ಹೆಚ್ಡಿ ರೇವಣ್ಣಗೆ ಜಾಮೀನಾ, ಎಸ್ಐಟಿ ಕಸ್ಟಡಿಯಾ? ಇಂದೇ ನಿರ್ಣಾಯಕ ದಿನ
ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿರುವ ರೇವಣ್ಣ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಲಿದೆ. ಹೀಗಾಗಿ ರೇವಣ್ಣಗೆ ಇಂದು ನಿರ್ಣಾಯಕ ದಿನ ಆಗಿದೆ. ರೇವಣ್ಣಗೆ ಬೇಲ್ ಸಿಗುತ್ತಾ? ಮತ್ತೆ ಕಸ್ಟಡಿಗೆ ತೆಗೆದುಕೊಳ್ತಾರಾ? ಅಥವಾ ಜೈಲು ಪಾಲಾಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ಬೆಂಗಳೂರು, ಮೇ 8: ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜ್ಯನ್ಯ ಹಾಗೂ ಮಹಿಳೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna) ವಿರುದ್ಧ ದಿನ ದಿನಕ್ಕೂ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಎಸ್ಐಟಿ ಕಸ್ಟಡಿಯಲ್ಲಿರುವ ರೇವಣ್ಣ ವಿಚಾರಣೆ ಚುರುಕುಗೊಂಡಿದೆ. ಮಹಿಳೆ ಕಿಡ್ನ್ಯಾಪ್ (Kidnap Case) ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಮ್ಯಾರಾಥಾನ್ ಎನ್ಕ್ವರಿಯಲ್ಲಿ ವ್ಯಸ್ತರಾಗಿದ್ದಾರೆ. ಪ್ರಕರಣ ಸಂಬಂಧ ಮಾಜಿ ಸಚಿವ ರೇವಣ್ಣ ಹಾಗೂ ಆಪ್ತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಎಸ್ಐಟಿ ಕಸ್ಟಡಿಯಲ್ಲಿರುವ ರೇವಣ್ಣ ಜಾಮೀನಿಗೆ ಅವರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಸ್ಟಡಿಯಲ್ಲಿರೋ ವ್ಯಕ್ತಿಗೆ ಜಾಮೀನು ಕೊಡುವುದು ಹೇಗೆ ಅಂತ ನ್ಯಾಯಾಧೀಶರು ರೇವಣ್ಣ ಪರ ವಕೀಲರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ವಕೀಲರು ವಾದ ಮುಂದಿಟ್ಟಿದ್ದಾರೆ. ಆದರೂ ಈ ಬಗ್ಗೆ ಎಸ್‌ಐಟಿ ಪ್ರತಿಕ್ರಿಯಿಸಲಿ ಅಂತಾ ಎಸ್ಐಟಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು.
ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿರುವ ರೇವಣ್ಣ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಲಿದೆ. ಹೀಗಾಗಿ ರೇವಣ್ಣಗೆ ಇಂದು ನಿರ್ಣಾಯಕ ದಿನ ಆಗಿದೆ. ರೇವಣ್ಣಗೆ ಬೇಲ್ ಸಿಗುತ್ತಾ? ಮತ್ತೆ ಕಸ್ಟಡಿಗೆ ತೆಗೆದುಕೊಳ್ತಾರಾ? ಅಥವಾ ಜೈಲು ಪಾಲಾಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ರೇವಣ್ಣ ಹಾಗೂ ಬಾಬಣ್ಣನಿಂದ ಮಾಹಿತಿ ಕಲೆಹಾಕಿದ ಎಸ್ಐಟಿ
ಮತ್ತೊಂದು ಕಡೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಅಧಿಕಾರಿಗಳಿಗೆ ರೇವಣ್ಣ ಉತ್ತರವೇ ತಲೆ ಬಿಸಿ ತಂದಿದೆ. ಎಸ್ಐಟಿ ಅಧಿಕಾರಿಗಳು ಎಷ್ಟೇ ಪ್ರಶ್ನೆ ಕೇಳಿದರೂ, ರೇವಣ್ಣ ಮಾತ್ರ ಒಂದೇ ಉತ್ತರ ಕೊಡ್ತಿದ್ದಾರೆ. ಕಿಡ್ನಾಪ್ ಕೇಸ್‌ಗೂ ತನಗೂ ಸಂಬಂಧವೇ ಇಲ್ಲ. ಪದೇ ಪದೆ ಹೇಳಿದ್ದೇ ತಡ, ಕಿಡ್ನ್ಯಾಪ್ ಕೇಸ್‌ನ 2ನೇ ಆರೋಪಿ ಸತೀಶ್ ಬಾಬಣ್ಣನನ್ನು ಒಟ್ಟಿಗೆ ಕೂರಿಸಿ ಎಸ್ಐಟಿ ವಿಚಾರಣೆ ನಡೆಸಿ, ಪ್ರಕರಣ ಸಂಬಂಧ ಒಂದಿಷ್ಟು ಮಾಹಿತಿ ಕಲೆ ಹಾಕಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ: 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿದ ಇಂಟರ್ ಪೋಲ್
ರೇವಣ್ಣಗೆ ಸಾಲು ಪ್ರಶ್ನೆ
ವಿಚಾರಣೆ ವೇಳೆ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಪ್ರಶ್ನೆಗಳು ಸುರಿಮಳೆಗೈದಿದ್ದಾರೆ. ಸತೀಶ್ ನಿಮಗೆ ಎಷ್ಟು ವರ್ಷದಿಂದ ಪರಿಚಯ ಇದೆ. ಸತೀಶ್ಗೆ ನೀವು ಸಂತ್ರಸ್ತೆಯನ್ನು ಕರೆದುಕೊಂಡು ಬರಲು ಹೇಳಿಲ್ವಾ. ಕಿಡ್ನ್ಯಾಪ್ ಯಾಕೆ ಮಾಡಿಸಿದ್ದು. ಕಿಡ್ನ್ಯಾಪ್ ಹಿಂದೆ ಏನೆಲ್ಲಾ ಪ್ಲ್ಯಾನ್ ಇತ್ತು. ಸಂತ್ರಸ್ತ ಮಹಿಳೆ ನಿಮ್ಮ ಮನೆಯಲ್ಲಿ ಯಾವಗಿನಿಂದ ಕೆಲಸ ಮಾಡ್ತಿದ್ದರು. ಯಾವಾಗ ಕೆಲಸ ಬಿಟ್ಟರು ಎಂದೆಲ್ಲಾ ಪ್ರಶ್ನೆ ಕೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ