AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯ ಹವಾಮಾನ: 26 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್; ಬೆಂಗಳೂರಲ್ಲಿ ಗುಡುಗು ಸಹಿತ ಮಳೆ

Karnataka Weather Tomorrow: ರಾಜ್ಯದಲ್ಲಿ ನಾಳೆಯೂ ವರುಣನ ಆರ್ಭಟ ಮುಂದುವರಿಯಲಿದ್ದು, 26 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರಲ್ಲೂ ಗುಡುಗು ಸಹಿತ ಸಣ್ಣ ಪ್ರಮಾಣದ ಮಳೆ ಆಗುವ ಸಾಧ್ಯತೆ ಇದ್ದರೆ, ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರದಲ್ಲಿ ಒಣಹವೆ ಅಥವಾ ಮೋಡ ಕವಿದ ವಾತಾವಣರ ಕಂಡುಬರುವ ನಿರೀಕ್ಷೆ ಇದೆ.

ನಾಳೆಯ ಹವಾಮಾನ: 26 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್; ಬೆಂಗಳೂರಲ್ಲಿ ಗುಡುಗು ಸಹಿತ ಮಳೆ
ಮಳೆ
ಪ್ರಸನ್ನ ಹೆಗಡೆ
|

Updated on:Oct 14, 2025 | 3:19 PM

Share

ಬೆಂಗಳೂರು, ಅಕ್ಟೋಬರ್​ 14: 26 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು, ರಾಜ್ಯದಲ್ಲಿ ನಾಳೆಯೂ ವರುಣನ (Weather Forecast ಆರ್ಭಟ ಮುಂದುವರಿಯಲಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟ, ಹಳೆ ಮೈಸೂರು, ಕರಾವಳಿ ಮತ್ತು ಘಟ್ಟ ಪ್ರದೇಶ ಸೇರಿ ವಿವಿಧೆಡೆ ಉತ್ತಮ ಮಳೆಯಾಗಲಿದೆ. ರಾಜಧಾನಿ ಬೆಂಗಳೂರಲ್ಲೂ ಗುಡುಗು ಸಹಿತ ಸಣ್ಣ ಪ್ರಮಾಣದ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ?

ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ್​, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ ಮತ್ತು ಹಾವೇರಿಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಗಾಳಿಯ ವೇಗ ಗಂಟೆಗೆ 30-40 ಕಿ.ಮೀ.ನಷ್ಟು ಇರಲಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರಲ್ಲೂ ಸಾಧಾರಣ ಮಳೆಯ ನಿರೀಕ್ಷೆ ಇದೆ. ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಹಾಸನ, ಮಂಡ್ಯ ಭಾಗದಲ್ಲೂ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರದಲ್ಲಿ ಒಣಹವೆ ಅಥವಾ ಮೋಡ ಕವಿದ ವಾತಾವಣರ ಕಂಡುಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಬದ್ಧ: ರೈತರಿಗಾಗಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಲಿರುವ ನಿರ್ಮಲಾ ಸೀತಾರಾಮನ್

ಬೆಂಗಳೂರಲ್ಲೂ ಸಣ್ಣ ಪ್ರಮಾಣದ ಮಳೆ ಆಗುವ ಸಾಧ್ಯತೆ ಇದೆ. ಶೇಕಡಾ 86ರಿಂದ 100ರಷ್ಟು ಮಳೆ ಆಗಬಹುದೆಂದು ಅಂದಾಜಿಸಲಾಗಿದ್ದು, 7-18 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದೆ. ಗಾಳಿಯ ವೇಗ ಗಂಟೆಗೆ 14-18 ಕಿ.ಮೀ.ನಷ್ಟು ಇರಲಿದೆ. ನಗರದ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್​ ಇರಲಿದ್ದು, 20 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:18 pm, Tue, 14 October 25

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಭಕ್ತರ ಅಸಮಾಧಾನ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಬೈಲಹೊಂಗಲದಲ್ಲಿ ವರುಣಾರ್ಭಟ: ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ನಷ್ಟ
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ: ರಾಜಣ್ಣ ಖಡಕ್ ಮಾತು
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್​​ ಗಾಂಧಿ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಮುಗಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಲ್ಯಾಡಲ್ ಸ್ಫೋಟ: 25 ಲಕ್ಷ ರೂ. ಪರಿಹಾರ ಘೋಷಿಸಿದ ಹೆಚ್​ಡಿ ಕುಮಾರಸ್ವಾಮಿ
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು