ವಿನಾಯಕ ನಾಯ್ಕ್ ಹತ್ಯೆ ಕೇಸ್: ಬಂಧಿತರು ಬಾಯ್ಬಿಡುತ್ತಿದ್ದಂತೆ ಇತ್ತ ಬ್ಯುಸಿನೆಸ್ ಮ್ಯಾನ್​ ಆತ್ಮಹತ್ಯೆ

ಕಾರವಾರ ತಾಲೂಕಿನ ಹಣಕೋಣದಲ್ಲಿ ಸೆಪ್ಟೆಂಬರ್ 22 ರಂದು ಉದ್ಯಮಿ ವಿನಾಯಕ ನಾಯ್ಕ್ ಆಗಿತ್ತು. ಇದೀಗ ಈ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎನ್ನಲಾದ ಗೋವಾ ಮೂಲದ ಉದ್ಯಮಿ ಗುರುಪ್ರಸಾದ ಎಂಬಾತ ಗೋವಾದ ಮಾಂಡೋವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಪತ್ತೆಯಾದ ಮೃತದೇಹ ಗುರುಪ್ರಸಾದ ರಾಣೆದೆ ಎಂಬುವುದು ದೃಢವಾಗಿದೆ.  

ವಿನಾಯಕ ನಾಯ್ಕ್ ಹತ್ಯೆ ಕೇಸ್: ಬಂಧಿತರು ಬಾಯ್ಬಿಡುತ್ತಿದ್ದಂತೆ ಇತ್ತ ಬ್ಯುಸಿನೆಸ್ ಮ್ಯಾನ್​ ಆತ್ಮಹತ್ಯೆ
ವಿನಾಯಕ ನಾಯ್ಕ್ ಹತ್ಯೆ ಕೇಸ್: ಬಂಧಿತರು ಬಾಯ್ಬಿಡುತ್ತಿದ್ದಂತೆ ಇತ್ತ ಬ್ಯುಸಿನೆಸ್ ಮ್ಯಾನ್ ಆತ್ಮಹತ್ಯೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2024 | 7:50 PM

ಕಾರವಾರ, ಸೆಪ್ಟೆಂಬರ್​ 25: ನಗರದ ಹಣಕೋಣದಲ್ಲಿ ಉದ್ಯಮಿ (businessman) ವಿನಾಯಕ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದರು ಎನ್ನಲಾದ ಗೋವಾ ಮೂಲದ ಉದ್ಯಮಿ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಗುರುಪ್ರಸಾದ ರಾಣೆ ಮೃತ ಉದ್ಯಮಿ. ಗೋವಾದ ಮಾಂಡೋವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರವಾರ ತಾಲೂಕಿನ ಹಣಕೋಣದಲ್ಲಿ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 5:30ಕ್ಕೆ ಉದ್ಯಮಿ ವಿನಾಯಕ ನಾಯ್ಕ್​​ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಬರ್ಬರ್ ಹತ್ಯೆ ಮಾಡಿ ಹಂತಕರು ಪರಾರಿ ಆಗಿದ್ದರು. ಬಳಿಕ ಹಂತಕರಿಗಾಗಿ ಉತ್ತರ ಕನ್ನಡ ಪೊಲೀಸರು ಬಲೆ ಬಿಸಿದ್ದರು. ಅದರಂತೆಯೇ ನಿನ್ನೆ ಮೂವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಗಣೇಶ ಪೂಜೆಗೆ ಇಟ್ಟ ಹಣದ ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ

ಬಂಧಿತರು ಕೊಲೆಗೆ ಗುರುಪ್ರಸಾದ ರಾಣೆ ಸುಪಾರಿ ಕೊಟ್ಟಿದ್ದಾರೆ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. ಅತ್ತ ಉದ್ಯಮಿ ಗುರುಪ್ರಸಾದ ಹೆಸರು ಹೇಳುತ್ತಿದ್ದಂತೆ ಗೋವಾ, ಮುಂಬೈ, ದೆಹಲಿಯಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಕೆಲವೇ ನಿಮಿಷಗಳಲ್ಲಿ ಗೋವಾದ ಮಾಂಡೋವಿ ನದಿಯಲ್ಲಿ ಮೃತ ದೇಹ ಒಂದು ಪತ್ತೆಯಾಗಿದೆ. ಪತ್ತೆಯಾದ ಮೃತದೇಹ ಗುರುಪ್ರಸಾದ ರಾಣೆದೆ ಎಂಬುವುದು ದೃಢವಾಗಿದೆ.

ಗುರುಪ್ರಸಾದ ರಾಣೆ ಉದ್ಯಮಿ ವಿನಾಯಕ ನಾಯ್ಕ್ ಅವರನ್ನು ವೈಯಕ್ತಿಕ ಕಾರಣಕ್ಕೆ ಹತ್ತೆ ಮಾಡಿಸಿದ್ದಾರೆ ಎಂಬುವುದು ತಿಳಿದುಬಂದಿದೆ. ಬಂಧಿತ ಮೂವರ ಪೈಕಿ ಇಬ್ಬರೂ ಬಿಹಾರಿಗಳು ಹಾಗೂ ಓರ್ವ ಗುರುಪ್ರಸಾದ ಸ್ನೇಹಿತ ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಚಿತ್ತಾಕುಲ ಪೊಲೀಸ್​ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಹೆರಿಗೆಗೆ ಬಂದಿದ್ದ ಮಹಿಳೆ ಸಾವು: ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯ ಆರೋಪ

ದಾವಣಗೆರೆ: ಜಿಲ್ಲೆಯ ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳೆ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಹತ್ತು ದಿನಗಳ ಹಿಂದೆ ಹೆರಿಗೆಗೆ ಬಂದಿದ್ದ ಸುಚಿತ್ರಾ(23) ಮೃತ ಮಹಿಳೆ. ಸದ್ಯ ಸರ್ಕಾರಿ ಆಸ್ಪತ್ರೆ ಮುಂದೆ ಸುಚಿತ್ರಾ ಸಂಬಂಧಿಕರು ಧರಣಿ ನಡೆಸಿದ್ದಾರೆ.

ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ ಮೃತದೇಹದ ಗುರುತು ಪತ್ತೆ, ಪತಿ ಪೊಲೀಸ್ ವಶಕ್ಕೆ

ಸೆ.15ರಂದು ಜಗಳೂರು ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಬಳಿಕೆ ತೀವ್ರ ರಕ್ತಸ್ರಾವದಿಂದ ಬಳಲಿದ್ದ ಸುಚಿತ್ರಾ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸುಚಿತ್ರಾಗೆ ಹೆರಿಗೆ ಆಗಿದೆ. ಮಗುವಿಗೆ ಜನ್ಮ ನೀಡಿದ ಬಳಿಕ ಸುಚಿತ್ರಾ ಮೃತಪಟ್ಟಿದ್ದಾರೆ. ಜಗಳೂರಿನಲ್ಲಿ ವೈದ್ಯರು ವಿಳಂಬ ಮಾಡಿದ್ದೇ ಘಟನೆಗೆ ಕಾರಣ ಎಂದು ವೈದ್ಯ ಹಾಗೂ ಸಿಬ್ಬಂದಿ ವಿರುದ್ಧ ಆರೋಪ ಮಾಡಲಾಗಿದ್ದು, ಈ ಸಂಬಂಧ ಜಗಳೂರು ಠಾಣೆಗೆ ಸಂಬಂಧಿಕರು ದೂರು ನೀಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ