ಪ್ರತಿ ಕ್ವಿಂಟಾಲ್‌ ತೊಗರಿಗೆ 450 ಪ್ರೋತ್ಸಾಹಧನ ಘೋಷಿಸಿದ ರಾಜ್ಯ ಸರ್ಕಾರ

ಕರ್ನಾಟಕ ಸರ್ಕಾರವು 2024-25ನೇ ಸಾಲಿನಲ್ಲಿ ತೊಗರಿ ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ 450 ಪ್ರೋತ್ಸಾಹಧನ ಘೋಷಿಸಿದೆ. ಇದು ಕೇಂದ್ರ ಸರ್ಕಾರದ ಬೆಂಬಲ ಬೆಲೆ 7,550 ಜೊತೆಗೆ ಸೇರಿದೆ. ಈ ನಿರ್ಧಾರವು ರೈತರ ಬೇಡಿಕೆಯನ್ನು ಪರಿಗಣಿಸಿ ತೆಗೆದುಕೊಳ್ಳಲಾಗಿದೆ. ರಾಜ್ಯಾದ್ಯಂತ 400ಕ್ಕೂ ಹೆಚ್ಚು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಪ್ರತಿ ಕ್ವಿಂಟಾಲ್‌ ತೊಗರಿಗೆ 450 ಪ್ರೋತ್ಸಾಹಧನ ಘೋಷಿಸಿದ ರಾಜ್ಯ ಸರ್ಕಾರ
ಪ್ರತಿ ಕ್ವಿಂಟಾಲ್‌ ತೊಗರಿಗೆ 450 ಪ್ರೋತ್ಸಾಹಧನ ಘೋಷಿಸಿದ ರಾಜ್ಯ ಸರ್ಕಾರ
Edited By:

Updated on: Feb 08, 2025 | 8:43 PM

ಬೆಂಗಳೂರು, ಫೆಬ್ರವರಿ 08: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರತಿ ಕ್ವಿಂಟಲ್​ ತೊಗರಿಗೆ ರಾಜ್ಯ ಸರ್ಕಾರ 450 ಪ್ರೋತ್ಸಾಹಧನ ಘೋಷಣೆ ಮಾಡಿದೆ. ಆ ಮೂಲಕ ತೊಗರಿ ಬೆಳೆಗಾರರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರದಿಂದ ಗುಡ್‌ನ್ಯೂಸ್‌ ನೀಡಲಾಗಿದೆ. ಪ್ರೋತ್ಸಾಹಧನ ನೀಡುವುದಕ್ಕೆ ಆರ್ಥಿಕ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ.

2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್‌ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಕ್ವಿಂಟಾಲ್‌ಗೆ 450 ರೂ ಪ್ರೋತ್ಸಾಹಧನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಅವಶ್ಯವಿರುವ ಅನುದಾನವನ್ನು ಆವರ್ತ ನಿಧಿಯಲ್ಲಿ ಲಭ್ಯವಿರುವ ಮೊತ್ತದಿಂದ ಭರಿಸಲು ಆರ್ಥಿಕ ಇಲಾಖೆ ಕೂಡ ಸಹಮತಿಸಿದೆ.

ಇದನ್ನೂ ಓದಿ: ಐದು ತಿಂಗಳುಗಳಿಂದ ಬಿಡುಗಡೆಯಾಗದ ಕ್ಷೀರಸಿರಿ ಯೋಜನೆ ಪ್ರೋತ್ಸಾಹಧನ: ಧರಣಿಗೆ ಮುಂದಾದ ರೈತರು

ಇನ್ನೂ ಇತ್ತೀಚೆಗೆ ಸಚಿವ ಶಿವಾನಂದ ಪಾಟೀಲ್​ ಈ ಬಗ್ಗೆ ಮಾತನಾಡಿದ್ದು, ತೊಗರಿ ಬೆಳೆ ಕ್ವಿಂಟಲ್​ಗೆ ಹೆಚ್ಚುವರಿಯಾಗಿ 450 ರೂ. ಬೆಂಬಲ ಬೆಲೆ ನೀಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದರು. ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದೆ.

ರೈತರ ಬೇಡಿಕೆಯಂತೆ ಸ್ಪಂದಿಸಿ ಕ್ವಿಂಟಲ್​ಗೆ 450 ರೂಪಾಯಿ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿದೆ.  ತೊಗರಿ ಖರೀದಿಗೆ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಖರೀದಿ ಕೇಂದ್ರ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ತೊಗರಿ ಬೆಳೆಗಾರರು ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ್​ ಹೇಳಿದ್ದರು.

ಇದನ್ನೂ ಓದಿ: ಶೇ 46ರಷ್ಟು ಮೆಟ್ರೋ ಟಿಕೆಟ್ ದರ ಹೆಚ್ಚಿಸಿದ ಬಿಎಂಆರ್​ಸಿಎಲ್: ನಾಳೆಯಿಂದಲೇ ಪರಿಷ್ಕೃತ ದರ ಜಾರಿ

ಪ್ರಸಕ್ತ ವರ್ಷದಲ್ಲಿ ವಿಜಯಪುರ ಜಿಲ್ಲೆಯಲ್ಲಿ 10.25 ಲಕ್ಷ ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದೇ ಉದಾಹರಣೆಯಾಗಿದೆ. ಸದ್ಯ ತೊಗರಿ ಕಟಾವಿಗೆ ಬಂದಿದ್ದು ರಾಶಿ ಮಾಡಲಾಗುತ್ತಿದೆ. ಉತ್ತಮವಾಗಿ ಬೆಳೆದಿದ್ದ ತೊಗರಿ ಫಸಲು ಕಡಿಮೆ ಬರುತ್ತಿದೆ, ಹವಾಮಾನ ವೈಪರಿತ್ಯ ಹಾಗೂ ಕಳಪೆ ಗುಣಮಟ್ಟದ ಬೀಜಗಳ ಪೂರೈಕೆಯಿಂದ ಕಡಿಮೆ ಇಳುವರಿ ಬರುತ್ತಿದೆ. ಕಡಿಮೆ ಇಳುವರಿ ಸಂಕಷ್ಟದ ಮದ್ಯೆ ಇದೀಗ ದಿಢೀರನೆ ತೊಗರಿ ಬೆಲೆ ಕಡಿಮೆಯಾಗಿದೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.