ಊಹಾಪೋಹಗಳಿಗೆ ತೆರೆ: ಚುನಾವಣಾ ಸಂಬಂಧಿ ಚರ್ಚೆಗಷ್ಟೇ ಸೀಮಿತವಾಯ್ತಾ ಕಾಂಗ್ರೆಸಿಗರ ಹೈವೋಲ್ಟೇಜ್​​ ಮೀಟಿಂಗ್​?

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆಗೆ ದೆಹಲಿಯಲ್ಲಿ ಹೈಕಮಾಂಡ್ ಹೈವೋಲ್ಟೇಜ್ ಸಭೆಯ ನಂತರ, ಕೇವಲ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಕುರಿತು ಮಾತ್ರ ಚರ್ಚೆಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಆ ಮೂಲಕ ಇಂದಿನ ಸಭೆಯಲ್ಲಾದರೂ ರಾಜ್ಯದಲ್ಲಿನ ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ತೆರೆ ಬೀಳಬಹುದೆಂಬ ಬೆಂಬಲಿಗರ ನಿರೀಕ್ಷೆ ಹುಸಿಯಾಗಿದೆ.

ಊಹಾಪೋಹಗಳಿಗೆ ತೆರೆ: ಚುನಾವಣಾ ಸಂಬಂಧಿ ಚರ್ಚೆಗಷ್ಟೇ ಸೀಮಿತವಾಯ್ತಾ ಕಾಂಗ್ರೆಸಿಗರ ಹೈವೋಲ್ಟೇಜ್​​ ಮೀಟಿಂಗ್​?
ಕಾಂಗ್ರೆಸಿಗರ ಜಂಟಿ ಸುದ್ದಿಗೋಷ್ಠಿ
Image Credit source: Tv9 Kannada
Edited By:

Updated on: May 26, 2026 | 6:31 PM

ನವದೆಹಲಿ, ಮೇ 26: ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)​​ ಅವರ ಜೊತೆಗಿನ ಸುದೀರ್ಘ ಸಭೆ ಬಳಿಕ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ  ಸಭೆ ಹಿಂದಿನ ಕಾರಣವನ್ನು ರಿವೀಲ್​​ ಮಾಡಿದ್ದಾರೆ. ರಾಜ್ಯ ನಾಯಕರಿಗೆ ಹೈಕಮಾಂಡ್​​ನಿಂದ ದಿಢೀರ್​​ ಬುಲಾವ್​​ ಬಂದಿದ್ದ ಹಿನ್ನೆಲೆ ನಾಯಕತ್ವ ಬದಲಾವಣೆ ಸೇರಿ ಸಚಿವ ಸಂಪುಟ ಪುನಾರಚನೆಯ ವಿಷಯ ಚರ್ಚೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಾಯಕರು ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.

ಮುಖ್ಯಾಂಶಗಳು

  • ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆಗಿನ ಹೈಕಮಾಂಡ್​​ ಸಭೆ ಅಂತ್ಯ
  • ಸಭೆ ಬಳಿಕ ಕಾಂಗ್ರೆಸ್​​ ನಾಯಕರಿಂದ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ
  • ರಾಜ್ಯಸಭೆ, ಪರಿಷತ್​​ ಚುನಾವಣೆ ಸಂಬಂಧ ಮಾತ್ರ ಚರ್ಚೆ ಎಂದ ನಾಯಕರು

ಸಭೆಯಲ್ಲೆ ಚರ್ಚೆಯಾಗಿದ್ದೇನು?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್​​ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​​ ಸಮ್ಮುಖದಲ್ಲಿ ಇವತ್ತು ದೆಹಲಿಯಲ್ಲಿ ಹೈವೋಲ್ಟೇಜ್​​ ಮೀಟಿಂಗ್​​ ನಡೆದಿತ್ತು. ಹೀಗಾಗಿ ವರಿಷ್ಠರು ಸದ್ಯ ಪಕ್ಷದಲ್ಲಿರುವ ಎಲ್ಲ ಗೊಂದಲಗಳಿಗೂ ತೆರೆ ಎಳೆಯಬಹುದೆಂಬ ನಿರೀಕ್ಷೆ ಇತ್ತು. ಆದರೆ ಸಭೆ ಬಗ್ಗೆ ಮಾಹಿತಿ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯಸಭೆ ಮತ್ತು ವಿಧಾನಪರಿಷತ್​ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಯಾವುದೇ ಗೊಂದಲ ಇಲ್ಲ. ಚುನಾವಣೆ ಸಂಬಂಧ ಮಾತ್ರ ಸಿಎಂ, ಡಿಸಿಎಂ ಜತೆ ಮಾತುಕತೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಕೈ ಕಾದಾಟ ದಿಲ್ಲಿಗೆ ಶಿಫ್ಟ್; ಸಿಎಂ-ಡಿಸಿಎಂ ಲೆಕ್ಕವೇ ಬೇರೆ, ಶಾಸಕರ ಲೆಕ್ಕಾಚಾರವೇ ಇನ್ನೊಂದು

ಪ್ರತಿಕ್ರಿಯೆ ನೀಡದ ಡಿಕೆಶಿ

ಇನ್ನು ಸಭೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರನ್ನು ಮಾಧ್ಯಮಗಳ ವರದಿಗಾರರು ಮಾತನಾಡಿಸಲು ಯತ್ನಿಸಿದರಾದರೂ ಡಿಕೆಶಿ ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ಕೈ ಮುಗಿದು ಅವರು ತೆರಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:08 pm, Tue, 26 May 26

Pramod Shastri G
Follow Us