, ಯುಗಟಿ, ಶ್ರವಣಬೆಳಗೊಳ, ಅಂಕೋಲಾ, ಧಾರವಾಡ, ಹಾವೇರಿ, ಬೈಲಹೊಂಗಲ, ಶಿರಹಟ್ಟಿ, ರಾಣೆಬೆನ್ನೂರು, ಬಂಡೀಪುರ, ಶಿವಮೊಗ್ಗ, ಗುಬ್ಬಿಯಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ, ಎಚ್​ಎಎಲ್​ನಲ್ಲಿ 27.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 26.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ದಾಖಲಾಗಿದೆ. ಕೆಐಎಎಲ್​ನಲ್ಲಿ 26.7ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 25.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಹವಾಮಾನಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೊನ್ನಾವರದಲ್ಲಿ 29.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.9 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 30.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 27.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 27.9ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಪಣಂಬೂರಿನಲ್ಲಿ 28.9 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.7 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಬೀದರ್​ನಲ್ಲಿ 27.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 29.0ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 29.1ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಧಾರವಾಡದಲ್ಲಿ 24.8ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಗದಗದಲ್ಲಿ 26.0ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.9 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 28.8ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ