AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಕೈ ಕಾದಾಟ ದಿಲ್ಲಿಗೆ ಶಿಫ್ಟ್: ಸಿಎಂ-ಡಿಸಿಎಂ ಲೆಕ್ಕವೇ ಬೇರೆ, ಶಾಸಕರ ಲೆಕ್ಕಾಚಾರವೇ ಇನ್ನೊಂದು

ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನ ಹೈಕಮಾಂಡ್ ಬುಲಾವ್ ಹೊತ್ತಿನಲ್ಲೇ ಕೆಪಿಸಿಸಿ ಸ್ಥಾನದ ಮೇಲೆ ಕಣ್ಣಿಟ್ಟಿರೋ ಸತೀಶ್​ ಜಾರಕಿಹೊಳಿ ತಮ್ಮದೇ ಆದ ತಂತ್ರಗಾರಿಕೆ ಮಾಡುತ್ತಿದ್ದಾರೆ. ಸಿಎಂ ಜೊತೆ ಒಂದಿಷ್ಟು ಆಪ್ತ ಸಚಿವರು ದಿಲ್ಲಿಗೆ ಹೋಗುತ್ತಿದ್ದರೆ, ಸಚಿವ ಸತೀಶ್ ಜಾರಕಿಹೊಳಿ ತಮ್ಮದೇ ಆದ ಲೆಕ್ಕಾಚಾರದಲ್ಲಿ ಪ್ರತ್ಯೇಕವಾಗಿ ದೆಹಲಿಗೆ ಭೇಟಿ ಕೊಟ್ಟಿದ್ದಾರೆ. ಇದಿಷ್ಟೇ ಅಲ್ಲ ಹೈಕಮಾಂಡ್​ ಬುಲಾವ್​ ಹಿನ್ನೆಲೆ ಸಚಿವ ಪ್ರಿಯಾಂಕ್ ಖರ್ಗೆ ಸಹ ದೆಹಲಿಯತ್ತ ಮುಖ ಮಾಡಿದ್ದಾರೆ.

ಕರ್ನಾಟಕ ಕೈ ಕಾದಾಟ ದಿಲ್ಲಿಗೆ ಶಿಫ್ಟ್: ಸಿಎಂ-ಡಿಸಿಎಂ ಲೆಕ್ಕವೇ ಬೇರೆ, ಶಾಸಕರ ಲೆಕ್ಕಾಚಾರವೇ ಇನ್ನೊಂದು
Karnataka Congress
ರಮೇಶ್ ಬಿ. ಜವಳಗೇರಾ
|

Updated on: May 25, 2026 | 10:13 PM

Share

ಬೆಂಗಳೂರು, (ಮೇ 25): ಸಿಎಂ ಹಾಗೂ ಡಿಸಿಎಂಗೆ ಹೈಕಮಾಂಡ್ (congress high command) ಬುಲಾವ್ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳಲ್ಲಿ ಚಟುವಟಿಕೆ ಗರಿಗೆದರಿದೆ.ಸಿಎಂ ಸಿದ್ದರಾಮಯ್ಯ, (Siddaramaiah) ಡಿಸಿಎಂ ಡಿಕೆ ಶಿವಕುಮಾರ್​ ಗೆ (DK Shivakumar) ಇರೋ ಲೆಕ್ಕಾಚಾರ ಬೇರೆ. ಆದ್ರೆ ಶಾಸಕರಿಗೆ ಇರೋ ಲೆಕ್ಕಾಚಾರವೇ ಬೇರೆ ಆಗಿದೆ. ನಾಯಕತ್ವ ಚರ್ಚೆ ಆಗಲಿ ಬಿಡಲಿ, ಸಚಿವ ಸಂಪುಟ ಪುನಾರಚನೆಗೆ (cabinet reshuffle) ಅವಕಾಶ ಕೊಡಬಹುದು ಅನ್ನೋ ಲೆಕ್ಕಾಚಾರದಲ್ಲಿ ಸದ್ಯ ಸಚಿವಾಕಾಂಕ್ಷಿಗಳು ಇದ್ದಾರೆ. ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡೋ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ 20ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಹಾರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮೀಟಿಂಗ್

ಹೈಕಮಾಂಡ್​ ಏನೂ ಸಿಎಂ, ಡಿಸಿಎಂಗೆ ಸುಖಾಸುಮ್ಮನೆ ಬುಲಾವ್ ಕೊಟ್ಟಿಲ್ಲ. ಕೆಲ ದಿನಗಳ ಹಿಂದೆಯೇ ದೆಹಲಿಯಲ್ಲಿ ಹೈಕಮಾಂಡ್​ ನಾಯಕರು ಹೈವೋಲ್ಟೇಜ್ ಸಭೆ ಮಾಡಿದ್ದಾರೆ. ಕರ್ನಾಟಕದ ವಿಚಾರವಾಗಿಯೇ ಚರ್ಚಿಸೋಕೆ ಅಂತಾನೇ ರಾಹುಲ್ ಗಾಂಧಿ, ವೇಣುಗೋಪಾಲ್ ಸಭೆ ಕರೆದಿದ್ರು. ರಾಜ್ಯ ರಾಜಕಾರಣದ ಬಗ್ಗೆ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಚರ್ಚೆ ಮಾಡಿಯೇ ಸಿಎಂ ಸಿದ್ದರಾಮಯ್ಯಗೆ ಬುಲಾವ್ ಕೊಡಲಾಗಿದೆ.

ಇದನ್ನೋ ನೋಡಿ: ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿಂದಿದೆ ರೋಚಕ ಸ್ಟೋರಿ

ಮಂಗಳವಾರ ಬೆಳಗ್ಗೆ 11 ಗಂಟೆಗೆ ಹೈಕಮಾಂಡ್ ನಾಯಕರು ಹೈವೋಲ್ಟೇಜ್ ಮೀಟಿಂಗ್ ನಡೆಸಲಿದ್ದಾರೆ. ದೆಹಲಿಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆಯಲಿದ್ದಯ, ಈ ಸಭೆಯಲ್ಲಿ AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭಾಗಿ ಸಾಧ್ಯತೆ ಇದೆ. ಸಭೆ ಬಳಿಕ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ಸಾಧ್ಯತೆಯೂ ಇದೆ. ಭೇಟಿ ವೇಳೆ ಸಂಪುಟ ಪುನಾರಚನೆಗೆ ಬಗ್ಗೆ ಪ್ರಸ್ತಾಪ ಸಾಧ್ಯತೆ ಇದೆ.

ಸಿಎಂ,ಡಿಸಿಎಂಗೆ ಮಾತ್ರವಲ್ಲ ಶಾಸಕರಿಗೂ ಮುಖ್ಯವಾದ ಸಭೆ

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕರಾದ ನರೇಂದ್ರ ಸ್ವಾಮಿ, ರಾಘವೇಂದ್ರ ಹಿಟ್ನಾಳ್, ಬಸವರಾಜ ಶಿವಣ್ಣನವರ, ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, MLCಗಳಾದ ಶರಣಗೌಡ ಬೈಯ್ಯಾಪುರ, ವಸಂತ್ ಕುಮಾರ್ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಹಾರಿದ್ದಾರೆ. ಸಚಿವ ಸಂಪುಟ ಪುನಾರಚನೆ ಆಗಬೇಕು ಎನ್ನುವ ಆಗ್ರಹ ಈಗಿನದ್ದು ಅಲ್ಲವೇ ಅಲ್ಲ. ಕಳೆದ 6 ತಿಂಗಳಿನಿಂದಲೂ ಆಗ್ರಹ ಕೇಳಿ ಬರ್ತಿದೆ. ಕೇವಲ ಸಿಎಂ ಭವಿಷ್ಯ ಮಾತ್ರ ಇಲ್ಲಿ ಮುಖ್ಯ ಆಗಿಲ್ಲ. ಸಚಿವ ಸಂಪುಟ ಪುನಾರಚನೆಯೂ ಮುಖ್ಯ ಆಗಿದೆ. ಹೀಗಾಗಿಯೇ ಸಿಎಂ ಜೊತೆ ಶಾಸಕರು ದೆಹಲಿಗೆ ತೆರಳಿದ್ದಾರೆ. ಇದರಿಂದ ನಾಳೆ (ಮೇ 26) ನಡೆಯೋ ಸಭೆ ಸಿಎಂ ದೃಷ್ಟಿಯಿಂದ ಎಷ್ಟು ಮಹತ್ವ ಆಗಿದ್ಯೋ? ಶಾಸಕರ ದೃಷ್ಟಿಯಿಂದಲೂ ಅಷ್ಟೇ ಮಹತ್ವ ಆಗಿದೆ. . ಇನ್ನೆರಡು ವರ್ಷಗಳೇ ಮಾತ್ರ ಇರುವುದು. ಈಗಲೇ ಸಚಿವ ಸ್ಥಾನ ಕೊಟ್ರೆ ಒಳ್ಳೆಯದು, ಮುಂದೆ ಕೊಟ್ರೆ ಪ್ರಯೋಜನ ಏನು ಅಂತಾ ಅಸಮಾಧಾನ ಹೊರಹಾಕುತ್ತಲೇ ದೆಹಲಿಗೆ ಹೋಗಿದ್ದಾರೆ. ಇದರಿಂದ ದೆಹಲಿಯಲ್ಲಿ ಮಂಗಳವಾರ ನಡೆಯೋ ಸಭೆ ಸಿಎಂ ದೃಷ್ಟಿಯಿಂದ ಎಷ್ಟು ಮಹತ್ವ ಆಗಿದ್ಯೋ? ಶಾಸಕರ ದೃಷ್ಟಿಯಿಂದಲೂ ಅಷ್ಟೇ ಮಹತ್ವ ಆಗಿದ್ದು, ಅಂತಿಮವಾಗಿ ಏನಾಗಲಿದೆ ಎನ್ನುವ ಕುತೂಹಲ ಕೆರಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜುಲೈ 27 ರಿಂದ ಆಗಸ್ಟ್ 02ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ಜುಲೈ 27 ರಿಂದ ಆಗಸ್ಟ್ 02ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!