AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಕೆಲವೆಡೆ ಬಿರುಗಾಳಿ ಸಹಿತ ಮಳೆ: ಧಾರಾಕಾರ ಮಳೆಗೆ ಹಲವು ಅವಾಂತರ

ಬೇಸಿಗೆಯ ನಡುವೆ ರಾಜ್ಯದ ಹಲವೆಡೆ ಸುರಿದ ಅಕಾಲಿಕ ಮಳೆ ಮತ್ತು ಬಿರುಗಾಳಿ ತೀವ್ರ ಅವಾಂತರ ಸೃಷ್ಟಿಸಿದೆ. ಮನೆಯ ಹೆಂಚುಗಳು, ಮರಗಳು ನೆಲಕ್ಕುರುಳಿವೆ. ಆಲಿಕಲ್ಲು ಮಳೆಯಿಂದ ಮಾವು, ಅಡಿಕೆ ಬೆಳೆಗಳು ಹಾಳಾಗಿವೆ. ಸಿಡಿಲಿಗೆ ಐವರಿಗೆ ಗಾಯಗಳಾಗಿವೆ. ಮಳೆಯ ರಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ ಆಗಿದೆ.

ರಾಜ್ಯದ ಕೆಲವೆಡೆ ಬಿರುಗಾಳಿ ಸಹಿತ ಮಳೆ: ಧಾರಾಕಾರ ಮಳೆಗೆ ಹಲವು ಅವಾಂತರ
ಮಳೆImage Credit source: tv9 kannada
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Mar 28, 2026 | 9:49 PM

Share

ಬೆಂಗಳೂರು, ಮಾರ್ಚ್​ 28: ರಣರಣ ಅಂತಿರೋ ಬೇಸಿಗೆ ಬಿಸಿಲು ನಡುವೆ ರಾಜ್ಯದ ಕೆಲವೆಡೆ ಮಳೆ (rain) ಅಬ್ಬರಿಸಿದೆ. ಅದರಲ್ಲೂ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಹಲವು ಅವಾಂತರಗಳು ಸಂಭವಿಸಿವೆ. ಗಿಡಮರಗಳು ನೆಲಕ್ಕುರುಳಿದ್ದು, ಕಟ್ಟಡಗಳ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ.

ಬಿರುಬಿಸಿಲ ಬೇಗೆ ನಡುವೆ ಮಳೆಯ ರಣಾರ್ಭಟಿಸಿದ್ದಾರೆ. ಬಿರುಗಾಳಿಗೆ ಕಟ್ಟಡಗಳ ಹೆಂಚುಗಳೇ ಹಾರಿ ಹೋಗಿದ್ದು, ಅಡಕೆ ತೋಟ ಅಲ್ಲೋಲಕಲ್ಲೋಲವೇ ಆಗಿದ್ದರೆ, ತೆಂಗಿನ ಮರ ನೆಲಕ್ಕುರುಳಿದೆ. ಬಳ್ಳಾರಿ, ರಾಯಚೂರು, ಕಲಬುರಗಿ ಮಾತ್ರವಲ್ಲ ಈ ಬಾರಿ ರಾಜ್ಯದ ಉದ್ದಗಲಕ್ಕೂ ಬಿಸಿಲು ಹೆಚ್ಚಾಗಿದೆ. ಈ ಬಿಸಿಲಬೇಗೆ ನಡುವೆ ಅಲ್ಲಲ್ಲಿ ಮಳೆ ಆಗ್ತಿದೆ. ಇವತ್ತು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಮಳೆ ಆರ್ಭಟಿಸಿದೆ.

ಹಾರಿಹೋದ ಶಾಲೆಯ ಹೆಂಚು

ಅದರಲ್ಲೂ ಜೋರುಗಾಳಿ ಇದ್ದಿದ್ರಿಂದ ಮೂಡಿಗೆರೆಯ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ಪ್ರೌಢಶಾಲೆಯ ಹೆಂಚುಗಳು ಪುಡಿಪುಡಿ ಆಗಿವೆ. ಹೆಂಚುಗಳು ಹಾರಿಹೋಗುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ಕಾಫಿನಾಡಿನಲ್ಲಿ ವರುಣನ ಅಬ್ಬರ: ಬಿರುಗಾಳಿ ಸಹಿತ ಧಾರಾಕಾರ ಮಳೆ, ಮೂಡಿಗೆರೆ ರಸ್ತೆಗಳು ಜಲಾವೃತ!

ಮೂಡಿಗೆರೆ ತಾಲೂಕಿನ ಬಿದರಹಳ್ಳಿಯಲ್ಲಿ ಬಿರುಗಾಳಿಗೆ ಕ್ಯಾಂಟೀನ್ ಮೇಲ್ಚಾವಣೆ ಹಾರಿಹೋಗಿದೆ. ತೆಂಗಿನ ಮರ ರಸ್ತೆಗೆ ಉರುಳಿದೆ. ಇನ್ನು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸುತ್ತಮುತ್ತ ಧಾರಾಕಾರವಾಗಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥವಾಗಿತ್ತು.

ಕಾರಿನ ಮೇಲೆ ಉರುಳಿದ ಮರ: ದಂಪತಿ ಬಚಾವ್‌!

ಮೂಡಿಗೆರೆಯ ಪರಿಮಳಮ್ಮ ದೇಗುಲ ಬಳಿ ಚಲಿಸುತ್ತಿದ್ದ ಕಾರ್ ಮೇಲೆ ಬೃಹತ್‌ ಮರ ಉರುಳಿ ಬಿದ್ದಿತ್ತು. ಕಾರಿನಲ್ಲಿದ್ದ ದಂಪತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ದಂಪತಿ ರಕ್ಷಣೆ ಮಾಡಿರುವ ಅಗ್ನಿಶಾಮಕ ಸಿಬ್ಬಂದಿ ಮರ ತೆರವು ಮಾಡಿದ್ದಾರೆ.

ಹಾಸನದಲ್ಲಿ ಸಿಡಿಲಿನ ಆರ್ಭಟ: ಐವರಿಗೆ ಗಾಯ!

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲೂ ಮಳೆ ಅಬ್ಬರಿಸಿದೆ. ದೀನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಐವರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ರೂಪಾ, ಲಕ್ಷ್ಮೀ, ಸುಮಿತ್ರಾ, ಜಯಮ್ಮ ಸೇರಿದಂತೆ ಐವರನ್ನ ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಲಿಕಲ್ಲು ಮಳೆ: ಮಾವು ಬೆಳೆಗಾರರು ಕಂಗಾಲು

ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ, ಧಾರವಾಡ ತಾಲೂಕಿನಲ್ಲಿ ವಾರದ ಹಿಂದೆ ಆಲಿಕಲ್ಲು ಮಳೆ ಆಗಿತ್ತು. ಥೇಟ್‌ ಕಾಶ್ಮೀರದಂತೆ ಬದಲಾಗಿತ್ತು. ಇದೇ ಆಲಿಕಲ್ಲು ಮಳೆ ಮಾವು ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ. ಇಬ್ಬನಿಯಿಂದ್ಲೇ ಹೂವು ಉದುರಿ ಹೋಗಿದ್ವು. ಅಳಿದುಳಿದಿದ್ದ ಮಾವು, ಆಲಿಕಲ್ಲು ಮಳೆಯಿಂದ ಸಾವಿರಾರು ಎಕರೆಯಲ್ಲಿನ ಮಾವು ಹಾಳಾಗಿದೆ.

ಇದನ್ನೂ ಓದಿ: ಧಾರಾವಾಡ: ಆಲಿಕಲ್ಲು ಮಳೆಗೆ ಉದುರಿದ ಮಾವು; ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಂಗಾಲಾದ ಅನ್ನದಾತ!

ಬೇಸಿಗೆಯಿಂದ ಬೆಂದು ಹೋಗುತ್ತಿರುವ ಜನರಿಗೆ ಒಂದ್ಕಡೆ ಮಳೆರಾಯ ತಂಪೆರೆದರೆ, ಮತ್ತೊಂದ್ಕಡೆ ಇದೇ ಮಳೆ ಮಾವು ಬೆಳೆಯನ್ನ ನೆಲದ ಪಾಲು ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ