AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಬ್ರೇಕ್ ಪಡೆದ ಮಳೆ; ಎರಡನೇ ದಿನದಾಟ ಆರಂಭ

India vs SL Galle Test Day 2: ಭಾರತ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ ಎರಡನೇ ದಿನದಾಟ ಮಳೆಯಿಂದಾಗಿ ವಿಳಂಬವಾಗಿ ಶುರುವಾಗಿದೆ. ನಿಗದಿತ ಸಮಯಕ್ಕೆ ಪಂದ್ಯ ಆರಂಭಿಸಲು ಮಳೆ ಅಡ್ಡಿಪಡಿಸಿತು. ಮೊದಲ ಸೆಷನ್ ಸಂಪೂರ್ಣ ರದ್ದಾಗಿ, ಎರಡನೇ ಸೆಷನ್‌ನ ಅಂತ್ಯಕ್ಕೂ ಮುನ್ನ ಆಟ ಮತ್ತೆ ಆರಂಭವಾಯಿತು. ನಿನ್ನೆ ಮೊದಲ ದಿನವೂ ಮಳೆಯಿಂದ ಸಂಪೂರ್ಣ ಆಟ ಸಾಧ್ಯವಾಗಿರಲಿಲ್ಲ. ಅಭಿಮಾನಿಗಳು ಪಂದ್ಯ ಮುಂದುವರಿಯುವುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.

IND vs SL: ಬ್ರೇಕ್ ಪಡೆದ ಮಳೆ; ಎರಡನೇ ದಿನದಾಟ ಆರಂಭ
Team India
ಪೃಥ್ವಿಶಂಕರ
|

Updated on:Aug 16, 2026 | 3:29 PM

Share

ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ನಡೆಯುತ್ತಿರುವ ಗಾಲೆ ಟೆಸ್ಟ್‌ ಪಂದ್ಯದ ಎರಡನೇ ದಿನದಾಟ ಕೊನೆಗೂ ಆರಂಭವಾಗಿದೆ. ಮಳೆಯಿಂದಾಗಿ ಎರಡನೇ ದಿನದಾಟವನ್ನು ನಿಗದಿತ ಸಮಯಕ್ಕೆ ಆರಂಭಿಸಲು ಸಾಧ್ಯವಾಗಲಿಲ್ಲ. ಮೊದಲ ದಿನವೂ ಮಳೆಯಿಂದಾಗಿ ಸಂಪೂರ್ಣ 90 ಓವರ್​ಗಳ ಆಟವನ್ನು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ದಿನದಾಟವನ್ನು ಬೇಗನೇ ಶುರು ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಆಟ ಬೆಳಿಗ್ಗೆ 9:45 ಕ್ಕೆ ಆರಂಭವಾಗಬೇಕಿತ್ತು. ಆದರೆ ಎರಡನೇ ದಿನದಂದು ಮಳೆ ಸುರಿದ ಕಾರಣದಿಂದ ಮೊದಲ ಸೆಷನ್ ಸಂಪೂರ್ಣವಾಗಿ ರದ್ದಾಯಿತು. ಇದೀಗ ಎರಡನೇ ಸೆಷನ್​ನ ಅಂತ್ಯಕ್ಕೂ ಮುನ್ನ ಆಟ ಮತ್ತೆ ಆರಂಭವಾಗಿದೆ.

39 ರನ್​ ಗಳಿಸಿ ಪಂತ್ ಔಟ್

288 ರನ್​ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಮೊದಲ ದಿನದಾಟವನ್ನು ಅಂತ್ಯಗೊಳಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದಂದು ತನ್ನ ಸ್ಕೋರ್​ಗೆ 46 ರನ್ ಸೇರಿಸುವಷ್ಟರಲ್ಲಿ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ಮೊದಲ ದಿನ 36 ಎಸೆತಗಳಲ್ಲಿ 27 ರನ್ ಕಲೆಹಾಕಿ ಅಜೇಯರಾಗಿ ಉಳಿದಿದ್ದ ರಿಷಭ್ ಪಂತ್, ಎರಡನೇ ದಿನ ತಮ್ಮ ಖಾತೆಗೆ 12 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. 62 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 39 ರನ್ ಬಾರಿಸಿದ ಪಂತ್, ದೊಡ್ಡ ಹೊಡೆತಕ್ಕೆ ಕೈಹಾಕಿ ಕ್ಯಾಚ್ ನೀಡಿದರು.

82 ರನ್​ಗೆ ರಾಹುಲ್ ಔಟ್

ಇನ್ನು ಮೊದಲ ದಿನದಂದು ಸ್ನಾಯು ಸೆಳೆತದಿಂದಾಗಿ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್​ಗೆ ಮರಳಿದ್ದ ಕೆಎಲ್ ರಾಹುಲ್, ಪಂತ್ ವಿಕೆಟ್ ಬಳಿಕ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಇಳಿದರು. ಆದರೆ ರಾಹುಲ್​ಗೆ ಎರಡನೇ ದಿನ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಮೊದಲ ದಿನ ಗಾಯಗೊಂಡು ನಿವೃತ್ತಿ ಹೊಂದುವುದಕ್ಕೂ ಮೊದಲು 162 ಎಸೆತಗಳಲ್ಲಿ 77 ರನ್​ಗಳ ಇನ್ನಿಂಗ್ಸ್ ಆಡಿದ್ದ ರಾಹುಲ್ ಎರಡನೇ ದಿನ 13 ಎಸೆತಗಳನ್ನು ಹೆಚ್ಚುವರಿಯಾಗಿ ಆಡಿ ತಮ್ಮ ಖಾತೆಗೆ 5 ರನ್ ಸೇರಿಸಲಷ್ಟೇ ಶಕ್ತರಾದರು. ಈ ಮೂಲಕ ರಾಹುಲ್ 175 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 82 ರನ್ ಬಾರಿಸಿ ಔಟಾದರು.

IND vs SL: ದೇವದತ್ ಪಡಿಕ್ಕಲ್ ಶತಕ, ರಾಹುಲ್ ಅರ್ಧಶತಕ; ಭಾರತಕ್ಕೆ ಮೊದಲ ದಿನದ ಗೌರವ

150 ರನ್ ಬಾರಿಸಿದ ಪಡಿಕ್ಕಲ್

ಮೊದಲ ದಿನದಂದು ಭಾರತದ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಆರಂಭಿಕ ಯಶಸ್ವಿ ಜೈಸ್ವಾಲ್ 32 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಶುಭ್​ಮನ್ ಗಿಲ್ ಅವರ ಇನ್ನಿಂಗ್ಸ್ ಕೇವಲ 16 ರನ್​ಗಳಿಗೆ ಅಂತ್ಯವಾಯಿತು. ಮೊದಲ ದಿನ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಎರಡನೇ ದಿನವೂ ತಮ್ಮ ಆಟವನ್ನು ಮುಂದುವರೆಸಿದ್ದು 150 ರನ್​ಗಳ ಗಡಿ ದಾಟಿದ್ದಾರೆ. ಪಡಿಕ್ಕಲ್ ಅವರ ಈ ಆಟದಿಂದಾಗಿ ತಂಡದ ಮೊತ್ತ 325 ರನ್​ಗಳ ಗಡಿ ದಾಟಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Sun, 16 August 26

Follow Us
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ